ವರ್ಷದೊಳಗೆ ಕಾರಟಗಿ ತಾಲೂಕಿನ ಗ್ರಾಮೀಣ ರಸ್ತೆ ಅಭಿವೃದ್ಧಿ- ಸಚಿವ ಶಿವರಾಜ್ ತಂಗಡಗಿ

KannadaprabhaNewsNetwork | Published : Jan 14, 2024 1:31 AM

ಸಾರಾಂಶ

ಸಿದ್ದಾಪುರ ಹೋಬಳಿಯ ತುಂಗಭದ್ರ ನದಿ ತೀರದಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಮೊದಲ ಆದ್ಯತೆ ನೀಡಿಲಾಗಿದೆ. ಇಷ್ಟರಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರಲು ಟೆಂಡರ್ ಕರೆಯಲಾಗುತ್ತದೆ.

ಕಾರಟಗಿ: ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಕ್ಷೇತ್ರದ ಗ್ರಾಮೀಣ ರಸ್ತೆಗಳನ್ನು ವರ್ಷದೊಳಗೆ ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಜನರ ಸುಗಮ ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಕಳೆದ ಐದು ವರ್ಷಗಳಲ್ಲಿ ಕನಕಗಿರಿ ಕ್ಷೇತ್ರದ ಎಲ್ಲೆಡೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕೆಲವೆಡೆ ನಡೆದುಕೊಂಡು ಹೋಗದಷ್ಟು ಹಾಳಾಗಿವೆ. ಇದನ್ನು ಗಮನಿಸಿ ಮೊದಲು ಕ್ಷೇತ್ರದ ಗ್ರಾಮೀಣ ರಸ್ತೆಗಳನ್ನು ಮೊದಲು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆಗಳು ಮತ್ತು ವಿವಿಧ ಇಲಾಖೆಗಳಿಗೆ ಅನುದಾನ ಕೋರಿ ಪತ್ರ ಬರೆದಿದ್ದು, ಯೋಜನೆಗಳ ಜಾರಿಗೆ ನೀಲನಕ್ಷೆಗಳನ್ನು ಸಿದ್ಧಪಡಿಸಲಾಗಿದೆ. ಕೆಲವೊಂದು ಕೆಲಸಗಳಿಗೆ ಆರ್ಥಿಕ ಅನುಮೋದನೆ ದೊರೆತಿದ್ದರೆ, ಇನ್ನು ಕೆಲವು ಸರ್ಕಾರದ ಅನುಮತಿಗಾಗಿ ಕಾಯುತ್ತಿವೆ. ಕೊಟ್ಟ ಎಲ್ಲ ಯೋಜನೆಗಳ ಅನುಮೋದನೆ ಹಂತ ಹಂತವಾಗಿ ದೊರೆಲಿದೆ ಎಂದರು.ಮುಖ್ಯವಾಗಿ ಸಿದ್ದಾಪುರ ಹೋಬಳಿಯ ತುಂಗಭದ್ರ ನದಿ ತೀರದಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಮೊದಲ ಆದ್ಯತೆ ನೀಡಿಲಾಗಿದೆ. ಇಷ್ಟರಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರಲು ಟೆಂಡರ್ ಕರೆಯಲಾಗುತ್ತದೆ ಎಂದರು. ನದಿ ತೀರದ ರೈತರ ಬೇಡಿಕೆ ಪ್ರಕಾರ ಏತ ನೀರಾವರಿ ಯೋಜನೆ ಜಾರಿ ತರಲಾಗುವುದು. ಈ ಯೋಜನೆ ಬರುವುದರಿಂದ ಸುಮಾರು ೫ ಹಳ್ಳಿಗಳ ಕೃಷಿಗೆ ನೀರು ಸಿಗಲಿದೆ. ರೈತರ ಬೇಡಿಕೆ ಈಡೇರಿಸುವುದೇ ನನ್ನ ಧ್ಯೆಯ ಎಂದು ತಂಗಡಗಿ ಹೇಳಿದರು.ಚಾಲನೆ: ಕೆಕೆಆರ್‌ಡಿಬಿ ಯೋಜನೆಯಡಿ, ಪನ್ನಾಪುರ ಕ್ಯಾಂಪ್ ೮ನೇ ವಾರ್ಡ್ ನಲ್ಲಿ ₹೧೮ ಲಕ್ಷ ಹಾಗೂ ಕಾರಟಗಿ ೫ನೇ ವಾರ್ಡ್‌ನಲ್ಲಿ ₹೧೫ ಲಕ್ಷದ ಅಂಗವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಯನ್ನು ಸಚಿವರ ನೆರವೇರಿಸಿದರು.ನಂತರ ಟಿಎಸ್‌ಪಿ ಯೋಜನೆಯಡಿ, ಹುಳ್ಕಿಹಾಳ ಕ್ಯಾಂಪ್, ಚಳ್ಳೂರು ಕ್ಯಾಂಪ್, ದುಂಡಗಿ, ನಾಗನಕಲ್ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸುಮಾರು ₹೩.೯೩ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಬ್ಲಾಕ್ ಅಧ್ಯಕ್ಷ ಶರಣೇಗೌಡ ಬೂದುಗುಂಪಾ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ ದೇಸಾಯಿ, ಉದ್ಯಮಿ ಕೆ.ಸಿದ್ದನಗೌಡ, ಶಿವರೆಡ್ಡಿ ನಾಯಕ್, ಚೆನ್ನಬಸಪ್ಪ ಸುಂಕದ, ಬೂದಿ ಗಿರಿಯಪ್ಪ, ರಾಮಮೋಹನ್, ಶಿವಯ್ಯ ಚೆಳ್ಳೂರುಕ್ಯಾಂಪ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Share this article