ಕೊಪ್ಪಳ: ನಾಟಕ ಅಕಾಡೆಮಿ ಹಾಗೂ ತಾಲೂಕು ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ವಿಭಾಗೀಯ ಮಟ್ಟದ ನಾಟಕೋತ್ಸವಕ್ಕೆ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಚಾಲನೆ ನೀಡಿದರು.
ಹಿರಿಯ ಪತ್ರಕರ್ತ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದ ಶರಣಪ್ಪ ಬಾಚಲಾಪುರ ಮಾತನಾಡಿ, ರಂಗಭೂಮಿಗೆ ದೊಡ್ಡ ಕೊಡುಗೆ ನೀಡಿದ ಜಿಲ್ಲೆ ಕೊಪ್ಪಳ.ಇಲ್ಲಿ ರಂಗಭೂಮಿ ಇತಿಹಾಸದಲ್ಲಿ ವೃತ್ತಿ ರಂಗಭೂಮಿಗೆ ಗರುಡ ಸದಾಶಿವರಾಯ, ಮೂರು ಜನರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಬಂದಿದೆ. ಇಲ್ಲಿ ಕಲಾವಿದರ ಪಡೆ ಇದೆ.ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿದೆ. ಜಿಲ್ಲಾ ರಂಗಮಂದಿರ ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಂಗಪ್ಪ ಮಾತನಾಡಿ, ಮೂಲೆ ಮೂಲೆಯಲ್ಲಿರುವ ಕಲಾವಿದರನ್ನು ಹುಡುಕಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.ಈ ವೇಳೆ ಅಮ್ಜದ್ ಪಟೇಲ್, ಸಾವಿತ್ರಿ ಮುಜುಮದಾರ ಮಾತನಾಡಿದರು. ಶರಣಪ್ಪ ಸಜ್ಜನ, ಶಿವನಾಯ್ಕ ದೊರೆ, ಸಾದಿಕ್ ಅಲಿ, ಅಬ್ದುಲ್ ರವೂಫ್ ಕಿಲ್ಲೇದಾರ, ಜಿ ವಂದನಾ, ಆಸೀಫ್ ಕರ್ಕಿಹಳ್ಳಿ. ಎಸ್.ಟಿ. ಹಂಚಿನಾಳ, ಬಸವರಾಜ ಕವಲೂರು, ಬನ್ನೆಪ್ಪಗೌಡ, ಎ.ವಿ.ಕಣವಿ, ರಾಮಣ್ಣ ಕಲ್ಲಣ್ಣನವರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ತೋಟಪ್ಪ ಕಾಮನೂರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಚಾಂದಪಾಷಾ ಕಿಲ್ಲೇದಾರ ಸ್ವಾಗತಿಸಿದರು.