ಕನ್ನಡಪ್ರಭ ವಾರ್ತೆ ಹುಣಸಗಿ
ವಿಜಯದಶಮಿ ಉತ್ಸವದ ಅಂಗವಾಗಿ ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯದಶಮಿ ಹಬ್ಬವು ಧರ್ಮ ಮತ್ತು ವಿಜಯದ ಸಂಕೇತವಾಗಿದ್ದು, ಧರ್ಮ ರಕ್ಷಣೆಗಾಗಿ ತಾಯಿ ದುರ್ಗಾಮಾತೆಯಾಗಿ ಅವತರಿಸಿದ್ದು ಪುರಾಣಗಳ ಮೂಲಕ ತಿಳಿದು ಬರುತ್ತದೆ ಎಂದರು.
ಶತಮಾನಗಳಿಂದಲೂ ಭಾರತದ ಮೇಲೆ ದಾಳಿ ನಡೆಯುತ್ತಾ ಬಂದಿದ್ದರೂ ಕೂಡಾ ಭಾರತ ತನ್ನ ಸಂಸ್ಕೃತಿಯ ಮೂಲಕ ಮತ್ತೆ ತಲೆ ಎತ್ತಿ ನಿಲ್ಲುತ್ತಾ ಬಂದಿದೆ. ಆದ್ದರಿಂದ ಹಿಂದಿನ ಇತಿಹಾಸವನ್ನು ನಮ್ಮ ಯುವಕರು ತಿಳಿಸಿಕೊಳ್ಳಬೇಕು. ಎಲ್ಲ ಭಾರತೀಯರಿಗೂ ಭಾರತ ಮಾತೆಯೇ ತಾಯಿಯಾಗಿದ್ದಾಳೆ. ಆ ತಾಯಿಯ ಮಕ್ಕಳು ಎಲ್ಲರೂ ಸಮಾನವಾಗಿದ್ದು, ಈ ದೇಶ ಪ್ರೇಮ ಮೂಡಿಸುವ ಕಾರ್ಯ ಸಂಘದಿಂದ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ ಎಂದರು.ನಿತ್ಯ ಶಾಖೆಯಲ್ಲಿ ನಡೆಯುವುದು ಭಾರತ ಮಾತೆಯ ಗುಣಗಾನ. ದೇಶದ ಉಳಿವಿಗಾಗಿ ಪ್ರತಿಯೊಬ್ಬ ಭಾರತೀಯರೂ ಸ್ವಚ್ಚ ಸುಂದರ ಮತ್ತು ಪ್ಲಾಷ್ಟಿಕ್ ಮುಕ್ತ ಜೀವನದತ್ತ ಹೆಜ್ಜೆ ಹಾಕಿದಾಗ ಮಾತ್ರ ದೇಶದ ನಾಗರಿಕರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಪಂಚ ಸೂತ್ರಗಳ ಕುರಿತು ತಿಳಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಯುಕೆಪಿ ಕ್ಯಾಂಪಿನ ನಿಲಕಂಠೇಶ್ವರ ದೇವಸ್ಥಾನದವರೆಗೂ ಪಥಸಂಚಲನ ನಡೆಯಿತು. ಮಾರ್ಗದಲ್ಲಿ ವರ್ತಕರು ಹೂ ಹಾಕಿದರು. ಪ್ರಮುಖ ವೃತ್ತಗಳಲ್ಲಿ ರಂಗೋಲಿ ಬಿಡಿಸಿ ನಾಯಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿತ್ತು.