ಸನಾತನ ಧರ್ಮ ಆಧುನಿಕತೆಗೆ ಬಲಿಯಾಗದೇ ಸಂಸ್ಕೃತಿ ಉಳಿಸಿಕೊಂಡಿದೆ ಸದಾಶಿವ ಸ್ವಾಮೀಜಿ

KannadaprabhaNewsNetwork | Published : Aug 26, 2024 1:32 AM

ಸಾರಾಂಶ

ಆಧುನಿಕತೆಯ ಪ್ರಭಾವಕ್ಕೆ ಬಲಿಯಾಗದೇ ನಮ್ಮ ಸನಾತನ ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ. ಆದ್ದರಿಂದ ಪ್ರತಿಯೊಬ್ಬರ ಮನ-ಮನೆಗಳಲ್ಲಿ ನಮ್ಮ ಸತ್ಸಂಪ್ರದಾಯವನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶ್ರೀಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಪೂಜ್ಯ ಸದಾಶಿವ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಆಧುನಿಕತೆಯ ಪ್ರಭಾವಕ್ಕೆ ಬಲಿಯಾಗದೇ ನಮ್ಮ ಸನಾತನ ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ. ಆದ್ದರಿಂದ ಪ್ರತಿಯೊಬ್ಬರ ಮನ-ಮನೆಗಳಲ್ಲಿ ನಮ್ಮ ಸತ್ಸಂಪ್ರದಾಯವನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶ್ರೀಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಪೂಜ್ಯ ಸದಾಶಿವ ಸ್ವಾಮೀಜಿ ಹೇಳಿದರು. ಶನಿವಾರ, ನಗರಕ್ಕೆ ಕಲ್ಯಾಣ ಕರ್ನಾಟಕ ವಿಕಾಸ ಪಥ ರಥ ಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಭವ್ಯ ಶೋಭಾಯಾತ್ರೆಯನ್ನು ಸ್ವಾಗತಿಸಿ ನಂತರ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ಪೂಜ್ಯರು ಮಾತನಾಡಿದರು.ಬದಲಾದ ಕಾಲಘಟ್ಟದಲ್ಲಿ ನಾವು ಪಾಶ್ಚಾತ್ಯ ಸಂಸ್ಕೃತಿ, ಆಚಾರ- ವಿಚಾರ, ಜೀವನಶೈಲಿಗೆ ಮಾರುಹೋಗುತ್ತಿರುವ ಸಂದರ್ಭದಲ್ಲಿ ನಮ್ಮತನವನ್ನು ಉಳಿಸಿಕೊಂಡು ಅದನ್ನು ಇಂದಿನ ಮತ್ತು ಮುಂದಿನ ಯುವಪೀಳಿಗೆಗೆ ಪರಿಚಯಿಸಿ, ಬೆಳೆಸುವ ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕಿದೆ. ಎಂದರು.ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಮಹಾಸ್ವಾಮಿಗಳು ಮಾತನಾಡಿ, ಎಲ್ಲರೂ ಕಾರ್ಯಶೀಲರಾಗಬೇಕು. ಜೀವನದಲ್ಲಿ ಮನುಷ್ಯ ಮೂರು ರೀತಿಯ ಕಾರ್ಯ ಮಾಡಬೇಕು. ಉಪಜೀವನಕ್ಕಾಗಿ ಕಾಯಕ ಮಾಡಬೇಕು, ಹೆತ್ತವರ ಉಪಕಾರ ಸ್ಮರಣೆಗಾಗಿ ಹಾಗೂ ದೇಶ ವಿಕಾಶಕ್ಕಾಗಿ ಕಾರ್ಯ ಮಾಡಬೇಕು. ಶುದ್ಧ ಮನಸ್ಸಿನಿಂದ ಮಾಡಿದ ಕಾರ್ಯಗಳು ಸದಾ ಯಶಸ್ವಿಯಾಗುತ್ತವೆ ಎಂದರು.ಸೂಗೂರೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಬಾಡಿಯಾಲ ಮಠದ ಚನ್ನವೀರ ಶಿವಾಚಾರ್ಯರು, ಚರಬಸವೇಶ್ವರ ಸಂಸ್ಥಾನ ಮಠದ ಬಸವಯ್ಯ ಶರಣರು, ವಿಕಾಸ ಅಕಾಡೆಮಿಯ ಸಂಚಾಲಕ ಅಮೃತರಾವ ಮುಲುಗೆ, ಭೀಮರೆಡ್ಡಿ ಬೈರೆಡ್ಡಿ, ಎನ್.ಸಿ. ಪಾಟೀಲ್, ಆರ್.ಎಂ. ಹೊನ್ನಾರೆಡ್ಡಿ, ಸುಧಾಕರ ಗುಡಿ, ಗುರಣ್ಣಗೌಡ, ಅಡಿವೆಪ್ಪ ಜಾಕಾ, ನರಸಿಂಹ ವೈದ್ಯ, ಬಸವರಾಜ ಹೇರುಂಡಿ, ಎಂ.ಬಿ. ನಾಡಗೌಡ, ಎನ್.ಎಸ್. ಬಿರಾದಾರ್, ಬಸವರಾಜ ಅರುಣಿ, ಶರಣು ಪಾಟೀಲ್, ಎಚ್.ಎಂ. ಭೈರೆಡ್ಡಿ, ಉತ್ತರ ಕರ್ನಾಟಕ ಕರವೇ ಸಂಚಾಲಕ ಶರಣು ಗದ್ದುಗೆ, ಮಲ್ಲಣ್ಣ ಹೊಸ್ಮನಿ, ಸಂಗು, ಮಲ್ಲಿಕಾರ್ಜುನ ಮುಂಡಾಸ, ಗೌಡಪ್ಪ, ರವೀಂದ್ರನಾಥ ಪತ್ತಾರ, ಸಂತೋಷ ವಿಶ್ವಕರ್ಮ, ಸೂಗಣ್ಣ ಚಟ್ರಿಕಿ, ಮಲ್ಲಿಕಾರ್ಜುನ ಪಾಟೀಲ್, ಶಿವಶರಣಪ್ಪ ಕಾಮಾ, ಶರಣಯ್ಯ ಹಿರೇಮಠ, ಗೌಡಪ್ಪಗೌಡ, ಕಲ್ಲಯ್ಯ ಸ್ವಾಮಿ ಸೇರಿದಂತೆ ಮುಂತಾದವರು ಉಸ್ಥಿತರಿದ್ದರು.ಸಿ.ಬಿ. ಕಮಾನದಿಂದ ಚರಬಸವೇಶ್ವರ ಗದ್ದುಗೆವರೆಗೆ ಶೋಭಯಾತ್ರೆ ಜರುಗಿತು. ವೀರೇಶ ಉಳ್ಳಿ ನಿರೂಪಿಸಿದರು. ಚಂದ್ರಶೇಖರ ಗೋಗಿ ಪ್ರಾರ್ಥಿಸಿದರು. ನಾರಾಯಣಚಾರ್ಯ ಸಗರ ವಂದಿಸಿದರು.

Share this article