ಕನಕಪುರದಲ್ಲಿ ಆರ್‌ಎಸ್‌ಎಸ್‌ ಆಕರ್ಷಕ ಪಥಸಂಚಲನ

KannadaprabhaNewsNetwork |  
Published : Oct 13, 2025, 02:00 AM IST
ಕೆ ಕೆ ಪಿ ಸುದ್ದಿ 01:ನಗರದಲ್ಲಿ ವಿಜೃಂಭಣೆಯಿಂದ ಜರುಗಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ.  | Kannada Prabha

ಸಾರಾಂಶ

ಪಥಸಂಚಲನ ಸಾಗಿದ ರಸ್ತೆಯುದ್ದಕ್ಕೂ ಸಾರ್ವಜನಿಕರು ರಂಗೋಲಿ ಹಾಕಿ ತಾಯಿ ಭಾರತಾಂಬೆಯ ಪೋಟೋ ಗಳನ್ನು ಇಟ್ಟು ಪುಷ್ಪವೃಷ್ಟಿ ಗೈದು ಸ್ವಯಂ ಸೇವಕರನ್ನು ಸ್ವಾಗತಿಸಿ ಭಾಗ್ವಾಧ್ವಜಕ್ಕೆ ನಮಿಸಿದರು.

ಕನಕಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿ ಅಂಗವಾಗಿ ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ನಗರದ ಕೇಸರಿ ಶಾಖೆ ಹಾಗೂ ವಿವೇಕಾನಂದ ಶಾಖೆ ಸೇರಿದಂತೆ ನಗರ ಮತ್ತು ಗ್ರಾಮಾಂತರ ಶಾಖೆಗಳಿಂದ ಆಗಮಿಸಿದ್ದ ಸಾವಿರಾರು ಗಣವೇಷಧಾರಿ ತರುಣರು ಘೋಷ್ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಭಾಗ್ವಾಧ್ವಜ ಹಿಡಿದು ಒಂದು ತಂಡ ನಗರದ ಮಾನಸ ಶಾಲೆ ರಸ್ತೆ ಮೂಲಕ ಪೈಪ್ ಲೈನ್ ರಸ್ತೆಯಲ್ಲಿ ಸಾಗಿ ಧರ್ಮರಾಯ ಆರ್ಯನ್ ವರ್ಕ್ ಷಾಪ್ ಮೂಲಕ ಹಲಸಿನ ಮರದ ದೊಡ್ಡಿ ಮುಖಾಂತರ ಕೋಟೆ ಭಾಗದ ಮೂಲಕ ಚನ್ನಬಸಪ್ಪ ವೃತ್ತಕ್ಕೆ ಸಾಗಿತು.ಮತ್ತೊಂದು ತಂಡ ವಿವೇಕಾನಂದ ಬಡಾವಣೆ ಮೂಲಕ ಹೊರಟುಮೇಗಳ ಬೀದಿ, ಬಾಣಂತಮಾರಮ್ಮ ದೇವಾಲಯ ರಸ್ತೆ ಮೂಲಕ ಎಂ.ಜಿ ರಸ್ತೆಯಲ್ಲಿ ಸಾಗಿ ಚನ್ನಬಸಪ್ಪ ವೃತ್ತದಲ್ಲಿ ಎರಡು ತಂಡಗಳು ಒಂದೇ ಸಮಯಕ್ಕೆ ಬಂದು ಸಂಗಮವಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಈ ವೇಳೆ ತಾಲೂಕಿನ ಪ್ರಮುಖ ಮಠಗಳ ಸ್ವಾಮೀಜಿಗಳು ಹಾಜರಿದ್ದು ಭಾಗ್ವಾಧ್ವಜಕ್ಕೆ ಪುಷ್ಪವೃಷ್ಟಿ ಸುರಿಸಿ ನಮನ ಸಲ್ಲಿಸಿದರು.

ಪಥಸಂಚಲನ ಸಾಗಿದ ರಸ್ತೆಯುದ್ದಕ್ಕೂ ಸಾರ್ವಜನಿಕರು ರಂಗೋಲಿ ಹಾಕಿ ತಾಯಿ ಭಾರತಾಂಬೆಯ ಪೋಟೋ ಗಳನ್ನು ಇಟ್ಟು ಪುಷ್ಪವೃಷ್ಟಿ ಗೈದು ಸ್ವಯಂ ಸೇವಕರನ್ನು ಸ್ವಾಗತಿಸಿ ಭಾಗ್ವಾಧ್ವಜಕ್ಕೆ ನಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಥಸಂಚಲನ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ