ಹೊಸಪೇಟೆ: ಆರೆಸ್ಸೆಸ್ ಕುರಿತು 23 ದೇಶಗಳಲ್ಲಿ ಪ್ರಚಾರದಲ್ಲಿ ತೊಡಗಿರುವ ಪ್ರಮುಖ ಪ್ರಚಾರಕರು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ಬುಧವಾರ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ವಿಜಯ ವಿಠಲ ದೇವಸ್ಥಾನ ಸೇರಿದಂತೆ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿದರು.
ಈ ವೇಳೆ ಆನೆಗೊಂದಿ ರಾಜವಂಶಸ್ಥ ಶ್ರೀಕೃಷ್ಣದೇವರಾಯ ಸೇರಿದಂತೆ ಸ್ಥಳೀಯ ಪ್ರಮುಖ ಕಾರ್ಯಕರ್ತರು ಇದ್ದರು. ಗೈಡ್ ಗಂಗಾಧರ ಹಂಪಿ ಸ್ಮಾರಕಗಳ ಕುರಿತು ಮಾಹಿತಿ ನೀಡಿದರು.
ಹಂಪಿ ಸಮೀಪದ ಆನೆಗುಂದಿಯಲ್ಲಿ ಬುಧವಾರದಿಂದ ನಡೆಯುತ್ತಿರುವ ಮೂರು ದಿನಗಳ ಚಿಂತನ ಮಂಥನ ಸಭೆಯಲ್ಲಿ ಪಾಲ್ಗೊಳ್ಳಲು ಆರೆಸ್ಸೆಸ್‌ನ ಪ್ರಮುಖರು ಆಗಮಿಸಿದ್ದಾರೆ. ಹೈದರಾಬಾದ್‌ನ ಶಿಬಿರದ ಬಳಿಕ ಈಗ ಶಿಬಿರ ನಡೆಯುತ್ತಿದೆ. ಅಮೆರಿಕ ಸೇರಿದಂತೆ 23 ದೇಶಗಳಲ್ಲಿ ಇವರು ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಆರೆಸ್ಸೆಸ್ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಶಿಬಿರ ನಡೆಸಲಾಗುತ್ತಿದೆ ಎಂದು ಆರೆಸ್ಸೆಸ್‌ನ ಸ್ಥಳೀಯ ಮುಖಂಡರೊಬ್ಬರು ತಿಳಿಸಿದರು.ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ಬುಧವಾರ ಹಂಪಿಯ ಸ್ಮಾರಕಗಳಿಗೆ ಆರೆಸ್ಸೆಸ್ ಕುರಿತು 23 ದೇಶಗಳಲ್ಲಿ ಪ್ರಚಾರದಲ್ಲಿ ತೊಡಗಿರುವ ಪ್ರಮುಖರು ಭೇಟಿ ನೀಡಿದರು.