ಕನ್ನಡಪ್ರಭ ವಾರ್ತೆ ಮುಧೋಳ
ಬಾಗಲಕೋಟೆ ಬಿ.ವಿ.ವಿ ಸಂಘದ ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಸಹಯೋಗದಲ್ಲಿ ಕಲಾ ವಿಭಾಗದ ವತಿಯಿಂದ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲಾ ವೈಭವ-2026ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಾ ವಿಭಾಗದ ಪಠ್ಯಕ್ರಮವು ಐಎಎಸ್ (IAS), ಕೆಎಎಸ್ (KAS), ಬ್ಯಾಂಕಿಂಗ್, ಎಸ್‌ಎಸ್‌ಸಿ (SSC) ಮುಂತಾದ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಪೂರಕವಾಗಿದೆ. ಬಿ.ಎ ಪದವಿಯ ಜೊತೆಗೆ ವಿದ್ಯಾರ್ಥಿಗಳು ಈ ಪರೀಕ್ಷೆಗೆ ತಯಾರಿ ನಡೆಸಿದರೆ, ಚಿಕ್ಕ ವಯಸ್ಸಿನಲ್ಲೇ ಉನ್ನತ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಬಹುದು. ನಿಮ್ಮ ಆಸಕ್ತಿ, ಕೌಶಲ್ಯ ಮತ್ತು ಜೀವನದ ಗುರಿಯನ್ನು ಸ್ಪಷ್ಟವಾಗಿ ಅರಿತುಕೊಂಡು ತಜ್ಞರ ಮಾರ್ಗದರ್ಶನ ಪಡೆದು ತಾವುಗಳು ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದರು.
ಕಲಾ ವಿಭಾಗವೆಂದರೆ ಮೊದಲಿನಂದಲೂ ಮೂಗು ಮುರಿಯುವವರೇ ಹೆಚ್ಚು. ಈ ವಿಭಾಗವನ್ನು ಆಯ್ದುಕೊಂಡವರು ಅಷ್ಟೊಂದು ಪ್ರತಿಭಾವಂತರಲ್ಲ ಎಂಬುದೊಂದು ವಿಚಾರವಿದೆ. ಆದರೆ, ಕಲಾ ವಿಭಾಗ ಕೂಡ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವನ್ನೊದಗಿಸುತ್ತದೆ ಎಂಬುವುದು ಇಂದಿನ ದಿನಗಳಲ್ಲಿ ಸಾಬೀತುಗೊಳ್ಳುತ್ತಿದೆ. ಯುಎಸ್‌ಸಿ, ಸಿವಿಲ್ ಸರ್ವೀಸ್, ಮೊದಲಾದ ಕ್ಷೇತ್ರಗಳಲ್ಲಿ ಕಲಾ ವಿಭಾಗದ ಪಠ್ಯ ಪ್ರವಚನಗಳೇ ಹೆಚ್ಚು ಸಹಕಾರಿಯಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕಲಾ ವಿಷಯ ಗಳೇ ಹೆಚ್ಚು ಸಹಾಯವನ್ನು ಒದಗಿಸುತ್ತವೆ, ಕಲಾ ವಿಭಾಗವು ಅವಕಾಶಗಳ ಭರ್ಜರಿ ನೆಲೆಯಾಗಿದೆ. ವಿದ್ಯಾರ್ಥಿಗಳು ಇಲ್ಲಿ ತಮಗೆ ಇಷ್ಟವಾಗುವ ಉಪ ವಿಭಾಗಗಳ ಆಯ್ಕೆಯನ್ನು ಮಾಡಬಹುದಾಗಿದೆ ಎಂದರು.ಪ್ರಾಚಾರ್ಯ ಡಾ.ಎಂ.ಆರ್.ಜರಕುಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಾಪಾರ ನಿರ್ವಹಣೆ, ವಕೀಲ ವೃತ್ತಿ, ಸಂಗೀತ, ನೃತ್ಯ, ಕಲಾವಿದ, ನಟ, ಉದ್ಯಮಿ, ಅರ್ಥಶಾಸ್ತ್ರಜ್ಞ, ಸಂಖ್ಯಾಶಾಸ್ತ್ರಜ್ಞ, ವಾಸ್ತುಶಿಲ್ಪಿಗಳು, ಫ್ಯಾಷನ್ ವಿನ್ಯಾಸಕರು, ಬರಹಗಾರರು, ಇತಿಹಾಸಕಾರ ಮತ್ತು ಪುರಾತತ್ವ ಶಾಸ್ತ್ರಜ್ಞರು, ಪತ್ರಕರ್ತರು ಹೀಗೆ ಹಲವಾರು ಬಗೆಯ ವೃತ್ತಿಗಳಿವೆ, ಅದೇ ರೀತಿ ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಇತರ ಉನ್ನತ ಮಟ್ಟದ ಹುದ್ದೆಗಳಿಗೆ ನಡೆಸುವ ಅರ್ಹತಾ ಪರೀಕ್ಷೆಯಾಗಿರುವ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕೂಡ ಕಲಾ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡು ಉನ್ನತ ಹುದ್ದೆಯನ್ನಲಂಕರಿಸಿಕೊಳ್ಳಬಹುದು ಎಂದು ತಿಳಿಸಿದರು.ಐಕ್ಯೂಎಸಿ ಸಂಯೋಜಕರು, ಕಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಕಲಾ ವಿಭಾಗದ ಉಪನ್ಯಾಸಕರಿಂದ ಹಾಗೂ ವಿದ್ಯಾಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.