ರಾಜ್ಯ ಮಟ್ಟದ ಸ್ಕ್ವಾಶ್ ಚಾಂಪಿಯನ್‌ಶಿಪ್: ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ

KannadaprabhaNewsNetwork |  
Published : Dec 20, 2025, 02:00 AM IST
19 HRR. 01ಹರಿಹರದ ಸ್ಕ್ವಾಶ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ತಂಡ ಗದಗ ಜಿಲ್ಲೆಯ ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 18ನೇ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಪ್ರಥಮ ರನ್ನರ್ ಅಪ್ ಟ್ರೋಫಿ ಗಳಿಸಿದೆ. ಶಾಸಕ ಬಿ.ಪಿ. ಹರೀಶ್ ಅಭಿನಂದಿಸಿದ್ದಾರೆ | Kannada Prabha

ಸಾರಾಂಶ

ಗದಗ ಜಿಲ್ಲೆಯ ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 18ನೇ ರಾಜ್ಯಮಟ್ಟದ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಹರಿಹರದ ಸ್ಕ್ವಾಶ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ತಂಡ ಪ್ರಥಮ ರನ್ನರ್ ಅಪ್ ಟ್ರೋಫಿ ಗಳಿಸಿದೆ.

- ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜನೆ

- - -

ಹರಿಹರ: ಗದಗ ಜಿಲ್ಲೆಯ ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 18ನೇ ರಾಜ್ಯಮಟ್ಟದ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಹರಿಹರದ ಸ್ಕ್ವಾಶ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ತಂಡ ಪ್ರಥಮ ರನ್ನರ್ ಅಪ್ ಟ್ರೋಫಿ ಗಳಿಸಿದೆ.

ಸ್ಪರ್ಧೆಯಲ್ಲಿ ಈ ತಂಡದ ಕ್ರೀಡಾಪಟುಗಳು ಒಟ್ಟು 32 ಚಿನ್ನ, 6 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಪಡೆದು ಹೈದರಾಬಾದ್‌ನ ಗಚ್ಚಿಬೌಲಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ 26ನೇ ರಾಷ್ಟ್ರೀಯ ಸ್ಕ್ವಾಶ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಚಿನ್ನದ ಪದಕ ಪಡೆದವರು:

ಬಾಲಕ ಮತ್ತು ಬಾಲಕಿಯರ ವಯಸ್ಸು ಹಾಗೂ ಭಾರದ ಆಧಾರದ ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಮೊಹಮ್ಮದ್ ಜೈನ್ ಎಚ್., ಮೊಹಮ್ಮದ್ ನವಾಜ್, ಮೊಹಮ್ಮದ್ ಆದಿಯನ್, ಮೊಹಮ್ಮದ್ ಸಗೀರ್ ಟೋಪಿನ್‌ಕಟ್ಟಿ, ಸಗೀರ್, ನವಾಜ್ ಮತ್ತು ಅವ್ಯುಕ್ತ ಜಿ.ಎ. ಅವರೊಳಗೊಂಡ ಖ್ವಾಂಕೀ ಗ್ರೂಪ್ ಚಿನ್ನ ಗಳಿಸಿದೆ.

11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮತ್ತು ಏರೋ ಸ್ಕ್ವಾಶ್ ವೈಯಕ್ತಿಕ ವಿಭಾಗದಲ್ಲಿ ಸುಧೀಕ್ಷಾ, ಅವ್ಯಕ್ತ ಜಿ.ಎ. ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದರು.

14 ವರ್ಷದೊಳಗಿನ ವಿಭಾಗದಲ್ಲಿ ಅಮಾನ್ ಎಂ.ಎ., ಸೈಯದ್ ಐಮಾನ್, ಅನೀಶ್ ಕುಮಾರ್, ಅಬಾಜ್ ಚಿನ್ನದ ಪದಕ ಪಡೆದರು.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮಧಿಹಾ ತಾಜ್, ಜಿಯಾ ಮತ್ತು ವೈಷ್ಣವಿ, ಅನೀಶ್ ಕುಮಾರ್, ಮಹೀನ್, ಅಮಾನ್ ಚಿನ್ನ ಗೆದ್ದರು.

18 ವರ್ಷದ ಮೇಲಿನ ಮಹಿಳಾ ವಿಭಾಗದಲ್ಲಿ ನಿಶಾತ್ ಅಂಜುಮ್, ಫಾಖಿಹಾ ಕೌನೇನ್, ತರಬೇತುದಾರ ಆಯಿಷಾ ಫರ್ಹೀನ್, ಅಂಜುಮ್ ಬಾನು ಚಿನ್ನ ಗೆದ್ದಿದ್ದಾರೆ.

18 ವರ್ಷಕ್ಕಿಂತ ಮೇಲಿನ ಪುರುಷರ ವಿಭಾಗದಲ್ಲಿ ಸೈಯದ್ ಜುಹೈಬ್, ವೀರೇಶ್, ತರಬೇತುದಾರ ಸೈಯದ್ ಶೋಯಬ್ ಚಿನ್ನದ ಪದಕ ಗೆದ್ದಿದ್ದಾರೆ.

ಕ್ರೀಡಾಪಟುಗಳ ಸಾಧನೆಗೆ ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್, ಕರ್ನಾಟಕ ಸ್ಕ್ವಾಶ್ ಅಸೋಸಿಯೇಶನ್‌ ಅಧ್ಯಕ್ಷ ಗಿರೀಶ್ ಕೆ.ಬಿ., ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ಜಿ.ವಿ., ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲಿ ಎಚ್.ಎಂ., ಹಿರಿಯ ತರಬೇತುದಾರರಾದ ಆಯಿಷಾ ಫರ್ಹೀನ್ ಮತ್ತು ಸೈಯದ್ ಶೋಯಬ್ ಅಭಿನಂದಿಸಿದ್ದಾರೆ.

- - -

-19HRR.01:

ರಾಜ್ಯಮಟ್ಟದ ಸ್ಕ್ವಾಶ್‌ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಪ್ರಥಮ ರನ್ನರ್ ಅಪ್ ಟ್ರೋಫಿ ಗಳಿಸಿದ ಹರಿಹರ ತಂಡಕ್ಕೆ ಶಾಸಕ ಬಿ.ಪಿ. ಹರೀಶ್ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ
ಸಾಲ ಪಡೆದು, ಸಕಾಲದಲ್ಲಿ ಮರು ಪಾವತಿಸಿ