ರಂಗಾಪುರದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವ ಸಂಭ್ರಮ

KannadaprabhaNewsNetwork |  
Published : Oct 07, 2025, 01:03 AM IST
ರಂಗಾಪುರದಲ್ಲಿ ಆರ್‌ಎಸ್‌ಎಸ್ ಶತಾಬ್ಧಿ ಸಂಭ್ರಮಾಚರಣೆ | Kannada Prabha

ಸಾರಾಂಶ

ತಿಪಟೂರು: ತಾಲೂಕಿನ ರಂಗಾಪುರ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವದ ಸಂಭ್ರಮದೊಂದಿಗೆ ವಿಜಯದಶಮಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ತಿಪಟೂರು: ತಾಲೂಕಿನ ರಂಗಾಪುರ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವದ ಸಂಭ್ರಮದೊಂದಿಗೆ ವಿಜಯದಶಮಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳು ಆತ್ಮಸೈರ್ಯವನ್ನು ಹೆಚ್ಚಿಸುತ್ತದೆ. ಸಂಘವನ್ನು ರಾಜಕೀಯವಾಗಿ ನೋಡಬಾರದು, ರಾಜಕೀಯವೇ ಬೇರೆ ಸಂಘದ ಚಟುವಟಿಕೆಗಳೇ ಬೇರೆಯಾಗಿದೆ. ಹಿಂದೂ ಧರ್ಮವನ್ನು, ಭಾರತ ದೇಶವನ್ನು ರಕ್ಷಣೆ ಮಾಡುವ ಕೆಲಸಮಾಡುತ್ತಾ ಒಗ್ಗೂಡಿಸುವ ಕೆಲಸವನ್ನು ಸಂಘವು ಮಾಡುತ್ತ ಬರುತ್ತಿದೆ. ಇಂದಿನ ಯುವಕರು ರಾಜಕೀಯ ಪ್ರೇರಣೆಗೆ ಅಲ್ಲದೆ, ರಾಷ್ಟ್ರದ ರಕ್ಷಣೆ, ದೇಶ ಸೇವೆ ಮಾಡಲು, ಧರ್ಮವನ್ನು ಕಾಪಾಡಲು ವ್ಯವಸ್ಥಿತವಾಗಿ ಸೇವೆ ಮಾಡಬೇಕು. ಸಂಘವನ್ನು ಸಂಘಟನೆಯ ಮೂಲಕ ಸಧೃಢವಾಗಬೇಕು ಎಂದು ತಿಳಿಸಿದರು.

ನೊಣವಿನಕೆರೆಯಲ್ಲಿ ಸಂಘದ ಜಿಲ್ಲಾ ಕಾರ್ಯವಾಹಕ ರವೀಂದ್ರ.ಜಿ. ತಗ್ಗಿನಮನಿ ಮಾತನಾಡಿ ಸಂಘವು ನೂರು ವರ್ಷ ತುಂಬಾ ಸುಲಭವಾಗಿ ಬಂದಿಲ್ಲ. ತುಂಬಾ ಕಷ್ಟಕರ ಹೆಜ್ಜೆಗಳನ್ನು ಇಡುತ್ತಾ ಎಷ್ಟೋ ಸ್ವಯಂಸೇವಕರು ರಾಷ್ಟ್ರದ ಉದ್ಧಾರಕ್ಕಾಗಿ ತಮ್ಮ ಜೀವವನ್ನೇ ಅರ್ಪಣೆ ಮಾಡಿದ್ದಾರೆ. ಸಂಘದ ಸ್ವಯಂ ಸೇವಕರು ನಿಸ್ವಾರ್ಥ ಸೇವೆಯಿಂದ ರಾಷ್ಟ್ರ ಕಟ್ಟುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಎಸ್.ಶೇಷ್ಠನಾಥ ವಹಿಸಿದ್ದು, ಹೋಬಳಿ ಸಹ ಕಾರ್ಯವಾಹರು ಶರತ್. ಸಂತೋಷ್, ರಾಜಶೇಖರ್, ಶಂಕರಮೂರ್ತಿ, ಜಯಣ್ಣ, ಮೈಲಾರೇಶ್ವರ, ಎನ್.ಎಂ.ವಿಕಾಸ್, ರಂಜಿತ್, ಪವನ್, ಪ್ರಕಾಶ್ ಮಧುಸೂದನ್, ತೇಜಸ್ ಇದ್ದರು.ತಾಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ನಗರದ ಕೆಲವು ಭಾಗಗಳಲ್ಲಿ ಸ್ವಯಂ ಸೇವಕರು ಸಂಘದ ಗಣವೇಷವನ್ನು ಧರಿಸಿ ಸಂಘದ ಹಿರಿಯ ಕಾರ್ಯಕರ್ತರಿಗೆ ಗೌರವಿಸಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಮಗಳೂರು ಗಿರಿಧಾಮಗಳಲ್ಲಿ ಪ್ರವಾಸಿಗರ ಕಾರುಬಾರು
ನಾಲ್ಕೈದು ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ : ಡಿಕೆಶಿ