ಸೊಸೈಟಿ ಅಧ್ಯಕ್ಷರಾಗಿ ಸಚ್ಚಿದಾನಂದ ಮೂರ್ತಿ

KannadaprabhaNewsNetwork |  
Published : Apr 23, 2026, 01:15 AM IST
ಗುಬ್ಬಿ ತಾಲೂಕಿನ ಹರದಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಚ್ಚಿದಾನಂದ ಮೂರ್ತಿ ಉಪಾಧ್ಯಕ್ಷರಾಗಿ ಮಹಾಲಿಂಗಯ್ಯ ಅವಿರೋಧವಾಗಿ ಆಯ್ಕೆಯಾದರು. | Kannada Prabha

ಸಾರಾಂಶ

ತಾಲೂಕಿನ ಹರದಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಚ್ಚಿದಾನಂದ ಮೂರ್ತಿ ಉಪಾಧ್ಯಕ್ಷರಾಗಿ ಮಹಾಲಿಂಗಯ್ಯ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಹರದಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಚ್ಚಿದಾನಂದ ಮೂರ್ತಿ ಉಪಾಧ್ಯಕ್ಷರಾಗಿ ಮಹಾಲಿಂಗಯ್ಯ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸಚ್ಚಿದಾನಂದ ಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಹಾಲಿಂಗಯ್ಯ ಏಕೈಕ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದರಿಂದ ಚುನಾವಣೆ ಅಧಿಕಾರಿಗಳು ಅವಿರೋಧವಾಗಿ ಆಯ್ಕೆ ಮಾಡಿದರು.

ನೂತನ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ, ಸರ್ಕಾರದಿಂದ ಬರುವ ಸೌಲಭ್ಯಗಳನ್ನ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ. ಗ್ರಾಮೀಣ ಭಾಗದ ರೈತರು ಡೈರಿಗಳಿಗೆ ಹೆಚ್ಚು ಹಾಲನ್ನು ಹಾಕುವುದರ ಮೂಲಕ ಪ್ರೋತ್ಸಾಹ ಧನವನ್ನು ಪಡೆಯಬೇಕು. ರೈತರು ಗುಣಮಟ್ಟದ ಹಾಲನ್ನು ಹಾಕಬೇಕು. ರೈತರಿಗೆ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ತಲುಪಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ರಾಸುಗಳ ಸಂಖ್ಯೆ ಕಡಿಮೆ ಆಗ್ತಾ ಇದೆ ರೈತರು ಹಳ್ಳಿಗಾಡಿನಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತುಕೊಟ್ಟು ಪ್ರತಿ ಮನೆಗೊಂದು ಹಸುವನ್ನು ಕಟ್ಟಿಕೊಂಡು ಹಾಲನ್ನು ಹಾಕುವುದರ ಮೂಲಕ ಸವಾಲಂಬಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ತಿಳಿಸಿದರು.ಇದೇ ಸಂಧರ್ಭದಲ್ಲಿ ನಿರ್ದೇಶಕರಾದ ಬಸವರಾಜು ,ಮಹಾದೇವಯ್ಯ, ಶಿವಕುಮಾರ್, ಶಿವಬಸಪ್ಪ ,ಶಿವನಂಜಯ್ಯ, ರುದ್ರೇಶ್, ದಿನೇಶ್, ನರಸಿಂಗಯ್ಯ, ನಾಗರತ್ನಮ್ಮ , ನಾಗಶ್ರೀ ಕಾರ್ಯದರ್ಶಿ ವಿರುಪಾಕ್ಷಯ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಫೇಸಿ ಕಾಯ್ದೆ ಕುರಿತು ದಿನಕ್ಕೊಂದು ಸುಳ್ಳು: ಆಕ್ರೋಶ
ಸಿಇಟಿ: ನಗರದ 8 ಕೇಂದ್ರಗಳಲ್ಲಿ ಇಂದು ಪರೀಕ್ಷೆ