ಸದಾಶಿವ ಸ್ವಾಮೀಜಿ ಸ್ವಾರ್ಥ ಪ್ರೇಮಕ್ಕಿಂತ ಸಹಜ ಪ್ರೇಮದ ಶ್ರೀಗಳು-ಗವಿಶ್ರೀ

KannadaprabhaNewsNetwork |  
Published : Dec 30, 2025, 02:30 AM IST
29ಎಚ್‌ವಿಆರ್‌1 | Kannada Prabha

ಸಾರಾಂಶ

ಅರಿಯದವರೊಡನೆ ಸಾವಿರ ಹೆಜ್ಜೆ ಹಾಕುವುದಕ್ಕಿಂತ ಅರಿತವರೊಡನೆ ನಾಲ್ಕು ಹೆಜ್ಜೆ ಹಾಕುತ್ತ ದುಶ್ಚಟ ಹಾಗೂ ದುರ್ಗಣ ದೂರಗೊಳಿಸಿದರೆ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸ್ವಾರ್ಥ ಪ್ರೇಮಕ್ಕಿಂತ ಸಹಜ ಪ್ರೇಮದ ಶ್ರೀಗಳು ಎಂದು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಹಾವೇರಿ: ಅರಿಯದವರೊಡನೆ ಸಾವಿರ ಹೆಜ್ಜೆ ಹಾಕುವುದಕ್ಕಿಂತ ಅರಿತವರೊಡನೆ ನಾಲ್ಕು ಹೆಜ್ಜೆ ಹಾಕುತ್ತ ದುಶ್ಚಟ ಹಾಗೂ ದುರ್ಗಣ ದೂರಗೊಳಿಸಿದರೆ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸ್ವಾರ್ಥ ಪ್ರೇಮಕ್ಕಿಂತ ಸಹಜ ಪ್ರೇಮದ ಶ್ರೀಗಳು ಎಂದು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ದೇವರು ನಮಗೆ ಸುಂದರ ಬದುಕು ಕೊಟ್ಟಿದ್ದಾನೆ. ಬದುಕೆಂಬುದು ಆರಾಧನೆ, ದಿವ್ಯೋತ್ಸವ. ದೇವರೇ ಖುಷಿಪಡುವಂತೆ ನಾವು ಬದುಕಬೇಕು. ಬದುಕಿನ ಬೆಲೆ ತಿಳಿದು ಉತ್ಸಾಹದಿಂದ ಬದುಕಬೇಕು. ಬದುಕನ್ನು ಅನುಭವಿಸಲು ಒಳ್ಳೆಯ ಮಾತುಗಳನ್ನು ಆಲಿಸಬೇಕು. ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಪ್ರವಚನದ ಸಂದೇಶಗಳು ತಮ್ಮೆಲ್ಲರ ಬದುಕಿಗೆ ಬೆಳಕಾಗಿರಲಿ ಎಂದರು.ಶಾಲಾ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಹಾರ‍್ನಹಳ್ಳಿ ಕೋಡಿಮಠ ಸಂಸ್ಥಾನದ ಜಗದ್ಗುರು ಡಾ.ಶಿವಾನಂದ ರಾಜೇಂದ್ರ ಮಹಾಸ್ವಾಮೀಜಿ, ಆಧ್ಯಾತ್ಮ ಭಾರತೀಯ ಪರಂಪರೆ. ಸಂತರ ಸಹವಾಸ ಹಾಗೂ ಆಧ್ಯಾತ್ಮ ಚಿಂತನೆ ಜಗತ್ತನ್ನು ಬೆಳಗಿಸುತ್ತದೆ. ಶಿವಬಸವ ಹಾಗೂ ಶಿವಲಿಂಗ ಸ್ವಾಮಿಗಳ ತಪೋಬಲದಿಂದ ಸದಾಶಿವ ಸ್ವಾಮೀಜಿಯವರು ಉತ್ತಮ ಜನಕಲ್ಯಾಣ ಕಾರ್ಯ ಮಾಡುತ್ತಿರುವರು. ಅವರಿನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.ಮೈಸೂರಿನ ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಗುರು-ಶಿಷ್ಯರ ಸಂಬಂಧ ಅವಿನಾಭಾವ ಇದ್ದರೆ ಏನಾದರೂ ಸಾಧಿಸಬಹುದು. ಇದಕ್ಕೆ ಪೂರಕವಾಗಿ ಶಿವಬಸವ ಹಾಗೂ ಶಿವಲಿಂಗ ಶ್ರೀಗಳ ತಪಶಕ್ತಿಯಿಂದ ಸದಾಶಿವ ಸ್ವಾಮೀಜಿಯವರು ಕ್ರಿಯಾಶೀಲರಾಗಿ ಸದಾ ಚಿಂತನೆ ಮಾಡುತ್ತ ಭಕ್ತರನ್ನು ಉದ್ಧರಿಸುತ್ತಿರುವರು. ಸದ್ಭಾವನೆ, ಸನ್ನಡತೆ ರೂಪಿಸುತ್ತ ಸಂಚಲನ ಮೂಡಿಸಿರುವರು ಎಂದರು.ವಿಜಯಪುರದ ಶ್ರೀ ಷಣ್ಮುಖಾರೂಢಮಠದ ಸದ್ಗುರು ಅಭಿನವ ಸಿದ್ಧಾರೂಢ ಸ್ವಾಮೀಜಿ, ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ನಿರ್ಮಿಸಿದ ಹುಕ್ಕೇರಿಮಠ ಕುರಿತ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಕಿರುಚಿತ್ರ ಪ್ರದರ್ಶಿಸಲಾಯಿತು.ಹುಬ್ಬಳ್ಳಿಯ ಮೂರುಸಾವಿಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯಾಸೀರಖಾನ್ ಪಠಾಣ ಉಪಸ್ಥಿತರಿದ್ದರು.ಹಾವೇರಿ ಜನತೆಗೆ ಸದಾಶಿವ ಸ್ವಾಮೀಜಿ ಒಳ್ಳೆಯ ಗುರುವಾಗಿ ಸಿಕ್ಕಿದ್ದಾರೆ. ತಮ್ಮ ಸದಾಚಾರಗಳಿಂದ ಸಮಾಜವನ್ನು ಮುನ್ನಡೆಸಲಿ. ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿರುವ ಅವರ ಪೂರ್ವಾಶ್ರಮದವರು ನಮ್ಮ ಮಠದೊಂದಿಗೆ ಒಡನಾಟ ಇಟ್ಟುಕೊಂಡಿದ್ದರು ಎಂಬುದು ನಮಗೆ ಹೆಮ್ಮೆ ಎಂದು ಶಿರಹಟ್ಟಿ ಫಕೀರ ಸಿದ್ದರಾಮ ಸ್ವಾಮೀಜಿ ಹೇಳಿದರು.ಸಂತೋಷವನ್ನುಂಟು ಮಾಡುವುದೇ ಸಮಾಜದ ಸೇವೆ. ಶಿವಯೋಗ ಮಂದಿರದ ಉಪಾಧ್ಯಕ್ಷರಾಗಿ ಸೇವೆ ಮಾಡುತ್ತಿರುವ ಸದಾಶಿವ ಸ್ವಾಮೀಜಿಯವರ ಕರ್ತೃತ್ವ ಶಕ್ತಿ ಮನಸೆಳೆಯುವಂಥದ್ದು. ಅವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿ ಎಂದು ಮುಂಡರಗಿ ಅನ್ನದಾನೀಶ್ವರ ಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಷ್ಟಗಿ ತಾಲೂಕಿನ ಫಲಿತಾಂಶ ಮೊದಲಸ್ಥಾನದಲ್ಲಿರಲಿ: ಜಗದೀಶ ಅಂಗಡಿ
ಬೆಳಗಾವಿ ಅಧಿವೇಶನ ವ್ಯರ್ಥ: ಶಾಸಕ ಸಿ.ಸಿ. ಪಾಟೀಲ