ಕನ್ನಡಪ್ರಭ ವಾರ್ತೆ ಹರಿಹರ
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಹರಿಹರ ಕ್ಷೇತ್ರದ ಮಾಜಿ ಶಾಸಕ ಎಸ್.ರಾಮಪ್ಪ ಮಾಡಿರುವ ಆರೋಪಗಳಿಗೆ ದಾಖಲೆ ನೀಡಬೇಕು. ಇಲ್ಲದಿದ್ದರೆ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಬಿಜೆಪಿ ವತಿಯಿಂದ ತಮ್ಮ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಎಚ್ಚರಿಕೆ ನೀಡಿದರು.ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಲ್ಲಾ ಕಾಂಗ್ರೆಸ್ ವರಿಷ್ಠರ ಓಲೈಕೆ ಮಾಡಲು ಜಿ.ಎಂ ಸಿದ್ದೇಶ್ವರ್ ವಿರುದ್ಧ ಆರೋಪ ಮಾಡುತ್ತಿರುವ ಎಸ್.ರಾಮಪ್ಪ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ತಂತ್ರವಾಗಿದೆ ಎಂದು ಲೇವಡಿ ಮಾಡಿದರು.
ಸಿದ್ದೇಶ್ವರ್ ಅವರು ಕಾನೂನು ಬದ್ಧವಾಗಿಯೇ ತಮ್ಮ ಜಮೀನಿನಲ್ಲಿ ಕಾಲೇಜ್ ನಿರ್ಮಿಸಿಕೊಂಡಿದ್ದಾರೆ ಹಾಗೂ ಬೈರನಪಾದ ಹತ್ತಿರ ಇರುವ ಶುಗರ್ ಫ್ಯಾಕ್ಟರಿ ನಿರ್ಮಿಸಲು ಗುಡ್ಡ ಒತ್ತುವರಿ ಮಾಡಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಮಾಡಿದ್ದೀರಿ. ಈ ಬಗ್ಗೆ ರಾಮಪ್ಪ ಸಾಕ್ಷಿ ಸಮೇತ ಸಾಬೀತುಪಡಿಸಬೇಕು. ಜಿಎಂ ಸಿದ್ದೇಶ್ವರ್ ಅವರಿಗೆ ತಾವು ಶಾಸಕರಾದ ಅವಧಿಯಲ್ಲಿ ಹರಿಹರ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಬೇಡಿಕೆಯಂತೆ ಸರ್ಕಾರದಿಂದ ಅನುದಾನ ಕೊಡಿಸಿದ ದಾಖಲೆ ನಮ್ಮ ಬಳಿ ಇವೆ. ಆದರೆ ಸಿದ್ದೇಶ್ವರ ಅವರು ಕ್ಷೇತ್ರ ಅಭಿವೃದ್ಧಿ ಬಗ್ಗೆ ಹಾಗೂ ಕ್ಷೇತ್ರಕ್ಕೆ ಬಂದಿಲ್ಲ ಎಂಬ ಸುಳ್ಳು ಹೇಳುವುದು ಬಿಡಬೇಕು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಜಿ.ಎಂ. ಸಿದ್ದೇಶ್ವರ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸುವ ಸಂದರ್ಭ ಎಸ್‌ಪಿ ಮತ್ತು ಡಿಸಿ ಅವರನ್ನು ಪಕ್ಕದಲ್ಲಿಯೇ ಕೂರಿಸಿಕೊಂಡು ರಾಜಕೀಯ ಮಾತನಾಡುವುದು ಎಷ್ಟು ಸರಿ ಎಂದು ಶಾಸಕ ಹರೀಶ ಪ್ರಶ್ನಿಸಿದ್ದಾರೆ. ಶಾಸಕ ಹರೀಶ್ ಮಾತಿನ ಭರದಲ್ಲಿ ಎಸ್‌ಪಿ ಅವರಿಗೆ ಪಮೊರಿನ್ ನಾಯಿ ಎಂದು ಹೇಳಿದ್ದಾರೆ ಹೊರತು ಯಾವುದೇ ದುರುದ್ದೇಶವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ರಾಮಪ್ಪನವರು ಶಾಸಕರ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವುದಕ್ಕೆ ಆಕ್ಷೇಪವಿದೆ ಎಂದರು.
ಬಿಜೆಪಿ ಗ್ರಾಮಂತರ ಘಟಕ ಅಧ್ಯಕ್ಷ ಲಿಂಗರಾಜ್ ಹಿಂಡಸಘಟ್ಟ ಮಾತನಾಡಿ, ಶಾಸಕ ಹರೀಶ್ ಎಸ್‌ಪಿ ಅವರ ಕುರಿತ ಹೇಳಿಕೆಯಲ್ಲಿ ಯಾವುದೇ ದುರುದ್ದೇಶವಿಲ್ಲ. ಆದರೂ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ರಾಜಕೀಯ ಅಂತ್ಯದಲ್ಲಿರುವ ಎಸ್. ರಾಮಪ್ಪ ಅವರು ಜಿಲ್ಲಾ ವರಿಷ್ಠರ ಓಲೈಕೆ ಮಾಡಲು ಶಾಸಕ ಹರೀಶ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಕಾರ್ಯದರ್ಶಿ ವೀರೇಶ್ ಆದಪುರ್, ಮುಖಂಡರಾದ ರಾಘವೇಂದ್ರ ಉಪಾಧ್ಯಾಯ, ಸ್ವಾತಿ ಹನುಮಂತಪ್ಪ, ಪ್ರವೀಣ್ ಪವಾರ್, ಸಂತೋಷ್ ಗುಡಿಮನಿ ಇತರರಿದ್ದರು.
- - --05HRR01: