ಬೆಂಗಳೂರಿಗೆ ಹೆಚ್ಚು ರೈಲು ಓಡಿಸಿ: ಸಂಸದ ಹಿಟ್ನಾಳಗೆ ಮನವಿ

KannadaprabhaNewsNetwork |  
Published : Jul 11, 2025, 11:48 PM IST
11ಕೆಪಿಎಲ್23 ವಿವಿಧ ರೈಲು ಪ್ರಾರಂಭಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಹುಬ್ಬಳ್ಳಿಯಿಂದ ಬೀದರಿಗೆ ಇಂಟರ್ ಸಿಟಿ ರೈಲು (ವಾಯ: ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್‌, ಮಂತ್ರಾಲಯ ರೋಡ್‌, ರಾಯಚೂರು, ಯಾದಗಿರಿ. ಕಲಬುರಗಿ) ಮಾರ್ಗವಾಗಿ ನಿತ್ಯ ಬೀದರಿಗೆ ಹೊಸ ರೈಲು ಪ್ರಾರಂಭಿಸುವುದರಿಂದ ಮುಂಬೈ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ.

ಕೊಪ್ಪಳ:

ಕೆಲ ರೈಲುಗಳ ವಿಸ್ತರಣೆ ಹಾಗೂ ಇತರೆ ಬೇಡಿಕೆ ಸೇರಿದಂತೆ ಕೊಪ್ಪಳ ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರು ಮತ್ತು ವಿವಿಧ ಮಾರ್ಗಗಳಿಗೆ ಹೊಸ ರೈಲು ಪ್ರಾರಂಭಿಸುವಂತೆ ಸಂಸದ ರಾಜಶೇಖರ ಹಿಟ್ನಾಳಗೆ ರೈಲ್ವೆ ಜನಪರ ಹೋರಾಟ ಸಮಿತಿ ಮುಖಂಡರು ಚರ್ಚಿಸಿ ಮನವಿ ಸಲ್ಲಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಸದಸ್ಯರ ಕಾರ್ಯಾಲಯದಲ್ಲಿ ರೈಲ್ವೆ ಜನಪರ ಹೋರಾಟ ಸಮಿತಿ ಗೌರವಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ಅಧ್ಯಕ್ಷ ಎಸ್.ಎ. ಗಫಾರ್, ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ, ನಾಗರಿಕ ಹಕ್ಕುಗಳ ಹೋರಾಟ ಸಮಿತಿ (ಪಿಯುಸಿಎಲ್) ಜಿಲ್ಲಾ ಘಟಕದ ಮುಖಂಡ ಮಹಾಂತೇಶ್ ಕೊತಬಾಳ, ಗೌಸ್ ನೀಲಿ, ಶಿವಪ್ಪ ಹಡಪದ, ಗಾಳೆಪ್ಪ ಮುಂಗೋಲಿ, ಮುತ್ತು ಹಡಪದ ಮುಂತಾದವರ ನಿಯೋಗ ಮನವಿ ಸಲ್ಲಿಸಿತು.

ಬೆಂಗಳೂರು-ಹೊಸಪೇಟೆ-ಬೆಂಗಳೂರು ರೈಲನ್ನು ಹೊಸಪೇಟೆಯಿಂದ ಮುನಿರಾಬಾದ್‌-ಗಿಣಿಗೇರಾ-ಕೊಪ್ಪಳ-ಭಾಣಾಪುರ-ತಳಕಲ್ ಜಂಕ್ಷನ್ ಮೂಲಕ ಕುಕನೂರು, ಯಲಬುರ್ಗಾ, ಕುಷ್ಟಗಿವರೆಗೆ ವಿಸ್ತರಿಸಬೇಕು. ಹುಬ್ಬಳ್ಳಿಯಿಂದ ಬೀದರಿಗೆ ಇಂಟರ್ ಸಿಟಿ ರೈಲು (ವಾಯ: ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್‌, ಮಂತ್ರಾಲಯ ರೋಡ್‌, ರಾಯಚೂರು, ಯಾದಗಿರಿ. ಕಲಬುರಗಿ) ಮಾರ್ಗವಾಗಿ ನಿತ್ಯ ಬೀದರಿಗೆ ಹೊಸ ರೈಲು ಪ್ರಾರಂಭಿಸುವುದರಿಂದ ಮುಂಬೈ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ಹಲವಾರು ರೈಲುಗಳ ಪ್ರಾರಂಭಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!