ಕನ್ನಡಪ್ರಭ ವಾರ್ತೆ ತಿಪಟೂರು
ಸಂಘದ ಜಿಲ್ಲಾ ಸಂಚಾಲಕರಾದ ಮನೀಶ್ ಹಡಗೂರು ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸಂಘ ಬೆಳೆದು ಬಂದ ಹಾದಿ, ಸಂಘದ ಉದ್ದೇಶಗಳು, ಚಟುವಟಿಕೆಗಳು, ಹಾಗೂ ಶಿಸ್ತಿನ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.
ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್ ದೇವರಾಜು ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರತಿಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಬೇಕು. ಸ್ವಯಂಸೇವಕ ಸಂಘವು ಒಂದು ಶಿಸ್ತುಬದ್ಧ ಸಂಘವಾಗಿದ್ದು ಇದರಿಂದ ಶಿಸ್ತಿನ ಜೀವನ ನಡೆಸಲು ಸಾಧ್ಯ. ಆಗಾಗಿ ಚಿಕ್ಕ ಮಕ್ಕಳಿಂದಲೇ ಈ ಬಗ್ಗೆ ಅರಿವು ಮೂಡಿಸಬೇಕು ಯುವಕರಲ್ಲಿ ಹೆಚ್ಚು ಸಂಘಟಿತರನ್ನಾಗಿಸಬೇಕು ಹಿಂದೂ ಧರ್ಮದ ಉಳಿವಿಗಾಗಿ ಸ್ವಯಂಸೇವಕ ಸಂಘವು ಇನ್ನು ಹೆಚ್ಚು ವಿಸ್ತಾರವಾಗಿ ಬೆಳೆಯಬೇಕೆಂದು ತಿಳಿಸಿದರು.ಸ್ವಯಂಸೇವಕ ಸಂಘದ ಕಿಬ್ಬನಹಳ್ಳಿ ಹೋಬಳಿ ಉಸ್ತುವಾರಿಗಳಾದ ನಗರಸಭೆ ಸದಸ್ಯ ಶಶಿಕಿರಣ್, ಬಳ್ಳೆಕಟ್ಟೆ ಸುರೇಶ್ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.