ಆರ್‌ಎಸ್‌ಎಸ್‌ ಶತಮಾನೋತ್ಸವ: ಮದ್ದೂರಿನಲ್ಲಿ ಪಥಸಂಚಲನ

KannadaprabhaNewsNetwork |  
Published : Oct 19, 2025, 01:00 AM IST
18ಕೆಎಂಎನ್‌ಡಿ-23ಆರ್‌ಎಸ್‌ಎಸ್‌  ಶತಮಾನೋತ್ಸವದ ಪ್ರಯುಕ್ತ ಆರ್‌ಎಸ್‌ಎಸ್‌ ಸ್ವಯಂಸೇವಕರು ಮದ್ದೂರಿನಲ್ಲಿ ಪಥಸಂಚಲನ ನಡೆಸಿದರು. | Kannada Prabha

ಸಾರಾಂಶ

ಮದ್ದೂರಿನಲ್ಲಿ ಆರ್ ಎಸ್ ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ಪೇಟೆ ಬೀದಿಯ ಮಸೀದಿ ಮತ್ತು ದರ್ಗಾಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿ ಪಥಸಂಚಲನ ಪಟ್ಟಣದಲ್ಲಿ ಶುಕ್ರವಾರ ಸಡಗರ ಸಂಭ್ರಮದಿಂದ ನೆರವೇರಿತು. ಭಾರತ್ ಮಾತಾ ಕಿ ಜೈ ಎಂಬ ಘೋಷ ವಾಕ್ಯದೊಂದಿಗೆ ನೂರಾರು ಸ್ವಯಂಸೇವಕರು ಗಣೇವೇಷದೊಂದಿಗೆ ಪಾಲ್ಗೊಳ್ಳುವ ಮೂಲಕ ದೇಶಾಭಿಮಾನ ಮೆರೆದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಶತಾಬ್ಧಿ ಪಥಸಂಚಲನ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಆವರಣದಿಂದ ತೆರೆದ ಜೀಪಿನಲ್ಲಿ ಭಗವಾಧ್ವಜದ ಮೆರವಣಿಗೆಯೊಂದಿಗೆ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ನಂತರ ಕೋಟೆ ಬೀದಿ, ಪೇಟೆ ಬೀದಿ , ಲೀಲಾವತಿ ಬಡಾವಣೆ ಮೂಲಕ ತಾಲೂಕು ಕ್ರೀಡಾಂಗಣದವರೆಗೆ ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಗಣವೇಷಧಾರಿಗಳಿಗೆ ರಸ್ತೆ ಇಕ್ಕೆಲಗಳಲ್ಲಿ ನೆರೆದಿದ್ದ ವರ್ತಕರು ಮತ್ತು ಸಾರ್ವಜನಿಕರು ತಮ್ಮ ಅಂಗಡಿಗಳ ಮುಂದೆ ರಂಗೋಲಿ ಬಿಡಿಸಿ ಪುಷ್ಪವೃಷ್ಟಿ ಗೈದು ಚಪ್ಪಾಳೆ ತಟ್ಟಿ ದೇಶಾಭಿಮಾನಕ್ಕೆ ಹುರಿದುಂಬಿಸಿದರು. ಪಥ ಸಂಚಲನದಲ್ಲಿ ಮನ್ಮುಲ್ ನಿರ್ದೇಶಕ ಎಸ್. ಪಿ. ಸ್ವಾಮಿ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಮಿಯಾನ ಗುರುಸ್ವಾಮಿ, ವಕೀಲ ಪಿ.ಮಲ್ಲೇಶ್, ಸಿ.ಕೆ. ಸತೀಶ್, ಕೆ. ಟಿ.ನವೀನ , ವೀರಭದ್ರ ಸ್ವಾಮಿ, ಮಧು, ಮಧುಕುಮಾರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸ್ವಯಂಸೇವಕರು ಪಾಲ್ಗೊಂಡಿದ್ದರು.

ಮಸೀದಿ, ದರ್ಗಾಗೆ ಭದ್ರತೆ:

ಮದ್ದೂರಿನಲ್ಲಿ ಆರ್ ಎಸ್ ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ಪೇಟೆ ಬೀದಿಯ ಮಸೀದಿ ಮತ್ತು ದರ್ಗಾಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಮದ್ದೂರಿನಲ್ಲಿ ನಡೆದ ಆರ್ ಎಸ್ ಎಸ್ ಪಥ ಸಂಚಲನದ ಹಿನ್ನೆಲೆಯಲ್ಲಿ ಜಿಲ್ಲಾಪೊಲೀಸ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ , ಮಂಡ್ಯ ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಆರ್‌ಎಸ್‌ಎಸ್‌ಗೆ ನಿರ್ಬಂಧಕ್ಕೆ ಯತ್ನಿಸಿದರೆ ಕಾಂಗ್ರೆಸ್‌ಗೆ ತಿರುಗುಬಾಣ:

ಮದ್ದೂರು: ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಆರ್ ಎಸ್ ಎಸ್ ಅನ್ನು ನಿರ್ಬಂಧ ಮಾಡಲು ಹೊರಟರೆ ಇದು ಸರ್ಕಾರಕ್ಕೆ ತಿರುಗುಬಾಣವಾಗುತ್ತದೆ ಎಂದು ಮನ್ಮುಲ ನಿರ್ದೇಶಕ, ಬಿಜೆಪಿ ಮುಖಂಡ ಎಸ್. ಪಿ.ಸ್ವಾಮಿ ಎಚ್ಚರಿಸಿದರು.

ಪಟ್ಟಣದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಬಳಿ ಶನಿವಾರ ಆರ್ ಎಸ್ ಎಸ್ ಶತಮಾನೋತ್ಸವದ ಅಂಗವಾಗಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶಭಕ್ತಿ, ಶಿಸ್ತು, ತಾಳ್ಮೆ ಮತ್ತು ಸಮಾಜ ಸೇವೆ ಎಂಬುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಿಸುತ್ತದೆ. ಕಾಂಗ್ರೆಸ್ ಪಕ್ಷ ಸಂಘವನ್ನು ನಿರ್ಬಂಧ ಮಾಡಲು ಹೊರಟರೆ ತಿರುಗುಬಾಣವಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕಿಡಿ ಕಾರಿದರು. ಭಾರತೀಯರ ಪ್ರತಿ ಮನೆಯಲ್ಲೂ ಸ್ವಯಂಸೇವಕರಿದ್ದಾರೆ. ಅದರಲ್ಲೂ ಹಿಂದುಗಳ ವಿರುದ್ಧ ಈ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಮತ್ತು ಕುತಂತ್ರಗಳನ್ನು ಮಾಡಿತ್ತು. ಆದರೆ ಸಂಘವನ್ನು ನಿರ್ಬಂಧ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ ಎಂದರು.

ಕಾಂಗ್ರೆಸ್ ಭಯಪಡಿಸಿದರೆ ಹಿಂದುಗಳು ಹೆದರುವುದಿಲ್ಲ, ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಎಸ್.ಪಿ.ಸ್ವಾಮಿ ತಿರುಗೇಟು ನೀಡಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ