ಗ್ರಾಮೀಣ ಕ್ರೀಡೆಗಳಿಂದ ಯುವಜನರಲ್ಲಿ ಸಾಮರಸ್ಯ: ದರ್ಶನ್

KannadaprabhaNewsNetwork |  
Published : Apr 08, 2025, 12:30 AM IST
೭ಕೆಎಂಎನ್‌ಡಿ-೫ಮಂಡ್ಯ ತಾಲೂಕು ಕೆರಗೋಡಿನಲ್ಲಿ ನಡೆದ ಕೆರಗೋಡು ವಾಲಿಬಾಲ್ ಪ್ರೀಮಿಯರ್ ಲೀಗ್‌ನ ವಿಜೇತ ತಂಡದೊಂದಿಗೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಇತರರು. | Kannada Prabha

ಸಾರಾಂಶ

ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ಆಸಕ್ತಿ ತೋರಿಸಿದರೆ ಅಪರಾಧ ಚಟುವಟಿಕೆಗಳನ್ನು ಕಡಿಮೆಯಾಗುತ್ತವೆ. ಜಿಲ್ಲೆಯಲ್ಲಿ ಗ್ರಾಮೀಣ ಕ್ರೀಡೆಗಳಿಗೆ ವಿಶೇಷವಾದ ಆಸಕ್ತಿ ಇದೆ. ನಮ್ಮ ಹಿರಿಯರು ಹಬ್ಬ-ಹರಿದಿನ, ಜಾತ್ರೆ, ಉತ್ಸವಗಳಲ್ಲಿ ಕ್ರೀಡೆ ಸ್ಪರ್ಧೆಗಳನ್ನು ಇಟ್ಟುಕೊಂಡು ಸಂಭ್ರಮಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣ ಕ್ರೀಡೆಗಳನ್ನು ಸಂಘಟಿಸುವ ಮೂಲಕ ಯುವಜನರಲ್ಲಿ ಸಾಮಾಜಿಕ ಸಾಮರಸ್ಯ ಹೆಚ್ಚಿಸಬಹುದಾಗಿದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಕೆರಗೋಡು ಫ್ರೆಂಡ್ಸ್ ಗ್ರೂಪ್ ವತಿಯಿಂದ ಗ್ರಾಮದಲ್ಲಿ ನಡೆದ ಕೆರಗೋಡು ವಾಲಿಬಾಲ್ ಪ್ರೀಮಿಯಂ ಲೀಗ್‌ನ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ಆಸಕ್ತಿ ತೋರಿಸಿದರೆ ಅಪರಾಧ ಚಟುವಟಿಕೆಗಳನ್ನು ಕಡಿಮೆಯಾಗುತ್ತವೆ. ಜಿಲ್ಲೆಯಲ್ಲಿ ಗ್ರಾಮೀಣ ಕ್ರೀಡೆಗಳಿಗೆ ವಿಶೇಷವಾದ ಆಸಕ್ತಿ ಇದೆ. ನಮ್ಮ ಹಿರಿಯರು ಹಬ್ಬ-ಹರಿದಿನ, ಜಾತ್ರೆ, ಉತ್ಸವಗಳಲ್ಲಿ ಕ್ರೀಡೆ ಸ್ಪರ್ಧೆಗಳನ್ನು ಇಟ್ಟುಕೊಂಡು ಸಂಭ್ರಮಿಸುತ್ತಿದ್ದರು. ಇಂದು ಅದು ಕಾಣೆಯಾಗಿದೆ. ಈ ಬಗ್ಗೆ ಎಲ್ಲರೂ ಹೆಚ್ಚಿನ ಆಸಕ್ತಿ ವಹಿಸುವ ಅವಶ್ಯಕತೆ ಇದೆ ಎಂದರು.

ವಾಲಿಬಾಲ್ ಅಪರೂಪವಾದ ಕ್ರೀಡೆ, ಇಂತಹ ಕ್ರೀಡೆಗಳು ಹೆಚ್ಚು ಹೆಚ್ಚು ನಡೆದಾಗ ಯುವಜನರಲ್ಲಿ ಸಂಘಟನಾ ಮನೋಭಾವ ಬೆಳೆಯುತ್ತದೆ. ಆ ಮೂಲಕ ಸೇವೆ ಮಾಡಲು ನಾಯಕತ್ವ ವೃದ್ಧಿಗೆ ಉಪಯುಕ್ತವಾಗುತ್ತದೆ ಎಂದರು.

ಸಮಾರಂಭದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ವಿನಯ್‌ಕುಮಾರ್, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಯೋಗೀಶ್, ಎಂಜಿನಿಯರ್ ಜಿ.ಎನ್.ಕೆಂಪರಾಜು, ಲೇಖಕಿ ಭವಾನಿ ಲೋಕೇಶ್, ಉಪನ್ಯಾಸಕ ರಾಜೇಂದ್ರ, ಚಿತ್ರಕೂಟ ಮುಖ್ಯಸ್ಥ ಅನಿಲ್‌ಪ್ರಭು, ಕೆರಗೋಡು ಪ್ರೆಂಡ್ಸ್ ಗ್ರೂಪ್‌ನ ಮುಖ್ಯಸ್ಥ ಅಮೃತ್‌ಕುಮಾರ್, ಸಂತೋಷ್ ಇತರರು ಉಪಸ್ಥಿತರಿದ್ದರು.

ಪ್ರಥಮ ಬಹುಮಾನ ಹಲ್ಲೇಗೆರೆ ಮಾರುತಿ ಬಾಯ್ಸ್ ತಂಡ ೨೫ ಸಾವಿರ, ದ್ವಿತೀಯ ಬಹುಮಾನ ಅಂಕಣ್ಣನದೊಡ್ಡಿ ಯುವಕರು ೧೫ ಸಾವಿರ ರು., ತೃತೀಯ ಬಹುಮಾನ ಕಲ್ಮಂಟಿದೊಡ್ಡಿ ಯುವಕರು ೧೦ ಸಾವಿರ ನಗದು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು.

ಶ್ರೀರಾಮನವಮಿ ಆಚರಣೆ

ಮಂಡ್ಯ:

ನಗರದ ಹೌಸಿಂಗ್ ಬೋರ್ಡ್‌ನ ಬಿ.ವಿ.ಕೆ. ಬಡಾವಣೆಯ ವಿನಯಮಾರ್ಗದಲ್ಲಿ ಶ್ರೀರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ, ಅಲ್ಲಿನ ನಿವಾಸಿಗಳಿಗೆ ಕೋಸಂಬರಿ, ಮಜ್ಜಿಗೆ, ಪಾನಕ ವಿತರಿಸಿ ಸಂಭ್ರಮಿಸಿದರು. ವಿನಯಮಾರ್ಗದ ರಸ್ತೆಯಲ್ಲಿ ರಾಮ ಸೀತೆಯರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ, ಶ್ರೀರಾಮನ ನಾಮ ಪಟಿಸಿ, ಮಂತ್ರಗಳ ಮೂಲಕ ರಾಮನಲ್ಲಿ ಬೇಡಿಕೆಗಳನ್ನಿಟ್ಟು, ಹರಸುವಂತೆ ಪ್ರಾರ್ಥಿಸಲಾಯಿತು. ಸ್ಥಳೀಯ ಮಕ್ಕಳು, ಶ್ರೀರಾಮ, ಸೀತಾಮಾತೆ, ಶ್ರೀ ಆಂಜನೇಯಸ್ವಾಮಿ ವೇಷ ಧರಿಸಿ ಶ್ರೀರಾಮನವಮಿಯ ಆಚರಣೆಗೆ ಮೆರುಗು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ