ಇಂದು ಕುಷ್ಟಗಿಯಿಂದ ಕಂದಕೂರಿಗೆ ಸದ್ಭಾವನಾ ಪಾದಯಾತ್ರೆ

KannadaprabhaNewsNetwork |  
Published : Oct 04, 2026, 02:30 AM IST
ಕುಷ್ಟಗಿಯಿಂದ ಕಂದಕೂರಿಗೆ ಸದ್ಭಾವನಾ ಪಾದಯಾತ್ರೆಯ ಬ್ಯಾನರ್. | Kannada Prabha

ಸಾರಾಂಶ

ಮದ್ಯ ಸೇರಿದಂತೆ ವಿವಿಧ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸಿ ತಾಲೂಕಿನ ಕಂದಕೂರು ಗ್ರಾಮವನ್ನು ಮದ್ಯ‌ ವ್ಯಸನಮುಕ್ತ ಗ್ರಾಮವನ್ನಾಗಿಸುವ ಸಂಕಲ್ಪದೊಂದಿಗೆ ಗಾಂಧಿ ಜಯಂತಿ ಅಂಗವಾಗಿ ಅ. ಅ. 4ರಂದು ಕುಷ್ಟಗಿಯಿಂದ ಕಂದಕೂರಿಗೆ ಸದ್ಭಾವನಾ ಪಾದಯಾತ್ರೆ ನಡೆಯಲಿದೆ.

ಕುಷ್ಟಗಿ: ಮದ್ಯ ಸೇರಿದಂತೆ ವಿವಿಧ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸಿ ತಾಲೂಕಿನ ಕಂದಕೂರು ಗ್ರಾಮವನ್ನು ಮದ್ಯ‌ ವ್ಯಸನಮುಕ್ತ ಗ್ರಾಮವನ್ನಾಗಿಸುವ ಸಂಕಲ್ಪದೊಂದಿಗೆ ಗಾಂಧಿ ಜಯಂತಿ ಅಂಗವಾಗಿ ಅ. ಅ. 4ರಂದು ಕುಷ್ಟಗಿಯಿಂದ ಕಂದಕೂರಿಗೆ ಸದ್ಭಾವನಾ ಪಾದಯಾತ್ರೆ ನಡೆಯಲಿದೆ.

ಭಾನುವಾರ ಸಂಜೆ 4 ಗಂಟೆಗೆ ಕುಷ್ಟಗಿ ಪಟ್ಟಣದ ಮಲ್ಲಯ್ಯ ವೃತ್ತದಿಂದ ಪಾದಯಾತ್ರೆ ಆರಂಭವಾಗಿ ಕಂದಕೂರು ಗ್ರಾಮದ ವರೆಗೆ ಸಾಗಲಿದೆ.

ಕೊಪ್ಪಳದ ಗಾಂಧಿ ಬಳಗ, ಕುಷ್ಟಗಿ ಪೊಲೀಸ್ ಇಲಾಖೆ, ಕಂದಕೂರು ಗ್ರಾಪಂ ಹಾಗೂ ಗ್ರಾಮದ ಗುರು-ಹಿರಿಯರು ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ. ನಿಡಶೇಸಿ ಮಠದ ಶ್ರೀ ಅಭಿನವ ಕರಿಬಸವ ಶಿವಾಚಾರ್ಯ ಶ್ರೀಗಳು ಪಾದಯಾತ್ರೆಗೆ ಚಾಲನೆ ನೀಡಿ ಪಾಲ್ಗೊಳ್ಳಲಿದ್ದಾರೆ.

ತಾಲೂಕು ವಕೀಲರ ಸಂಘ, ನೌಕರರ ಬಳಗ, ಧರ್ಮಸ್ಥಳ ಸಂಘ, ಸ್ತ್ರೀಶಕ್ತಿ ಸಂಘ-ಸಂಸ್ಥೆಗಳು, ರೈತ ಸಂಘ, ಮಾಧ್ಯಮ ಮಿತ್ರರು, ಮಾಜಿ ಸೈನಿಕರ ಸಂಘ, ಭಾರತ ಸೇವಾದಳ, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಶಾಲಾ-ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಗಾಂಧಿ ಚಿಂತನೆಯೊಂದಿಗೆ ಗಾಂಧಿ ಬೆಳಕು: ಪಾದಯಾತ್ರೆಯ ಬಳಿಕ ಕಂದಕೂರಿನಲ್ಲಿ ‘ಗಾಂಧಿ ಬೆಳಕು’ ಕಾರ್ಯಕ್ರಮ ನಡೆಯಲಿದ್ದು, ಗಾಂಧಿ ಚಿಂತನ, ಭಜನೆ, ಧ್ಯಾನ, ಮೌನ ಹಾಗೂ ಸೇವಾ ಚಟುವಟಿಕೆ ಮೂಲಕ ಮಹಾತ್ಮ ಗಾಂಧೀಜಿ ಅವರ ಸತ್ಯ, ಅಹಿಂಸೆ, ಶಾಂತಿ, ಸರಳತೆ ಮತ್ತು ಮಾನವೀಯ ಮೌಲ್ಯಗಳನ್ನು ಸ್ಮರಿಸಲಾಗುತ್ತದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಶ್ವೇತ ವಸ್ತ್ರ ಹಾಗೂ ಖಾದಿ ಟೋಪಿ ಧರಿಸಿ ಬರಲು ಆಯೋಜಕರು ಮನವಿ ಮಾಡಿದ್ದಾರೆ.

ಪ್ರಮುಖ ಉದ್ದೇಶ: ವ್ಯಸನಮುಕ್ತ ಗ್ರಾಮ–ಆರೋಗ್ಯಕರ ಸಮಾಜದತ್ತ ನಮ್ಮ ಹೆಜ್ಜೆ ಎಂಬ ಸಂದೇಶದೊಂದಿಗೆ ಪಾದಯಾತ್ರೆ ನಡೆಯಲಿದೆ. ವ್ಯಸನದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಯುವಜನರನ್ನು ದುಶ್ಚಟಗಳಿಂದ ದೂರವಿಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಕಂದಕೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕುಷ್ಟಗಿ ಸಿಪಿಐ ವಿಶ್ವನಾಥ್ ಹಿರೇಗೌಡರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
ಮೇವು ಕೊರತೆ: ರೈತರಲ್ಲಿ ಆತಂಕ