- 5 ಬಾರಿ ನಿರಂತರ ಗೆಲುವು । 4ನೇ ಬಾರಿ ಅಧ್ಯಕ್ಷರಾಗಿ ಆಯ್ಕೆ । ಉಪಾಧ್ಯಕ್ಷರಾಗಿ ಲಕ್ಷ್ಮಣ್ ಶಿವಪ್ಪನವರ್ - - - ಕನ್ನಡಪ್ರಭ ವಾರ್ತೆ ಹರಿಹರ
ದಿ ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್ ಕೋ,ಆಪ್ ಸೊಸೈಟಿಯ ಪ್ರಗತಿಯ ಸಾಧನೆಯೇ ನಮ್ಮ ಗೆಲುವಿಗೆ ಸಹಕಾರಿಯಾಗಿದೆ ಎಂದು ಎಸ್.ಆರ್. ಬಿರಾದಾರ್ ಹೇಳಿದರು.ನಗರದ ಯಂತ್ರಪುರ ಸೊಸೈಟಿ ಕಚೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರು ಮಾತನಾಡಿದರು. 20 ವರ್ಷಗಳಿಂದ ನಮ್ಮ ಅಧ್ಯಕ್ಷರ ಅವಧಿಯಲ್ಲಿ ಆದಂತಹ ಪ್ರಗತಿಗಳ ಕೆಲಸಗಳನ್ನು ನೋಡಿರುವ ಷೇರುದಾರರು ಈ ಬಾರಿ ಮತ್ತೊಮ್ಮೆ ನಮ್ಮ ತಂಡ ಗೆಲ್ಲಲು ಸಹಕಾರ ನೀಡಿದ್ದಾರೆ ಎಂದರು.
ಸೊಸೈಟಿಯಿಂದ ಬಂದ ಲಾಭಾಂಶದಿಂದ 12 ವಾಹನಗಳು ಹಾಗೂ ಸಿಲಿಂಡರ್ ಸಾಗಾಣಿಕೆಗೆ ಎರಡು ದೊಡ್ಡ ಅಶೋಕ ಲೇಲ್ಯಾಂಡ್ ಲಾರಿಗಳನ್ನು ಖರೀದಿಸಲಾಗಿದೆ. ಅಲ್ಲದೇ, ಸಿಲಿಂಡರ್ ದಾಸ್ತಾನುಗೊಳಿಸುವ ಗೋದಾಮು ಕಟ್ಟಡ ಹಾಗೂ ಕಚೇರಿಯು ಸ್ವಂತ ಕಟ್ಟಡ ಹೊಂದಿದೆ. ನಮ್ಮ ಸೊಸೈಟಿ ಯಾವುದೇ ಸಾಲವಿಲ್ಲದೇ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸೊಸೈಟಿಯ ಷೇರುದಾರರಿಗೆ ಶೇ.4ರಷ್ಟಿದ್ದ ಡಿವಿಡೆಂಡ್ ಅನ್ನು ನಾನು ಅಧ್ಯಕ್ಷನಾದ ನಂತರ ಹಂತ ಹಂತವಾಗಿ ಹೆಚ್ಚಿಸುತ್ತಾ ಬಂದಿದ್ದೇವೆ. ಇದೀಗ ಶೇ. 22 ಡಿವಿಡೆಂಡ್ ನೀಡಲಾಗುತ್ತಿದೆ. ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಹೆಚ್ಚಳ ಹಾಗೂ ಇಎಸ್‍ಐ, ಪಿಎಫ್ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.
2015ರಲ್ಲಿ ಜಾರಿಗೆ ತಂದಿದ್ದ ಷೇರುದಾರರು ಮೃತರಾದರೆ, ಅವರ ಶವಸಂಸ್ಕಾರಕ್ಕೆ ₹2000 ಸಹಾಯಧನ ನೀಡಲಾಗುತ್ತಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಈ ಮೊತ್ತವನ್ನು ₹3000ಕ್ಕೆ ಏರಿಕೆ ಮಾಡಿದ್ದೆವು. ಅನಂತರ 2019ರ ಕೊರೋನಾ ಸಂದರ್ಭದಲ್ಲಿ ₹5,000ಕ್ಕೆ ಏರಿಕೆ ಮಾಡಲಾಯಿತು. ಈಗ ಮತ್ತೆ ಈ ಮೊತ್ತವನ್ನು ₹7000ಕ್ಕೆ ಏರಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಸತತವಾಗಿ ನನ್ನನ್ನು 5 ಬಾರಿ ಗೆಲ್ಲಿಸಿ, ನನ್ನ ತಂಡವನ್ನು 4 ಬಾರಿ ಗೆಲ್ಲಿಸಿದ್ದಾರೆ. ಸೊಸೈಟಿ ಷೇರುದಾರರ ಸಹಕಾರದಿಂದ ಪ್ರಗತಿಯತ್ತ ಮುನ್ನಡೆಸುವ ಕೆಲಸವನ್ನು ನಮ್ಮ ತಂಡವು ಮಾಡುತ್ತಿದೆ. ನಮ್ಮ ತಂಡದ ಗೆಲುವಿಗೆ ಸಹಕಾರ ನೀಡಿದ ಷೇರುದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸೊಸೈಟಿಯ ಕಾರ್ಯದರ್ಶಿ ವಿಠ್ಠಲ್ ಎಂ.ಪಾಂಡುರಂಗಿ, ಖಜಾಂಚಿ ಸುರೇಶ್ ನಂದಿ ಹಾಗೂ ಸಿಬ್ಬಂದಿ ಇದ್ದರು.- - -
ಬಾಕ್ಸ್ * ಲಕ್ಷ್ಮಣ್ ಶಿವಪ್ಪನವರ್ ಉಪಾಧ್ಯಕ್ಷರಾಗಿ ಆಯ್ಕೆನಿರ್ದೇಶಕ ಲಕ್ಷ್ಮಣ್ ಎಚ್. ಶಿವಪ್ಪನವರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಗೆದ್ದಿರುವ ಎಚ್.ಜಿ.ಕುಲಕರ್ಣಿ, ಜಯರಾಮ್ ಎಂ, ಮುಬಾರಕ್ ಎಂ.ಡಿ, ಸೂರ್ಯ ಗಾಂವಾಕರ್ ಎಂ.ಎಸ್, ಸೇತುರಾಮಾಚಾರ್, ಕರಿಲಿಂಗಪ್ಪ ಎಚ್, ಭರಮಪ್ಪ ಬಿ.ಎಚ್, ನಿಂಗಪ್ಪ, ಬುರುಡಿಕಟ್ಟಿ ಎಸ್.ಎನ್ ಹಾಗೂ ಮಹಿಳಾ ಕ್ಷೇತ್ರದ ವಿಜಯಲಕ್ಷ್ಮೀ ಜೋಷಿ ಅವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.- - -
-09ಎಚ್‍ಆರ್‍ಆರ್03.ಜೆಪಿಜಿ:ಹರಿಹರದ ದಿ, ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್ ಕೋ,ಆಪ್ ಸೊಸೈಟಿ ಕಚೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಸಭೆಯಲ್ಲಿ ಎಸ್.ಆರ್. ಬಿರಾದಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದರು. ವಿಜೇತರಿಗೆ ಹೂವಿನ ಮಾಲೆ ಹಾಕಿ, ಅಭಿನಂದಿಸಲಾಯಿತು.