ಕನ್ನಡಪ್ರಭ ವಾರ್ತೆ ರಾಮನಾಥಪುರ
ಸಂಗೀತ ಗ್ರಾಮವೆಂದು ಪ್ರಸಿದ್ಧಿ ಪಡೆದಿರುವ ರುದ್ರಪಟ್ಟಣದಲ್ಲಿ ಜನಮನ್ನಣೆ ಪಡೆದಿರುವ ಶ್ರೀ ರಾಮಮಂದಿರದಲ್ಲಿ “ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಸಂಗೀತ ಕಾರ್ಯಕ್ರಮದ ನಂತರ ಸಮಾಜ ಸೇವಕರಾದ ಬೆಂಗಳೂರಿನ ವಿ. ಗುರುದತ್ತ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ಕಲಾವಿದರ ಸಾಧನೆಗೆ ಸಂಗೀತವೂ ಪ್ರತಿಭೆಯ ಸಾಧನವಾಗಿದ್ದು, ಸಂಗೀತ, ಇಂದಿನ ಯುವಕರು ಕಲಿಕೆ ಹಾದಿಯಲ್ಲಿ ಅವರ ಸಾಧನೆ, ಪ್ರಸರಣಾ ಶಕ್ತಿಗಳು ಹಾಗೂ ಸಂಗೀತದಿಂದ ಉನ್ನತ ಮಟ್ಟಕ್ಕೆ ಹೋಗಲು ಸಹಕಾರಿಯಾಗುತ್ತದೆ ಎಂದ ಅವರು ಶತಮಾನಗಳಿಂದ ಸಂಗೀತ ಕ್ಷೇತ್ರಕ್ಕೆ ಸಾವಿರಾರು ಪ್ರತಿಭೆಗಳನ್ನು ಉಡುಗೊರೆಯಾಗಿ ನೀಡಿರುವ ಕರ್ಮಭೂಮಿ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಸಂಗೀತದ ಸೌರಭವನ್ನು ಎಲ್ಲೆಡೆ ಪಸರಿಸುವ ಮತ್ತು ಇಲ್ಲಿನ ಸಾವಿರಾರು ಕಲಾವಿದರ ಸಂಗೀತ ಪರಂಪರೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಪ್ರತಿವರ್ಷ ಸಂಗೀತೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರೂ ಅಗಮಿಸಿ ಶಾಸ್ತ್ರೀಯ ಸಂಗೀತ ಪರಂಪರೆಗೆ ಅನನ್ಯ ಕೊಡುಗೆ ನೀಡುತ್ತಿದೆ. ಇಂತಹ ಪುಣ್ಯ ಕಾರ್ಯಕ್ರಮ ಹಮ್ಮಿಕೊಂಡು ನಡೆಸುತ್ತಿರುವ ಗಾನ ಕಲಾಭೂಷಣ ವಿದ್ವಾಂಸರಾದ ಅರ್.ಕೆ. ಪದ್ಮನಾಭ ಅವರಿಗೆ ಸಲ್ಲಬೇಕು. ಗ್ರಾಮೀಣ ಪ್ರದೇಶದಲ್ಲಿ ಹಿರಿಯರ ಜೊತೆಯಲ್ಲಿ ಬಾಲ ಪ್ರತಿಭೆಗಳಿಗೆ ಅವಕಾಶ ನೀಡಿ ಜನರ ಮನಮುಟ್ಟುವಂತೆ ಸಂಗೀತ ಸಂಪ್ರದಾಯ ಪ್ರದರ್ಶಿನಿ ಪ್ರವಚನ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗಾನ ಕಲಾಭೂಷಣ ವಿದ್ಯಾನ್ ಡಾ. ಆರ್ ಕೆ ಪದ್ಮನಾಭ ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಂಗೀತ ಕಲೆಯನ್ನು ಅರಾಧಿಸಿದರೆ ಬದುಕಿನ ರೀತಿಯೇ ಬೇರೆಯಾಗಲಿದೆ. ಜಾತ್ಯತೀತತೆ ಸಂಗೀತದ ಮೂಲಮಂತ್ರವಾಗಿದೆ ಎಂದು ನುಡಿದ ಅವರು ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ರುದ್ರಪಟ್ಟಣದ ಕಲಾವಿದರೂ ಮಹಾನ್ ಕೊಡುಗೆ ನೀಡಿದ್ದಾರೆ. ಇಂದಿನ ಪೀಳಿಗೆಯ ಮಕ್ಕಳಿಗೆ ಪಾಲಕರು ಸಂಗೀತ ಕಲಿಸಬೇಕು. ಸುಸಂಸ್ಕೃತಿ ಕಲಿಸುವ ಸಂಗೀತ ಜ್ಞಾನಾರ್ಜನೆಗೆ ಜತೆಗೆ ಮಕ್ಕಳ ಮನೋವಿಕಾಶಕ್ಕೆ ಸಹಕಾರಿಯಾಗಿದ್ದು, ಎಲ್ಲರೂ ಚಿಕ್ಕಂದಿನಿಂದಲೇ ಅವಶ್ಯಕವಾಗಿ ಸಂಗೀತ ಕಲೆ ಕಲಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕಳೆದ 23 ವರ್ಷಗಳಿಂದ ಹಿರಿಯ ಕಲಾವಿದರಲ್ಲದೇ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡಲಾಗುತ್ತದೆ. ಇದು ಸಾಮಾನ್ಯ ವೇದಿಕೆಯಲ್ಲ. ರುದ್ರಪಟ್ಟಣದ ಶ್ರೀರಾಮಮಂದಿರದಲ್ಲಿ ಈ ಹಿಂದೆ ಮಹಾನ್ ವಿದ್ವಾಂಸರಾದ ಪೀಟಿಲು ಚೌಡಯ್ಯ, ಅನಂತರಾಯರು, ಮುಂತಾದ ವಿದ್ವಾಂಸರು ನುಡಿಸಿ ಹಾಡಿರುವ ವೇದಿಕೆ ಇದಾಗಿದೆ ಎಂದು ಪದ್ಮನಾಭ ತಿಳಿಸಿದರು.
==========ಪೊಟೋ- 2- . ರುದ್ರಪಟ್ಟಣದಲ್ಲಿ 3 ನೇ ದಿವಸ 3ನೇ ಸಂಗೀತ ಕಚೇರಿಯಲ್ಲಿ ವಿದ್ವಾನ್ ಆದಿತ್ಯ ಮಾದವನ್ ಗಾಯನ ನಡೆಸಿಕೊಟ್ಟರು. ವಿ. ಕೇಶವ ಮೋಹನ್ ಕುಮಾರ್ ಪಿಟೀಲು, ವಿ. ಸಿ. ಚಲುವರಾಜು ಮೃದಂಗ, ರಾಮಾನುಜನ್ ಘಟ ನುಡಿಸಿ, ರಂಜಿಸಿದರು.