ರಷ್ಯಾದ ಹುತಾತ್ಮ ಯೋಧನಿಗೆ ಗೋಕರ್ಣದಲ್ಲಿ ಅಪರ ಕಾರ್ಯ

KannadaprabhaNewsNetwork |  
Published : Jun 18, 2025, 01:00 AM ISTUpdated : Jun 18, 2025, 01:01 AM IST
ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ | Kannada Prabha

ಸಾರಾಂಶ

ದಶಕದ ಹಿಂದೆ ಭಾರತಕ್ಕೆ ಬಂದಿದ್ದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಇಲ್ಲಿನ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.

ಗೋಕರ್ಣ: ಮುಕ್ತಿ ಮತ್ತು ಸಿದ್ದಿ ಕ್ಷೇತ್ರವಾದ ಗೋಕರ್ಣದಲ್ಲಿ ವಿದೇಶಿ ಯುದ್ದದಲ್ಲಿ ವೀರಮರಣ ಹೊಂದಿದ ಯೋಧನಿಗೆ ಅಪರ ಕಾರ್ಯ ನೆರವೇರಿಸಲಾಯಿತು.

ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಅವರಿಗೆ ಗೋಕರ್ಣದಲ್ಲಿ ಮುಕ್ತಿ ಸಿಕ್ಕಿದೆ. ನಾರಾಯಣ ಬಲಿ ಕಾರ್ಯ ನಡೆಸಿ ಯೋಧ ಸೆರ್ಗಯ್ ಗ್ರಾಬ್ಲವ್ ಅವರಿಗೆ ಮೋಕ್ಷ ಸಿಗಲಿ ಎಂದು ಪ್ರಾರ್ಥಿಸಲಾಗಿದೆ. ಪೊರೋಹಿತ ಪ್ರಶಾಂತ ಹಿರೇಗಂಗೆ ನೇತೃತ್ವದಲ್ಲಿ ಶಾಸ್ತೊಕ್ತ ವಿಧಿ ವಿಧಾನ ನೆರವೇರಿತು.

ದಶಕದ ಹಿಂದೆ ಭಾರತಕ್ಕೆ ಬಂದಿದ್ದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಇಲ್ಲಿನ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆ ಪ್ರೀತಿ ಅವರನ್ನು ಗೋಕರ್ಣಕ್ಕೆ ಕರೆತಂದಿತು. ಹಿಂದುತ್ವದ ಕಡೆ ಆಕರ್ಷಣೆ ಹೊಂದಿದ ಅವರು ವಾರಣಾಸಿಯಲ್ಲಿ ಕಾಲ ಕಳೆದಿದ್ದರು. ಅಲ್ಲಿ ವೇದ ಮಂತ್ರಗಳ ಜತೆ ಸಂಸ್ಕೃತ ಅಧ್ಯಯನ ಮಾಡಿದ್ದರು. ಅದಾದ ನಂತರ ಸ್ವಂತ ಹೋಮ-ಹವನ ಮಾಡುವಷ್ಟು ಪ್ರಾವೀಣ್ಯತೆ ಪಡೆದಿದ್ದರು.

ಸೆರ್ಗೆಯ್ ಬಾಬಾ ಆಗಿ ಬದಲಾಗಿದ್ದ ಸೆರ್ಗಯ್ ಗ್ರಾಬ್ಲವ್ ಗೋಕರ್ಣವನ್ನು ನೆಚ್ಚಿಕೊಂಡಿದ್ದರು. ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಗೋಕರ್ಣಕ್ಕೆ ಬರುತ್ತಿದ್ದರು. ೧೮ ವರ್ಷಗಳಿಂದ ಗೋಕರ್ಣದ ಒಡನಾಟ ಹೊಂದಿದ ಅವರು ಸಾವಿರಕ್ಕೂ ಅಧಿಕ ಭಕ್ತರನ್ನು ಸಂಪಾದಿಸಿದ್ದರು. ಸೇನೆ ತೊರೆದಿದ್ದ ಅವರು ರಷ್ಯಾ-ಉಕ್ರೇನ್ ಯುದ್ಧ ಘೋಷಣೆ ಆದ ಕೂಡಲೇ ಮತ್ತೆ ಸೈನ್ಯ ಸೇರಿದ್ದರು.

ಏ.೨೬ರಂದು ಅವರು ಯುದ್ಧದಲ್ಲಿ ವೀರಮರಣ ಹೊಂದಿದ್ದರು. ಹೀಗಾಗಿ ಅವರಿಗೆ ಗೋಕರ್ಣದಲ್ಲಿ ಪಿಂಡ ಪ್ರಧಾನ ಮಾಡಲಾಗಿದೆ. ಈ ಬಗ್ಗೆ ಅವರ ಒಡನಾಡಿ ಪರಮೇಶ್ವರ ಶಾಸ್ತ್ರೀ ಮಾಹಿತಿ ಹಂಚಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ