ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಡಾ.ಹೆಚ್.ಎನ್ ಕಾಲಾಭವನದಲ್ಲಿ ಗ್ರಾಮೀಣ ಯುವ ಕಾಲಾ ಸಂಘ ಆಯೋಜಿಸಿದ್ದ 30ವರ್ಷ ಸುದೀರ್ಘ ಪ್ರಯಾಣದಲ್ಲಿ ಗ್ರಾಮೀಣ ಯುವ ಕಲೆ. ಸಂಸ್ಕೃತಿ, ವೈಚಾರಿಕ ಚಿಂತನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೆಂಕಟರವಣಪ್ಪನವರ ಸಾಧನೆಜನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗುಟ್ಲಕುಂಟೆ ವೆಂಕಟರವಣಪ್ಪರವರು ಕರ್ನಾಟಕದಿಂದ ದೆಹಲಿಯವರೆಗೂ ಕಲಾ ಸೇವೆ ಮಾಡುವ ಮೂಲಕ ಜನರಿಗೆ ಮನ ಮುಟ್ಟುವ ಕಲಾ ತಂಡಗಳನ್ನು ಉಳಿಸಿ- ಬೆಳೆಸಿದ್ದಾರೆ. ಕಳೆದ 30 ವರ್ಷಗಳಿಂದ ಗ್ರಾಮೀಣ ಯುವ ಕಲಾವಿದರ ತಂಡ ಕಟ್ಟಿ ಬೆಳೆಸಿದ್ದಾರೆ. ಕರ್ನಾಟಕದಿಂದ ದೆಹಲಿಯವರೆಗೂ ಕಲಾ ಸೇವೆ ಮಾಡಿದ್ದಾರೆಂದು ಹಾಗೂ ಹಂಪಿ ಉತ್ಸವಗಳಲ್ಲಿ ಜನರಿಗೆ ಮನ ಮುಟ್ಟುವ ಕಲಾ ತಂಡಗಳನ್ನು ಬೆಳೆಸಿದ್ದಾರೆಂದು ತಿಳಿಸಿದರು.ಕರ್ನಾಟಕ ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷ ಗೊಳ್ಳಹಳ್ಳಿ ಶಿವಪ್ರಸಾದ್ ಮಾತನಾಡಿ, ಉತ್ಸವಗಳನ್ನು ಏರ್ಪಡಿಸುವ ಮೂಲಕ ಕಲೆಗಳನ್ನು ಪ್ರೋತ್ಸಾಹಿಸಬೇಕು. ಈಗಿನ ಕಾಲದಲ್ಲಿ ಉಹಾಲೋಕ ತೇಲಾಡುತ್ತಿದ್ದಾರೆ. ಸಮಾಜದ ದೃಷ್ಟಿಯಿಂದ ಸಂಸ್ಕೃತಿ ತಾಯಿಯ ಹಾಲು ಇದ್ದಂತೆ. ಸಮಾಜದ ಚಿಂತಕರು ಕಲಾವಿದರು ಸಾಹಿತಿಗಳು, ಕವಿಗಳು ಜಾತಿವಾದಿಗಳಾದರೆ ಸಮಾಜ ಕೆಡುತ್ತದೆ. ಸಂಸ್ಕೃತಿಯಿಂದ ದೇಶ ಕಟ್ಟಬಹುದು ಎಂದು ತಿಳಿಸಿದರು
ನಮ್ಮ ಕಾರ್ಯವು ಹಿಂದಿನ ಜ್ಞಾನ, ಇಂದಿನ ಕರ್ತವ್ಯ ಮತ್ತು ಮುಂದಿನ ಕನಸುಗಳನ್ನು ಬೆಸೆಯುವ ಒಂದು ನಿರಂತರ ಸೇತುವೆಯಾಗಿದೆ. ಈ ಸೇವೆಯ ಮೂಲಕ ಸಮಾಜಕ್ಕೆ ನಮ್ಮ ಕೊಡುಗೆಯನ್ನು ನೀಡುವುದಷ್ಟೇ ಅಲ್ಲ, ನಮ್ಮ ಜೀವನಕ್ಕೊಂದು ಸಾರ್ಥಕ ಉದ್ದೇಶವನ್ನು ಕಂಡುಕೊಳ್ಳುತ್ತಿದ್ದೇವೆ. ಆದ್ದರಿಂದ, ನಮ್ಮದು ಕೇವಲ ಒಂದು ಸಂಘಟನೆಯಲ್ಲ, ಬದಲಿಗೆ ಸಮಾಜ ಪರಿವರ್ತನೆಗೆ ನಾವು ಕೈಗೊಂಡಿರುವ ಒಂದು ನಿಷ್ಠಾವಂತ ಅಭಿಯಾನ ಎಂದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕರು-ಆದರ್ಶ.ಜಿ.ವಿ, ಗೊಳ್ಳಹಳ್ಳಿ ಶಿವಪ್ರಸಾದ್ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾಸಪ್ತಗಿರಿ, ಮಾಕಾರಾಮಚಂದ್ರ, ಮುನಿರೆಡ್ಡಿ, ಜನಾರ್ದನಮೂರ್ತಿ, ದಲಿತ ಮುಖಂಡರಾದ ಸೋಮಯ್ಯ, ಕಲಾವಿದರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಉಪಸ್ಥಿತರಿದ್ದರು.
.