ಭಟ್ಕಳ: ಪಟ್ಟಣದಲ್ಲಿ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ(ಆರ್‌ಎಸ್‌ಎಸ್) ವಿಜಯದಶಮಿ ಅಂಗವಾಗಿ ಆಕರ್ಷಕ ಪಥಸಂಚಲನ ಮತ್ತು ಸಭೆ ನಡೆಯಿತು.
100 ವರ್ಷದ ಹಿಂದೆ ಹುಟ್ಟಿದ ಸಂಘದ ತತ್ವಧಾರೆ ಇಂದು 40 ದೇಶಗಳಲ್ಲಿ ವಿಸ್ತಾರ ಆಗುತ್ತಿದೆ. ಸಂಘದ ಕಾರ್ಯಕರ್ತರಾಗುವವರಿಗೆ ರಾಷ್ಟ್ರಾಭಿಮಾನ ಪ್ರಥಮ ಆದ್ಯತೆ ಆಗಬೇಕು. ಕಳೆದ ನೂರು ವರ್ಷದಲ್ಲಿ ಆರೆಎಸ್ಎಸ್ ಎಲ್ಲಿಯೂ ಗಲಾಟೆ ಮಾಡಿಲ್ಲ. ಯಾವುದೇ ಚರ್ಚ್, ಮಸೀದಿ ಒಡೆದು ಹಾಕಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಪುನರುಜ್ಜೀವನಗೊಳಿಸಲಾಗಿದೆ. ಹಿಂದುತ್ವ ಎಂದಿಗೂ ಮತಾಂಧತೆ ಒಪ್ಪುವುದಿಲ್ಲ ಎಂದ ಅವರು, ನಾವು ವಸುದೈವ ಕುಟುಂಬಕಂ ಎನ್ನುವ ಧ್ಯೇಯವಾಕ್ಯ ಪರಿಪಾಲಿಸುವವರು. ಸಂಘದ ಶಕ್ತಿಗೆ ಜಗತ್ತೇ ಮನ್ನಣೆ ಕೊಡುತ್ತಿದೆ ಎಂದರೆ ಸಂಘ 100 ವರ್ಷದಲ್ಲಿ ಎಷ್ಟು ಪರಿಶ್ರಮ ಪಟ್ಟಿರಬೇಡ ಎಂದು ಹೇಳಿದ ಅವರು, ಸಂಘದ ಕಾರ್ಯಕರ್ತರ ನಡವಳಿಕೆ ಸರಿಯಾಗಿರಬೇಕು. ಚಾರಿತ್ರ್ಯವಂತರಾಗಿರಬೇಕು. ಅಂದಾಗ ಮಾತ್ರ ನಾವು ಬೇರೆಯವರಿಗೆ ಹೇಳಲು ಸಾಧ್ಯ.
ಮುರುಡೇಶ್ವರದ ಉದ್ಯಮಿ ತಿಲಕರಾವ್ ಮಾತನಾಡಿ, ಕಳೆದ 100 ವರ್ಷಗಳಲ್ಲಿ ಆರ್‌ಎಸ್ಎಸ್ ಉತ್ತಮ ಕೆಲಸ ಮಾಡಿ ಗಮನ ಸೆಳೆದಿದೆ. ಹಲವು ಸಮಾಜಮುಖಿ ಕೆಲಸ ಮಾಡುವುದರ ಮೂಲಕ ಇಂದು ದೇಶದ ಪ್ರಭಲ ಶಕ್ತಿಯಾಗಿ ಆರ್‌ಎಸ್ಎಸ್ ಬೆಳೆದಿದೆ ಎಂದರು.ಶಿರಸಿ ವಿಭಾಗದ ಪ್ರಮುಖ ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು. ಆರ್‌ಎಸ್ಎಸ್‌ನ ತಾಲೂಕು ಕಾರ್ಯವಾಹ ವಸಂತ ನಾಯ್ಕ ಸ್ವಾಗತಿಸಿದರು. ದಾಸ ನಾಯ್ಕ ಶಿರಾಲಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ನೂರಾರು ಸ್ವಯಂಸೇವಕರು ಪಥಸಂಚಲನ ನಡೆಸಿದರು. ಪಥಸಂಚಲನದಲ್ಲಿ ವೃದ್ದರು, ಚಿಕ್ಕಮಕ್ಕಳು ಗಣವೇಷಧಾರಿಯಾಗಿ ಪಾಲ್ಗೊಂಡಿದ್ದ ವಿಶೇಷವಾಗಿತ್ತು.