ಕಿಕ್ಕೇರಿ:
ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಶಾಲೆ ಉಳಿವಿಗೆ, ಮಕ್ಕಳು ಶಾಲೆಗೆ ಸುರಕ್ಷಿತವಾಗಿ ಬರುವಂತೆ ಹೊಸಕೋಟೆಯ ಕಾಜಿಹೊಸಹಳ್ಳಿ ನಾಗರಾಜು, ಪುಷ್ಪಾದಂಪತಿ ಶಾಲಾ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಇಂತಹ ದಾನಿಗಳನ್ನು ಸ್ಮರಿಸಿ ಬಡಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಮುಖಂಡರು ಸಹಕರಿಸಿ ಎಂದರು.
ಮನ್ಮುಲ್ ನಿರ್ದೇಶಕ ಡಾಲುರವಿ ಮಾತನಾಡಿ, ಕದಿಯಲಾರದ ಸಂಪತ್ತು ವಿದ್ಯೆ. ಸರ್ಕಾರಿ ಶಾಲೆ ಮುಚ್ಚಿದರೆ ಬಡಮಕ್ಕಳ ಭವಿಷ್ಯ ಕಮರಿ ಹೋಗಲಿದೆ ಎಂದರು.ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕಿರಣ್, ಎಸ್‌ಡಿಎಂಸಿ ಅಧ್ಯಕ್ಷಎಂ.ಎನ್. ಯೋಗೇಶ್, ಮನ್ಮುಲ್ ನಿರ್ದೇಶಕ ಶೀಳನೆರೆ ಅಂಬರೀಷ್ ಮಾತನಾಡಿದರು. ಹೊಸಕೋಟೆ ನಾಗರಾಜು ಉಚಿತವಾಗಿ ನೀಡಿದ ಶಾಲಾ ವಾಹನವನ್ನು ಗಣ್ಯರ ಸಮ್ಮುಖದಲ್ಲಿ ಶಾಲೆಗೆ ಹಸ್ತಾಂತರಿಸಲಾಯಿತು.
ಈ ವೇಳೆ ಸಿಆರ್‌ಪಿ ಆಶಾರಾಣಿ, ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಮುಖಂಡರಾದ ರಾಮಕೃಷ್ಣೇಗೌಡ, ಶೇಖರ್, ಯೋಗೇಶ್, ಟೈಲರ್ ರಘು, ಮುಖ್ಯಶಿಕ್ಷಕಿ ಜ್ಯೋತಿಲಕ್ಷ್ಮೀ, ಶಿಕ್ಷಕರಾದ ದೇವರಾಜು, ನಂಜುಂಡಯ್ಯ, ರಾಜಪ್ಪ, ಪುಷ್ಪ, ಎಸ್‌ಡಿಎಂಸಿ ಸದಸ್ಯರು ಮತ್ತಿತರರು ಇದ್ದರು.ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆಪಾಂಡವಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ಬೆಟ್ಟದಲ್ಲಿ ಮಕರಜ್ಯೋತಿ ಹಿನ್ನೆಲೆಯಲ್ಲಿ ಭಕ್ತ ಮಂಡಳಿ ವತಿಯಿಂದ ಅಯ್ಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ತುಪ್ಪದ ಅಭಿಷೇಕ ನೆರವೇರಿಸಲಾಯಿತು. ಪಟ್ಟಣದ ಮಹಾಂಕಾಳೇಶ್ವರಿ ಬಡಾವಣೆ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನ ಪಕ್ಕದ ಅಯ್ಯಪ್ಪನ ಸನ್ನಿಧಿಯನ್ನು ಹೂವು, ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಿ ಅಯ್ಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ತುಪ್ಪದಅಭಿಷೇಕ ನೆರವೇರಿಸಲಾಯಿತು. ವಿಶೇಷವೆಂದರೆ ಭಕ್ತಾಧಿಗಳಿಗೆ ಕೈಯಾರ ತುಪ್ಪದ ಅಭಿಷೇಕ ನೆರವೇರಿಸಲು ಅವಕಾಶ ಕಲ್ಪಿಸಲಾಗಿತ್ತು. ಭಕ್ತಾಧಿಗಳು ತುಪ್ಪ ತಂದು ಅಯ್ಯಪ್ಪನಿಗೆಅಭೀಷೇಕ ಮಾಡಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು. ಸಂಜೆ ಭಜನೆಯೊಂದಿಗೆ ಅಯ್ಯಪ್ಪ ಪಡಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಈ ವೇಳೆ ಅಯ್ಯಪ್ಪ ಭಕ್ತಮಂಡಳಿಯ ಎಸ್.ಸುಬ್ರಹ್ಮಣ್ಯ, ಎಂ.ರಾಜು, ಮಂಜುನಾಥ, ಪ್ರಸನ್ನ, ಎಸ್.ರಾಜು, ಕಾಟು, ಶ್ರೀಧರ ಇತರರು ಪೂಜೆ ನೇತೃತ್ವ ವಹಿಸಿದ್ದರು.