ಕನ್ನಡಪ್ರಭ ವಾರ್ತೆ ಬೀಳಗಿ
ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಸ್ವಂತ ಬಂಡವಾಳ ಹೆಚ್ಚಿಸಿಕೊಳ್ಳವ ಮೂಲಕ ಕೃಷಿ ಸಾಲದ ಜೊತೆಗೆ ಕೃಷಿಯೇತರ ಸಾಲದ ಪ್ರಮಾಣ ಹೆಚ್ಚಿಸಿ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಮಾಡಬೇಕು. ರೈತರ, ಜನರು ಕಲ್ಯಾಣಕ್ಕೆ ಬ್ಯಾಂಕುಗಳು ಅಗತ್ಯ, ಸಹಕಾರಿ ಸಂಘಗಳು ಇನ್ನು ಹೆಚ್ಚಿನ ಯೋಜನೆ ಹಾಕಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಬ್ಯಾಂಕಿನ ಪ್ರಾರಂಭೋತ್ಸವ ದಿನ ನಡೆದಾಡುವ ದೇವರು ಸಿದ್ದೇಶ್ವರ ಶ್ರೀ ಗಳು ಹೇಳಿದ ಅಮೂಲ್ಯವಾದ ಮಾತುಗಳನ್ನು ನಿರಂತರವಾಗಿ ಪರಿಪಾಲಿಸಿದ ಪ್ರಯುಕ್ತ ಇಂದು ಬ್ಯಾಂಕ್ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ವಿಶ್ವಸಂಸ್ಥೆಯು 2025 ಅಂತಾರಾರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಣೆ ಮಾಡಿದ ವರ್ಷವೇ ನಮ್ಮ ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ನಮ್ಮ ಸೌಭಾಗ್ಯವೇ ಸರಿ ಎಂದು ಹೇಳಿದರು.
ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪಾತ್ರ ಕುರಿತು ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ದನ ಸೌಕಾರ ಮತ್ತು ಕುಟುಂಬ ನಿರ್ವಹಣೆ ಮತ್ತು ಸಂಸ್ಕಾರ ವಿಷಯದ ಕುರಿತು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುರಾಜ ಲೂತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಜೀವನ ಕೌಶಲ್ಯಗಳು ವಿಷಯದ ಕುರಿತು ಅಶೋಕ ಕೆಂಪಲಿಂಗನ್ನವರ ಉಪನ್ಯಾಸ ನೀಡಿದರು.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ದನ ಸೌಕಾರ ಅವರು ಸೇರಿದ ನೂರಾರು ಸಹಕಾರಿ ಗಳಿಗೆ ತರಬೇತಿ ನೀಡಿದರು.ಬಾಡಗಂಡಿ ಶಾಂತಾದೇವಿ ಮೆಮೊರಿಯಲ್ ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಎ.ಎ. ಬಾಳಿಕಾಯಿ, ಅಧಿಕ್ಷಕ ಸಿ.ಆರ್. ಪೂಜಾರ, ಡಿಸಿಸಿ ಬ್ಯಾಂಕ್ ಅಧಿಕಾರಿ ಗಿರೀಶ ಸಂಶಿ. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೆಲ್ನಾಡ, ನಿರ್ದೇಶಕರಾದ ಎಂ.ಎನ್. ಪಾಟೀಲ, ಹೆಮಾದ್ರಿ ಕೊಪ್ಪಳ, ಅಮಿನಸಾಬ ಬೀಳಗಿ, ನಿಂಗನಗೌಡ ಪಾಟೀಲ, ಕಲ್ಲಯ್ಯ ಪತ್ರಿ, ಗಂಗಣ್ಣ ಕೆರೂರ, ರಾಜಣ್ಣ ಬಾರಕೇರ, ಡಿ.ಬಿ. ಮಮದಾಪೂರ, ಭೀಮಪ್ಪ ಕೂಗಟಿ, ಬ್ಯಾಂಕಿನ ವ್ಯವಸ್ಥಾಪಕ ಜಿ.ಎಸ್.ಬನ್ನಟ್ಟಿ, ಶಾಹಿರ್ ಬೀಳಗಿ ಇದ್ದರು.