ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ಅಗತ್ಯವಿದೆ: ಮಾನೆ

KannadaprabhaNewsNetwork |  
Published : Nov 19, 2026, 02:30 AM IST
ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ ಬಳಿಯ ರೋಶನಿ ಸಭಾಭವನದಲ್ಲಿ ಮಹಿಳಾ ಉದ್ಯೋಗ ಮೇಳವನ್ನು ಶಾಸಕ ಶ್ರೀನಿವಾಸ್ ಮಾನೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಈಗ ಹಳ್ಳಿಗಳು ಪರಿವರ್ತನೆ ಆಗಿವೆ. ಹಳ್ಳಿಗಳಲ್ಲಿ ಬಹು ದೊಡ್ಡ ಸಂಖ್ಯೆಯ ಪ್ರತಿಭಾವಂತ ಪರಿಶ್ರಮಿಗಳಿದ್ದಾರೆ. ಅವರಿಗೆ ಒಳ್ಳೆಯ ಅವಕಾಶ ನೀಡುವ ಅಗತ್ಯವಿದೆ.

ಹಾನಗಲ್ಲ: ಶ್ರಮದಿಂದ ಸಾಧನೆ ಮಾಡಲು ನಮ್ಮ ಸಾಮರ್ಥ್ಯಕ್ಕೆ ಮಾರ್ಗದರ್ಶನದ ಅವಶ್ಯಕತೆ ಇದೆ. ಇದಕ್ಕೆ ಹಣಕಾಸಿನ ಬೆಂಬಲವೂ ಬೇಕು ಎಂದು ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಮಾನೆ ತಿಳಿಸಿದರು.

ಮಂಗಳವಾರ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿ ಇರುವ ರೋಶನಿ ವ್ಯಸನಮುಕ್ತಿ ಕೇಂದ್ರದ ಸಭಾಂಗಣದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್, ರೋಶನಿ ಸಮಾಜ ಸೇವಾ ಸಂಸ್ಥೆ, ಲೋಯಲಾ ವಿಕಾಸ ಕೇಂದ್ರ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ರಾಷ್ಟ್ರೀಯ ನಗರಸ್ವಯಂ ಉದ್ಯೋಗ ಯೋಜನೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವರ್ತಕರ ಸಂಘ, ಹೋಟೆಲ್ ಮಾಲಿಕರ ಸಂಘ ಸೇರಿದಂತೆಇನ್ನಿತರ ಸಂಘ, ಸಂಸ್ಥೆಗಳ ಸಹಭಾಗಿತ್ವದಡಿ ಆಯೋಜಿಸಿದ ಮಹಿಳಾ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗ ಹಳ್ಳಿಗಳು ಪರಿವರ್ತನೆ ಆಗಿವೆ. ಹಳ್ಳಿಗಳಲ್ಲಿ ಬಹು ದೊಡ್ಡ ಸಂಖ್ಯೆಯ ಪ್ರತಿಭಾವಂತ ಪರಿಶ್ರಮಿಗಳಿದ್ದಾರೆ. ಅವರಿಗೆ ಒಳ್ಳೆಯ ಅವಕಾಶ ನೀಡುವ ಅಗತ್ಯವಿದೆ. ಮಹಿಳೆ ಈಗ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದಾಳೆ. ಪುರುಷನಿಗೆ ಸಮನಾಗಿ ದುಡಿಯುವ ಶಕ್ತಿಯನ್ನೂ ಹೊಂದಿದ್ದಾಳೆ. ಇಂತಹ ಸಮಯದಲ್ಲಿ ಹಾನಗಲ್ಲ ತಾಲೂಕಿನ ಮಹಿಳೆಯರು ಉತ್ತಾದಿಸಿದ ಸಾಮಗ್ರಿಗಳಿಗೆ ಮಾರುಕಟ್ಟೆ ಒದಗಿಸುವ ಒಂದು ಪ್ರಯತ್ನ ನಡೆದಿದೆ. ಇಷ್ಟರಲ್ಲೆ ಎಳವಟ್ಟಿ ಸಮೀಪದಲ್ಲಿ ಗುರುತಿಸಿದ ಮಾವು ಸಂಸ್ಕರಣಾ ಘಟಕ ಕಾರ್ಯಾರಂಭಕ್ಕೆ ಯತ್ನ ನಡೆದಿದೆ. ಅಲ್ಲದೇ ೧ ಸಾವಿರ ಜನರಿಗೆ ಉದ್ಯೋಗ ಕೊಡುವ ಉದ್ಯಮವೊಂದನ್ನು ಸ್ಥಾಪಿಸುವ ಯೋಚನೆಯೂ ಇದೆ ಎಂದರು.

ಉದ್ಯಮಿ ವಿಜಯ ಮಾನೆ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ೧೦ ಸಾವಿರ ಮಹಿಳೆಯರು ಗೃಹ ಕೈಗಾರಿಕಾ ಉದ್ಯೋಗದಲ್ಲಿ ತೊಡಗಿದವರಿದ್ದಾರೆ. ಇಂತಹ ಮಹಿಳೆಯರ ಉದ್ಯೋಗಕ್ಕೆ ಮಾರುಕಟ್ಟೆ ಒದಗಿಸುವ ಸದುದ್ದೇಶ ನಮಗಿದೆ. ಮಾರುಕಟ್ಟೆಯ ಸಂಪರ್ಕ ಸಿಕ್ಕಲ್ಲಿ ಇಲ್ಲಿನ ಗೃಹ ಕೈಗಾರಿಕೆಗಳಲ್ಲಿ ಸಿದ್ಧವಾದ ವಸ್ತುಗಳಿಗೆ ದೊಡ್ಡ ಬೆಲೆ ಬರಲಿದೆ. ಆಗ ಮಹಿಳಾ ಸ್ವಾವಲಂಬನೆ ಸಾಧ್ಯ ಎಂದರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ದುಡಿಮೆಗೆ ತಕ್ಕ ಆರ್ಥಿಕ ಬಲ ಸಿಕ್ಕೆರೆ ಮಾತ್ರ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಇಲ್ಲಿ ನಡೆಯುತ್ತಿರುವ ಉದ್ಯೋಗ ಮೇಳ ಸಹಕಾರಿಯಾಗಬಲ್ಲದು. ಇದು ಹಾನಗಲ್ಲ ತಾಲೂಕಿನ ಉದ್ಯಮಿಗಳಿಗೆ ಸುವರ್ಣಾವಕಾಶ ಎಂದರು.

ಶಿರಸಿಯ ಟಿಎಸ್‌ಎಸ್ ಮಾಜಿ ಸಿಇಓ ರವೀಶ ಹೆಗಡೆ, ಆನ್‌ಲೈನ್‌ ಮಾರುಕಟ್ಟೆ ತಜ್ಞ ದೇವೇಂದ್ರ ಬನ್ಶಾಲಿ, ಚಿಂತನಾ ಗೊಲ್ಲರ ಮಾತನಾಡಿದರು. ಹುಮ್ಯಾನಿಟಿ ಫೌಂಡೇಶನ್ ಅಧ್ಯಕ್ಷೆ ಸ್ವಾತಿ ಮಾಳಗಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರೇಶ ಬೈಲವಾಳ, ಆದರ್ಶ ಶೆಟ್ಟಿ, ಗುರುರಾಜ ನಿಂಗೋಜಿ, ವಿನ್ಸಂಟ್ ಜೇಸನ್, ಅನಿತಾ ಡಿಸೋಜಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹದ ಅಧಿಕಾರಿ ಜಗದೀಶ ಕಮ್ಮಾರ, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ.ಜಗದೀಶ, ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ