ಕನ್ನಡಪ್ರಭ ವಾರ್ತೆ ಕಾಗವಾಡಶಾಸಕ ರಾಜು ಕಾಗೆ ಶಿಫಾರಸ್ಸಿನ ಮೇರೆಗೆ ಸಚಿನ್ ಚೌಗುಲೆ ಅವರನ್ನು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಯೂಥ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಸಿಂಗೆ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಉಗಾರ ಶಾಸಕರ ಕಚೇರಿಯಲ್ಲಿ ಶಾಸಕರು ಸನ್ಮಾನಿಸಿ, ಅಭಿನಂದಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ರಮೇಶ ಚೌಗುಲೆ, ರಾಜು ಮದನೆ, ವಿಜಯಕುಮಾರ ಅಕಿವಾಟೆ, ಶಂಕರ ವಾಘಮೋಡೆ, ಸಂಜು ಸಲಗರೆ, ಬಾಳಕೃಷ್ಣ ಪಾಟೀಲ್, ಮಹಾಂತೇಶ ಬಡಿಗೇರ, ಉಬೇದ ಜಮಾದಾರ, ಸಾದಿಕ ಮಕಾನದಾರ, ಹುಸೇನ್ ಪಾಂಡರೆ, ರಫೀಕ್ ಸರವಣ, ಚಂದ್ರಾಂತ ಕಾಂಬಳೆ ಸೇರಿದಂತೆ ಅನೇಕರು ಇದ್ದರು.
-ರಾಜು ಕಾಗೆ,
ಶಾಸಕರು.ಶಾಸಕ ರಾಜು ಕಾಗೆ ಹಾಗೂ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿ ಕಾರ್ಯ ಮಾಡುವೆ.-ಸಚಿನ್ ಚೌಗುಲೆ,
ಕಾಗವಾಡ ಬ್ಲಾಕ್ ಯೂಥ್ ಕಾಂಗ್ರೆಸ್ ನೂತನ ಅಧ್ಯಕ್ಷ.