ಹರಪನಹಳ್ಳಿ: ಹೊಸ ಜೀವನಕ್ಕೆ ಕಾಲಿಟ್ಟಿರುವ ನವ ದಂಪತಿಗಳು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ, ವಿಶ್ವಾಸ, ಗೌರವದಿಂದ ಕುಟುಂಬವನ್ನು ನಡೆಸಿಕೊಂಡು ಹೋಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ ನೀಡಿದರು.
ಅತ್ತೆ, ಮಾವಂದಿರನ್ನು ತಂದೆ, ತಾಯಿಗಳಂತೆ ಕಾಣಬೇಕು. ಉತ್ತಮ ಬಾಂಧವ್ಯ ಹೊಂದಬೇಕು ಎಂದು ನುಡಿದರು. ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳು ಕಾಯಕ ಯೋಗಿಗಳು, ನಡೆದಾಡುವ ದೇವರಿದ್ದಂತೆ. ಪ್ರತಿವರ್ಷ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳು ಬಸವಜಯಂತಿ ಪ್ರಯುಕ್ತ 42 ವರ್ಷದಿಂದ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬಂದಿದ್ದಾರೆ. ತಾವೇ ಭೂಮಿಯಲ್ಲಿ ಉಳುಮೆ ಮಾಡಿ ಕಾಯಕ ಯೋಗಿಗಳಾಗಿದ್ದಾರೆ, ಮಠದ ಅಭಿವೃದ್ಧಿ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಶಿಕ್ಷಣ ನೀಡುವುದರ ಜೊತೆಗೆ ಅನ್ನ ದಾಸೋಹ ಸಹ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಠದಿಂದ ಕೊಡ ಮಾಡುವ ಬಸವ ಗುರುಕಿರಣ ಪ್ರಶಸ್ತಿಯನ್ನು ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಅವರಿಗೆ, ಕೋಲಶಾಂತೇಶ್ವರ ಸೇವಾ ಪ್ರಶಸ್ತಿಯನ್ನು ದಾವಣಗೆರೆಯ ಶಿಲ್ಪಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಟಿ.ಶ್ರೀನಿವಾಸ್ ಅವರಿಗೆ, ಘನಮಠಾರ್ಯ ಪ್ರಶಸ್ತಿಯನ್ನು ಕಾವಲಹಳ್ಳಿಯ ಪ್ರಸಿದ್ಧ ಕೃಷಿಕ ಕವಳಿಬಸಪ್ಪ ಶೇಖರಪ್ಪ ಅವರಿಗೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ 24 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಇತಿಹಾಸ ಡಾ.ಎ.ಎಂ. ವಿಶ್ವನಾಥ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಪಿ.ಎಸ್.ಐ. ವಿಜಯ್ ಕೃಷ್ಣ, ಹೊಸಕೋಟೆ ಶರಣಪ್ಪ, ಡಗ್ಗಿ ಬಸಾಪುರದ ವೀರಬಸಪ್ಪ, ಅರಸೀಕೆರೆ ಬಿ.ರಾಮಣ್ಣ, ಎ.ಎಚ್. ಕೊಟ್ರೇಶ್, ಯರಬಳ್ಳಿ ವಿಜಯ್ ಕುಮಾರ್, ಬಸಾಪುರದ ಕೆ.ಮಂಜುನಾಥ್, ಐ.ಸಲಾಂಸಾಹೇಬ್, ಕೆ.ಲಕ್ಷ್ಮಿ ಮಹಾಂತೇಶ್, ಇಟ್ಟಿಗಿಹಳ್ಳಿ ಬಸವರಾಜ್, ಹದಡಿ ಅಜ್ಜಪ್ಪ, ಎ.ಎಚ್. ಆಕಾಶ್ ಇದ್ದರು.