ಎಸ್.ಎಲ್.ಭೈರಪ್ಪ ನಿಧನಕ್ಕೆ ಗಣ್ಯರ ಸಂತಾಪ

KannadaprabhaNewsNetwork |  
Published : Sep 25, 2025, 01:03 AM IST

ಸಾರಾಂಶ

ಭೈರಪ್ಪನವರು ಕನ್ನಡದ ಸಾಕ್ಷಿ ಪ್ರಜ್ರೆಯಂತಿದ್ದರು. ಕಾದಂಬರಿ ಪ್ರಕಾರಕ್ಕೆ ಅವರದೇ ಆದ ಅನನ್ಯ ಮಾದರಿಯೊಂದನ್ನು ನಿರ್ಮಿಸಿದ್ದರು ಪ್ರಖರ ಚಿಂತನಾಕ್ರಮವನ್ನು ನಮಗಾಗಿ ನೀಡಿದ ಮಹನೀಯರಾಗಿದ್ದರು ಹೊಸ ಬರೆಹಗಾರರ ಐಕಾನ ಆಗಿದ್ದರು. ಅವರನ್ನು ಕಳೆದುಕೊಂಡದ್ದು ಕನ್ನಡ ಸಾಹಿತ್ಯಕ್ಕೆ ತುಂಬಿ ಬಾರದ ಹಾನಿಯಾಗಿದೆ.-ಡಾ.ಬಾಳಾಸಾಹೇಬ ಲೋಕಾಪೂರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ.

ಭೈರಪ್ಪನವರು ಕನ್ನಡದ ಸಾಕ್ಷಿ ಪ್ರಜ್ರೆಯಂತಿದ್ದರು. ಕಾದಂಬರಿ ಪ್ರಕಾರಕ್ಕೆ ಅವರದೇ ಆದ ಅನನ್ಯ ಮಾದರಿಯೊಂದನ್ನು ನಿರ್ಮಿಸಿದ್ದರು ಪ್ರಖರ ಚಿಂತನಾಕ್ರಮವನ್ನು ನಮಗಾಗಿ ನೀಡಿದ ಮಹನೀಯರಾಗಿದ್ದರು ಹೊಸ ಬರೆಹಗಾರರ ಐಕಾನ ಆಗಿದ್ದರು. ಅವರನ್ನು ಕಳೆದುಕೊಂಡದ್ದು ಕನ್ನಡ ಸಾಹಿತ್ಯಕ್ಕೆ ತುಂಬಿ ಬಾರದ ಹಾನಿಯಾಗಿದೆ.

-ಡಾ.ಬಾಳಾಸಾಹೇಬ ಲೋಕಾಪೂರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ.

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ಸಾಹಿತಿಗಳು, ಸರಸ್ವತಿ ಪುತ್ರರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್.ಎಲ್.ಭೈರಪ್ಪ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಅಗಲುವಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ದಾಟು, ಭಿತ್ತಿ, ಗೃಹಭಂಗ, ಪರ್ವ, ನಾಯಿ ನೆರಳು, ಉತ್ತರಕಾಂಡ, ದೂರ ಸರಿದವರು, ವಂಶವೃಕ್ಷ ಹೀಗೆ ಹಲವು ಕಾದಂಬರಿಗಳ ಮೂಲಕ ಓದುಗರ ಮನಸಿನಲ್ಲಿ ಹಾಗೂ ಸಾಹಿತ್ಯ ಲೋಕದಲ್ಲಿ ಅವರು ಎಂದಿಗೂ ಅಜರಾಮರವಾಗಿ ಉಳಿಯುತ್ತಾರೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಕುಟುಂಬ ವರ್ಗದವರಿಗೆ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

-ಜಗದೀಶ ಶೆಟ್ಟರ್, ಮಾಜಿ ಸಿಎಂ, ಸಂಸದರು.

ನಾಡಿನ ಪ್ರಮುಖ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳು ಇತರೆ ಬರೆಹಗಳು ಹೊಸ ಚಿಂತನೆ, ಹೊಸ ರಚನೆಗೆ ಪ್ರೇರಣೆಯನ್ನೊದಗಿಸುತ್ತಿದ್ದವು. ಅವರ ಅನೇಕ ಕಾದಂಬರಿಗಳು ಬೇರೆ ಭಾಷೆಗಳಲ್ಲಿ ಅನುವಾದಗೊಂಡು ಜಾಗತಿಕ ಮನ್ನಣೆಗೆ ಪಾತ್ರವಾಗಿದ್ದವಲ್ಲದೆ. ಅನೇಕ ಸಲ ಮರುಮುದ್ರಣಗೊಳ್ಳುತ್ತಿದ್ದವು. ಅಷ್ಟೇ ಬೇಗನೆ ಮಾರಾಟವಾಗುತ್ತಿದ್ದವು. ಇದು ಜನರ ನಾಡಿಮಿಡಿತವರಿತ ಜನಮಾನಸಕ್ಕೆ ಚೇತೋಹಾರಿಯೆನಿಸಿದ್ದವು. ಅವರ ಕಾದಂಬರಿಯ ಪಾತ್ರಗಳು ಪರಿಚಿತರಂತೆನಿಸಿ ನಮ್ಮ ನಡುವಿನ ವ್ಯಕ್ತಿಗಳಂತೆ ಭಾಸವಾಗುತ್ತಿದ್ದವು. ಡಾ.ಭೈರಪ್ಪನವರು ತುಂಬು ಜೀವನ ನಡೆಸಿ ಸಾರ್ಥಕವಾಗಿ ಬಾಳಿ, ಇಹಕ್ಕೆ ವಿದಾಯವನ್ನು ಹೇಳಿದ್ದಾರೆ. ಆದರೆ, ಅವರ ಸಾಹಿತ್ಯ ನಮಗೆ ದಾರಿದೀಪವಾಗಿದೆ. ಅವರ ದಿವ್ಯಾತ್ಮಕ್ಕೆ ಗೌರವದಿಂದ ನಮಿಸಿ ಚಿರಶಾಂತಿಯನ್ನು ಕೋರುವೆ.

-ಡಿ.ಎನ್.ಅಕ್ಕಿ, ಹಿರಿಯ ಸಾಹಿತಿ ಇಂಡಿ.ಕನ್ನಡ ಸಾರಸ್ವತ ಲೋಕದ ಖ್ಯಾತ ಕಾದಂಬರಿಕಾರರು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಆಗಿರುವ ನಾಡೋಜ ಡಾ.ಎಸ್.ಎಲ್.ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಅವರ ಹಲವಾರು ಕಾದಂಬರಿಗಳನ್ನು ಓದಿ ಸಂಭ್ರಮಿಸಿದ್ದೇನೆ. ಭಾರತೀಯ ಹಲವಾರು ಭಾಷೆಗಳಲ್ಲಿ ಅವರ ಕಾದಂಬರಿಗಳು ಭಾಷಾಂತರಗೊಂಡಿರುವುದು ಅವರನ್ನು ಅಮರರನ್ನಾಗಿಸಿದೆ. ಅವರ ಅಭಿಮಾನಿಗಳಿಗೆ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

-ಅಪ್ಪಾಸಾಹೇಬ ಅಲಿಬಾದಿ,

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರು.ನಾಡೋಜ ಡಾ.ಎಸ್.ಎಲ್.ಭೈರಪ್ಪನವರ ಪರ್ವ, ವಂಶವೃಕ್ಷ, ನಾಯಿ ನೆರಳು, ದಾಟು, ತಂತು, ಆವರಣ ಸೇರಿದಂತೆ ಅವರ 21 ಕಾದಂಬರಿಗಳಲ್ಲಿ ಆಳವಾದ ಅನುಭವ, ಅಧ್ಯಯನ ಶೀಲತೆ ಕಾಣುತ್ತೇವೆ. ಅವರು ನಮ್ಮ ಕನ್ನಡದ ಕಾದಂಬರಿಕಾರರೆನ್ನುವುದೇ ಒಂದು ಹೆಮ್ಮೆ, ಗೌರವ ಅಭಿಮಾನದ ಸಂಗತಿಯಾಗಿದೆ. ಓದುಗ ಅಭಿಮಾನಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

-ಭಾರತಿ ಅಪ್ಪಾಸಾಹೇಬ ಅಲಿಬಾದಿ, ಸಾಹಿತಿ.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ