ಕನ್ನಡಪ್ರಭ ವಾರ್ತೆ ರಾಮದುರ್ಗ
ಪಟ್ಟಣದ ಬಸವೇಶ್ವರ ಕಾಲೇಜು ಆವರಣದಿಂದ ಹೊರಟ ಗಣವೇಷಧಾರಿಗಳು ಸರ್ಕಾರಿ ಆಸ್ಪತ್ರೆಯ ಹತ್ತಿರದ ಹುತಾತ್ಮ ವೃತ್ತ, ಹಳೆಪೊಲೀಸ್ ಠಾಣೆ, ಅಂಬೇಡ್ಕರ್ ಮಾರ್ಗ ಜುನಿಪೇಠ, ಸಿದ್ಧರಾಮೇಶ್ವರ ನಗರ, ನೇಕಾರ ಪೇಟೆ, ಬನಶಂಕರಿ ದೇವಸ್ಥಾನ, ಗೊಂಬಿ ಗುಡಿ, ತೇರಬರ್ರ್ ಜುನಿಪೇಟ ರೇಣುಕಾಚಾರ್ಯ ವೃತ್ತದ ಮೂಲಕ ಬಸವ ಮಾರ್ಗದಿಂದ ಬಸವೇಶ್ವರ ಶಾಲಾ ಮೈದಾನದಲ್ಲಿ ಮುಕ್ತಾಯವಾಯಿತು.
ಸಾವಿರಾರು ಗಣವೇಷಧಾರಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ತೆರದ ವಾಹನದಲ್ಲಿ ಭಗವಾಧ್ವಜ ಮತ್ತು ಸಂಘ ಸಂಸ್ಥಾಪಕ ಭಾವಚಿತ್ರ ಇಡಲಾಗತ್ತು. ಪಥಸಂಚಲನ ಸಾಗುವ ಮಾರ್ಗದ ರಸ್ತೆಗಳಲ್ಲಿ ರಂಗೋಲಿ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು. ರಸ್ತೆಯುದ್ಧಕ್ಕೂ ಜನರು ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತು ಪಥಸಂಚಲನ ಬೀಳ್ಕೊಟ್ಟರು.ಬಸವೇಶ್ವರ ಆಟದ ಮೈದಾನದಲ್ಲಿ ಬೌದ್ಧಿಕ ಸಮಾರಂಭ ಜರುಗಿತು. ಸಾವಿರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.