ಸಿದ್ದಾಪುರ: ಸ್ವಾತಂತ್ರ‍್ಯ ಬಂದು ಹಲವು ವರ್ಷಗಳೇ ಕಳೆದರೂ ಗ್ರಾಮಿಣ ಭಾಗದ ಅಭಿವೃದ್ಧಿ ಆಗದಿರುವುದು ನೋವಿನ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದರೂ ಗ್ರಾಮೀಣ ಭಾಗಗಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಅಭಿವೃದ್ಧಿಗೊಂಡ ತಾಲೂಕಿನ ಬೇಡ್ಕಣಿಯ ಜೇಡಗೆರೆ ಹಸ್ತಾಂತರ ಮತ್ತು ಬಾಗಿನ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ರೈತನಿಗೆ ಬೇಕಾದ ಸೌಕರ್ಯಗಳು ಸಿಕ್ಕಾಗ ಮಾತ್ರ ರೈತರು ನೆಮ್ಮದಿಯಿಂದ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯ. ಗ್ರಾಮೀಣ ಭಾಗದ ಬಡ ಜನರಿಗೆ ಆರ್ಥಿಕ ಸಹಾಯ ದೊರೆತು ಸದೃಢರಾದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಅರಿತ ಡಾ. ಡಿ. ವೀರೇಂದ್ರ ಹೆಗ್ಗಡೆ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಎನ್. ಜಯಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಗ್ರಾಪಂ ಅಧ್ಯಕ್ಷ ಉಲ್ಲಾಸ ಗೌಡರ್, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪರಶುರಾಮ ನಾಯ್ಕ, ತಾಲೂಕು ಗ್ಯಾರಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ಕೆ.ಜಿ. ನಾಗರಾಜ, ಪ್ರಮುಖರಾದ ವಿ.ಎನ್. ನಾಯ್ಕ, ನಾಗರಾಜ ನಾಯ್ಕ, ಜಿಲ್ಲಾ ಜನಜಾಗೃತಿ ಯೋಜನೆಯ ನಿಕಟಪೂರ್ವ ಅಧ್ಯಕ್ಷ ಸುಭಾಷ ಎಚ್. ನಾಯ್ಕ, ತಾಪಂ ಅಭಿವೃದ್ಧಿ ಅಧಿಕಾರಿ ಈರಣ್ಣ ಇಲಾಳ ಹಾಗೂ ಇನ್ನಿತರ ಪ್ರಮುಖರು ಸಭೆಯಲ್ಲಿ ಇದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ಗಿರೀಶ ಜಿ.ಪಿ. ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.ಸಭಾ ಕಾರ್ಯಕ್ರಮಕ್ಕೂ ಮೊದಲು ಜೇಡಗೆರೆ ಕೆರೆಗೆ ಶಾಸಕ ಭೀಮಣ್ಣ ನಾಯ್ಕ ಬಾಗಿನ ಸಮರ್ಪಣೆ ಮಾಡಿದರು. ಬಡರೋಗಿಗಳಿಗೆ ರಕ್ತದಾನ ಶಿಬಿರ ಸಹಕಾರಿ
ಕುಮಟಾ: ಮನುಷ್ಯರು ಇತ್ತೀಚಿನ ವರ್ಷಗಳಲ್ಲಿ ನಾನಾ ರೀತಿಯ ಕಾಯಿಲೆಗಳಿಂದ ಮಾತ್ರವಲ್ಲದೇ ರಕ್ತದ ಕೊರತೆಯಿಂದಲೂ ಮರಣಕ್ಕೀಡಾಗುತ್ತಿದ್ದಾರೆ. ಅಪಘಾತಗಳು ಹೆಚ್ಚುತ್ತಿದ್ದು ಗಾಯಾಳುಗಳಿಗೆ ರಕ್ತ ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ರಕ್ತದಾನ ಶಿಬಿರಗಳಿಂದ ಅನೇಕರಿಗೆ ಜೀವದಾನವಾಗಲಿದೆ. ಆದ್ದರಿಂದಲೇ ರಕ್ತದಾನವನ್ನು ಮಹಾದಾನ ಎನ್ನುತ್ತಾರೆ ಎಂದು ಉತ್ತರ ಕನ್ನಡ ಜಿಲ್ಲಾ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಕಾತ್ಯಾಯನಿ ಭಟ್ ಹೇಳಿದರು.ಪಟ್ಟಣದ ಬಗ್ಗೋಣ ರಸ್ತೆಯಲ್ಲಿರುವ ಉತ್ತರ ಕನ್ನಡ ಬ್ಲಡ್ ಬ್ಯಾಂಕ್‌ನಲ್ಲಿ ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್ ಘಟಕ, ರೋವರ್ಸ-ಸ್ಕೌಟ್ಸ್ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಕ್ತದಾರ ಶಿಬಿರದಲ್ಲಿ ಮಾತನಾಡಿದರು.ರಕ್ತದಾನ ಶಿಬಿರಗಳಿಂದ ಬಡ ರೋಗಿಗಳಿಗೆ ಸಹಕಾರಿಯಾಗುವ ಜತೆಗೆ ರಕ್ತದಾನಿಗಳಿಗೆ ಬೊಜ್ಜು ಮೊದಲಾದ ಸಮಸ್ಯೆಗಳಿಂದ ಮುಕ್ತರಾಗಿ ಆರೋಗ್ಯ ವೃದ್ಧಿಗೂ ಅನುಕೂಲವಾಗಲಿದೆ. ರಕ್ತದಾನ ಶಿಬಿರ ಆಯೋಜನೆ ಶ್ಲಾಘನೀಯ ಕಾರ್ಯ ಎಂದರು.ಲಯನ್ಸ ಕ್ಲಬ್ ಅಧ್ಯಕ್ಷೆ ಮಂಗಲಾ ಕುಚಿನಾಡ ಮಾತನಾಡಿ, ರೋಗಿಗಳು ಹಾಗೂ ಗಾಯಾಳುಗಳಿಗೆ ತುರ್ತು ರಕ್ತದ ಅವಕಶ್ಯಕತೆಯನ್ನು ಮನಗಂಡು ಲಯನ್ಸ್ ಕ್ಲಬ್ ಇಂತಹ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದ ಪೂರೈಕೆಗೆ ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಡಾ. ಎಂ.ಬಿ. ಮೂಡಲಗಿರಿ, ಪ್ರಾಚಾರ್ಯೆ ಡಾ. ರೇವತಿ ಆರ್. ನಾಯ್ಕ, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚಿನಾಡ, ಲಯನ್ಸ್ ಕಾರ್ಯದರ್ಶಿ ರಾಮಚಂದ್ರ ಭಟ್, ಖಜಾಂಚಿ ಎಂ.ಎನ್. ಹೆಗಡೆ, ಸದಸ್ಯರಾದ ಅನಂತ ಕಾಮತ, ಡಾ. ನಾಗರಾಜ ಭಟ್, ಗಣೇಶ ನಾಯಕ, ಯೂನಿಯನ್ ಕಾರ್ಯಾಧ್ಯಕ್ಷ ಡಾ. ಅರವಿಂದ ನಾಯಕ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ, ಡಾ. ಶ್ರೀನಿವಾಸ ಹರಿಕಾಂತ ಇತರರು ಇದ್ದರು.