ಹಿರೇಕೆರೂರು: ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದೆ. ಜತೆಗೆ ರಾಜ್ಯದ ಜನತೆಯ ಅಶೋತ್ತರಗಳಿಗೆ ಸ್ಪಂದಿಸಿ ಎಲ್ಲ ವರ್ಗದ ಜನತೆಗೆ ತಲುಪುವಂತೆ ಹತ್ತಾರು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ತಾಲೂಕಿನ ಯತ್ತಿನಹಳ್ಳಿ ಎಂ.ಕೆ. ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ಬಾಬು ಜಗಜೀವನರಾಮ್ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪುಜೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ರೂಪಿಸುವುದರ ಜತಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಸಂಬಂಧಿಸಿದ ಅಧಿಕಾರಿಗಳು ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸಿಬೇಕು ಎಂದರು.ಗ್ರಾಪಂ ಅಧ್ಯಕ್ಷೆ ರೇಣುಕಾ ಕಲ್ಲಣನವರ, ಉಪಾಧ್ಯಕ್ಷ ಶಂಕರ ಹರಿಜನ, ಬಸವರಾಜ ಮುಚಡಿ, ಪುಷ್ಪಾ ಕೆಳಗಿನಮನಿ, ಎಸ್.ಎಂ. ಬಣಕಾರ, ಗಣೇಶಗೌಡ ಪಾಟೀಲ, ಮುತ್ತು ಪಾಟೀಲ, ಪರಶುರಾಮ ಚನ್ನಳ್ಳಿ, ಭರಮಗೌಡ ಸಣಕ್ಕಿ, ಭರಮಪ್ಪ ಹರಿಜನ, ಕೆಂಚಪ್ಪ ಹಾರೋಮುಚಡಿ, ದಯಾನಂದ ಪಾಟೀಲ, ಮೌನೇಶ ನರಸಾಪುರ, ವಸಂತ ವಡೆನಪುರ, ಗ್ರಾಮದ ಮುಖಂಡರು ಇದ್ದರು.ಇಂದಿನಿಂದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ
ಹಾವೇರಿ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸಂಪೂರ್ಣ ಗ್ರಾಮವನ್ನು ಕಸ ಮುಕ್ತವಾಗಿಸಲು ಸೆ. 17ರಿಂದ ಅ. 2ರ ವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುಚಿ ಬಿಂದಲ್ ತಿಳಿಸಿದ್ದಾರೆ.ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನವನ್ನು ಆಯೋಜಿಸಿ, ಯಶಸ್ವಿಗೊಳಿಸಿ, ಆಯೋಜಿಸಿರುವ ಚಟುವಟಿಕೆಗಳ/ ಕಾರ್ಯಕ್ರಮಗಳ ವಿವರಗಳನ್ನು ಆಯಾ ದಿನದಂದೇ ಸ್ವಚ್ಛತಾ ಸೇವಾ ಪೋರ್ಟಲ್ನಲ್ಲಿ(https://swachhatahiseva.gov.in/) ಮಾಡಬೇಕು. ಈ ಕುರಿತು ಆಯಾ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ತಾಲೂಕು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದೆ. ಈ ಅಭಿಯಾನ ಅಗತ್ಯ ಮೇಲ್ವಿಚಾರಣೆ ಮಾಡಲು ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.