ಉಡುಪಿ: ಜೇನು ಕಂಠದ ಗಾಯಕಿ ಜಾನಕಿಗೆ ನಮನ

KannadaprabhaNewsNetwork |  
Published : Oct 05, 2026, 02:30 AM IST
04ಜಾನಕಿ | Kannada Prabha

ಸಾರಾಂಶ

ಇಲ್ಲಿನ ಕೋಸ್ಟಲ್‌ ಸ್ಟಾರ್‌ ಮ್ಯೂಸಿಕ್‌ ಕ್ಲಬ್‌ ಆಶ್ರಯ, ಕರ್ಣಾಟಕ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ಪ್ರಸಿದ್ಧ ಸಂಗೀತ ಕಲಾವಿದರ ಕೂಡುವಿಕೆಯಲ್ಲಿ ಇತ್ತೀಚೆಗೆ ನಿಧನ ಹೊಂದಿದ ದೇಶದ ಅಗ್ರ ಸಿನೆಮಾ ಗಾಯಕಿ ಎಸ್‌. ಜಾನಕಿ ಅವರ ಗಾನ ಸ್ಮರಣೆಯ ಜಾನಕಿ ನಮನ ಕಾರ್ಯಕ್ರಮ ನಡೆಯಿತು.

ಉಡುಪಿ: ಇಲ್ಲಿನ ಕೋಸ್ಟಲ್‌ ಸ್ಟಾರ್‌ ಮ್ಯೂಸಿಕ್‌ ಕ್ಲಬ್‌ ಆಶ್ರಯ, ಕರ್ಣಾಟಕ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ಪ್ರಸಿದ್ಧ ಸಂಗೀತ ಕಲಾವಿದರ ಕೂಡುವಿಕೆಯಲ್ಲಿ ಇತ್ತೀಚೆಗೆ ನಿಧನ ಹೊಂದಿದ ದೇಶದ ಅಗ್ರ ಸಿನೆಮಾ ಗಾಯಕಿ ಎಸ್‌. ಜಾನಕಿ ಅವರ ಗಾನ ಸ್ಮರಣೆಯ ಜಾನಕಿ ನಮನ ಕಾರ್ಯಕ್ರಮ ನಡೆಯಿತು.ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಹೆಸರಾಂತ ಗಾಯಕಿ ಮತ್ತು ಗಾಯಕರು ಹಾಗೂ ಹಿನ್ನೆಲೆ ಸಂಗೀತ ಕಲಾವಿದರು ಸತತ ಮೂರು ಗಂಟೆಗಳ ಕಾಲ ಎಸ್‌. ಜಾನಕಿಯವರ ಚಿರಸ್ಥಾಯಿ ಹಾಡುಗಳನ್ನು ಹಾಡಿ ಸಂಗೀತ ರಸಿಕರ ಕಿವಿಮನಗಳನ್ನು ತಣಿಸಿದರು.

ಗೋಲ್ಡನ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದ ಸಂಗೀತಾ ಬಾಲಚಂದ್ರ, ಸರಿಗಮಪ ಜ್ಯೂರಿ ಮಾಲಿನಿ ಕೇಶವಪ್ರಸಾದ್‌, ಗಣೇಶ್‌ ಕಾರಂತ್‌, ಗೌರವ್ ಕಾಮತ್, ರಿಷಿಕಾ ಮೂಡ್ಲಕಟ್ಟೆ ಹಾಗೂ ರಮ್ಯಾ ಸುಧೀಂದ್ರ, ಸ್ವಾತಿ ಅರವಿಂದ್‌, ಶ್ರುತಿ ವೈದ್ಯ ಅವರು ಎಸ್‌. ಜಾನಕಿಯವರ ಹಾಡುಗಳಿಗೆ ಧ್ವನಿಯಾದರು. ಹಿನ್ನೆಲೆಯಲ್ಲಿ ರಾಜೇಶ್‌ ಭಾಗವತ್‌, ರಾಜಗೋಪಾಲ್‌, ಗುರುರಾಜ್‌, ಪ್ರತಾಪ್‌ ಆಚಾರ್ಯ, ವರ್ಷಾ ಆಚಾರ್ಯ ಸಹಕರಿಸಿದರು. ಕರ್ಣಾಟಕ ಬ್ಯಾಂಕ್‌ ಆರ್‌ಜಿಎಂ ರಮೇಶ್‌ ವೈದ್ಯ ಮತ್ತು ರಾಜ್ಯ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅರವಿಂದ ಕಾಮತ್‌ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಸ್ಟಲ್‌ ಸ್ಟಾರ್‌ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್‌ ಕಾಮತ್‌, ಸಹಸಂಸ್ಥಾಪಕರಾದ ವೆಂಕಟೇಶ್‌ ಕಾಮತ್‌, ವಂದಿತಾ ಕಾಮತ್‌ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಜೀವನ ಸಹಕಾರ ಸಂಘ ವಾರ್ಷಿಕ ಮಹಾಸಭೆ
ಸಮಸ್ಯೆಗಳಿಗೆ ಕಾಲಮಿತಿಯ ಪರಿಹಾರ: ಮಂತರ್‌ ಗೌಡ