ದೇಶದ ಅಭಿವೃದ್ಧಿಗೆ ಹಳ್ಳಿಗಳ ಸುಧಾರಣೆ ಅವಶ್ಯ

KannadaprabhaNewsNetwork |  
Published : Apr 30, 2026, 02:45 AM IST
ಸವದಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಹಳ್ಳಿಗಳಿಂದ ಕೂಡಿದ ಭಾರತದ ಅಭಿವೃದ್ಧಿ ಹೊಂದಬೇಕಾದರೆ, ಮೊದಲು ಹಳ್ಳಿಗಳು ಸುಧಾರಣೆಯಾಗಬೇಕು. ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಕೆಲಸ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಹಳ್ಳಿಗಳಿಂದ ಕೂಡಿದ ಭಾರತದ ಅಭಿವೃದ್ಧಿ ಹೊಂದಬೇಕಾದರೆ, ಮೊದಲು ಹಳ್ಳಿಗಳು ಸುಧಾರಣೆಯಾಗಬೇಕು. ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಕೆಲಸ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಸಂಕೋನಟ್ಟಿ ಗ್ರಾಪಂನ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಕಚೇರಿಗಳು ಹಳ್ಳಿಯ ವಿಧಾನಸೌಧವಿದ್ದಂತೆ. ಜನರಿಗೆ ಉತ್ತಮ ಸೇವೆಗಳು ಪಂಚಾಯತಿ ಮೂಲಕವೇ ದೊರಕಬೇಕು. ಸರ್ಕಾರಿ ಸೌಲಭ್ಯಗಳನ್ನು ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಸದಸ್ಯರ ಬಲ ಹೊಂದಿರುವ ಅಥಣಿ ಗ್ರಾಮೀಣ ಪಂಚಾಯತಿ ನೂತನ ಕಟ್ಟಡವನ್ನು ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಉತ್ತಮ ಸೇವೆ ಒದಗಿಸುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ. ಹೈಟೆಕ್ ಕಚೇರಿ, ಕೊಠಡಿಗಳು, ಸುಂದರವಾದ ಸಭಾಂಗಣ, ಕಡತಗಳ ಕೊಠಡಿ ಸೇರಿ ಉತ್ತಮ ಸೌಲಭ್ಯ ಒಳಗೊಂಡ ಕಟ್ಟಡ ನಿರ್ಮಾಣವಾಗಲಿದೆ ಎಂದರು.ಗ್ರಾಪಂ ಪಿಡಿಒ ಬೀರಪ್ಪ ಕಡಗಂಚಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಗಡದೆ, ಮಾಜಿ ಸದಸ್ಯರಾದ ಬರಮು ಸೋನಕರ, ಸಂಜಯ ಹಣಮಾಪುರೆ, ಅರುಣ ಬಾಸಿಂಗಿ, ಪರಸರಾಮ ಪೋಳ, ಪುಟ್ಟು ಸಿಂಧೆ, ಅಣ್ಣಪ್ಪ ಬಸರಿಖೋಡಿ, ಅಶೋಕ ಕೌಜಲಗಿ, ಮುಖಂಡರಾದ ಸುರೇಶ ಘೋಳಪ್ಪನವ, ಶಿವಾನಂದ ದಿವಾನಮಳ, ರಾಮಣ್ಣ ಧರಿಗೌಡರ, ಅರುಣ ಭಾಸಂಗಿ, ರಾಹುಲ ನಾಯಿಕ, ಅನಿಲ ಭೋಸಲೆ, ನರಸು ಬಡಕಂಬಿ, ಸಂಗಪ್ಪ ಧರಿಗೌಡ, ಲಾಲು ನಧಾಪ್ಪ, ಅಧಿಕಾರಿಗಳಾದ ಶಿವಾನಂದ ಕಲ್ಲಾಪೂರ, ಪ್ರವೀಣ ಹುನಸಿಕಟ್ಟಿ, ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬಹಿರಂಗ ಸಭೆ, ಅದ್ಧೂರಿ ಜಯಂತ್ಯುತ್ಸವ
ಶಿವಬೋಧರಂಗ ಸೊಸೈಟಿಗೆ ₹7.30 ಕೋಟಿ ಲಾಭ