ರಾಮಚಂದ್ರ ಐತಾಳ್‌ಗೆ ಸದಾನಂದ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Nov 05, 2024, 12:40 AM IST
32 | Kannada Prabha

ಸಾರಾಂಶ

ದಿ. ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣೆ, ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಪ್ತೋತ್ಸವದ ಸಮಾರೋಪ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ

ಐರೋಡಿಯ ಯಕ್ಷಗಾನ ಕಲಾಕೇಂದ್ರ ಆಶ್ರಯದಲ್ಲಿ ಕಲಾಕೇಂದ್ರದ ಸಂಸ್ಥಾಪಕ ದಿ. ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣೆ, ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಪ್ತೋತ್ಸವದ ಸಮಾರೋಪ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಿತು.

ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನ ಕಲಾಕೇಂದ್ರದ ಮೂಲಕ ಸಾವಿರಾರು ಉತ್ತಮ ಶಿಷ್ಯರನ್ನು ಅವರು ತಯಾರು ಮಾಡಿದ್ದು, ಕಲೆ ಮೂಲ ಸತ್ವವನ್ನು ಉಳಿಸಿಕೊಂಡು ಮಂದೆ ಸಾಗಬೇಕಾದರೆ ಇಂತಹ ಕೇಂದ್ರಗಳು ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಮಾತನಾಡಿ, ಈ ಸಂಸ್ಥೆಯು ೫೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಕನಿಷ್ಠ ೨ ಕೋಟಿ ರು.ವನ್ನು ಕಲಾಭಿಮಾನಿಗಳ ಸಹಕಾರದಿಂದ ಠೇವಣಿ ಇಟ್ಟು, ಅದರ ಬಡ್ಡಿ ಮೊತ್ತದಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸುವ ಯೋಚನೆ ಕೇಂದ್ರಕ್ಕಿದೆ ಎಂದರು.ಒ.ಎನ್.ಜಿ.ಸಿ ಸಂಸ್ಥೆಯ ನಿವೃತ್ತ ಮಹಾಪ್ರಬಂಧಕ ಬನ್ನಾಡಿ ನಾರಾಯಣ ಆಚಾರ್ಯ, ಕಲಾ ಕೇಂದ್ರದೊಂದಿಗೆ ತನ್ನ ಒಡನಾಟ ಮೆಲುಕು ಹಾಕಿದರು.

ಈ ಸಂದರ್ಭ ಶಿಕ್ಷಕ, ರಂಗಭೂಮಿ ಕಲಾವಿದ, ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಅವರಿಗೆ ‘ಸದಾನಂದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹುಬ್ಬಳ್ಳಿಯ ಹೋಟೆಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಯಕ್ಷ ಕಲಾಸಕ್ತ ಶಂಕರ ಐತಾಳ, ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಎ.ಪಿ.ಐತಾಳ ಇದ್ದರು.

ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಅಂಬರೀಷ್ ಭಟ್ ಸಂಸ್ಮರಣಾ ಭಾಷಣ ಮಾಡಿದರು. ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಸನ್ಮಾನಿತರ ಪರಿಚಯ ನೀಡಿದರು. ಮೇಘ ಶ್ಯಾಮ ಹೆಬ್ಬಾರ್ ನಿರೂಪಿಸಿದರು. ಹೆರೆಂಜಾಲು ಪ್ರಶಾಂತ್ ಮಯ್ಯ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ