ಕೊನೆಗೂ ಶುರುವಾದ ಸಫಾರಿ

KannadaprabhaNewsNetwork |  
Published : Feb 23, 2026, 01:30 AM IST
22ಜಿಪಿಟಿ1ಬಂಡೀಪುರ ಸಫಾರಿ ಕೇಂದ್ರದ ಸಫಾರಿ ವಾಹನದಲ್ಲಿ ಸಫಾರಿಗೆ ಹೊರಟ ಪ್ರವಾಸಿಗರು. | Kannada Prabha

ಸಾರಾಂಶ

ಮಾನವ-ಪ್ರಾಣಿ ಸಂಘರ್ಷದಿಂದಾಗಿ 108 ದಿನಗಳಿಂದ ಸ್ಥಗಿತಗೊಂಡಿದ್ದ ಜಗದ್ವಿಖ್ಯಾತ ಬಂಡೀಪುರ ಸಫಾರಿಯು ಭಾನುವಾರದಿಂದ ಪುನಾರಂಭಗೊಂಡಿದೆ. ಮೊದಲ ದಿನದ ಪ್ರವಾಸಿಗರ ಸಂಖ್ಯೆಯು ನಿರೀಕ್ಷೆಯಷ್ಟಿರದಿದ್ದರೂ, ಪುನಾರಂಭದ ಸುದ್ದಿಯು ತಕ್ಕಮಟ್ಟಿಗೆ ನೋಡುಗರನ್ನು ಆಕರ್ಷಿಸಿದೆ. ರೈತ ಸಂಘಗಳ ವಿರೋಧದ ನಡುವೆಯೇ ಸಫಾರಿ ಕಾನನಯಾನವು ಪೊಲೀಸರ ಸರ್ಪಗಾವಲಿನಲ್ಲಿ ಶುರುವಾಗಿದೆ.

ಮೊದಲ ದಿನ ಪ್ರವಾಸಿಗರ ಸಂಖ್ಯೆ ಕಡಿಮೆ

ಯಾತ್ರಿಗಳಿಗಿಂತ ಹೆಚ್ಚು ಪೊಲೀಸರ ಜಮೆ

---

ನಂಬರ್‌ ಗೇಮ್‌:

1.25 ಲಕ್ಷ: ಮೊದಲ ದಿನದ ಆದಾಯ

113 ಜನ: ಸಂಜೆ 3.30 ಟ್ರಿಪ್‌ನ ಜನ

200: ಪೊಲೀಸ್‌ ಭದ್ರತೆ

--

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಾನವ-ಪ್ರಾಣಿ ಸಂಘರ್ಷದಿಂದಾಗಿ 108 ದಿನಗಳಿಂದ ಸ್ಥಗಿತಗೊಂಡಿದ್ದ ಜಗದ್ವಿಖ್ಯಾತ ಬಂಡೀಪುರ ಸಫಾರಿಯು ಭಾನುವಾರದಿಂದ ಪುನಾರಂಭಗೊಂಡಿದೆ. ಮೊದಲ ದಿನದ ಪ್ರವಾಸಿಗರ ಸಂಖ್ಯೆಯು ನಿರೀಕ್ಷೆಯಷ್ಟಿರದಿದ್ದರೂ, ಪುನಾರಂಭದ ಸುದ್ದಿಯು ತಕ್ಕಮಟ್ಟಿಗೆ ನೋಡುಗರನ್ನು ಆಕರ್ಷಿಸಿದೆ. ರೈತ ಸಂಘಗಳ ವಿರೋಧದ ನಡುವೆಯೇ ಸಫಾರಿ ಕಾನನಯಾನವು ಪೊಲೀಸರ ಸರ್ಪಗಾವಲಿನಲ್ಲಿ ಶುರುವಾಗಿದೆ.

---

ಮಧ್ಯಾಹ್ನ 3.30ಕ್ಕೆ 113 ಪ್ರವಾಸಿಗರು:

ಭಾನುವಾರ ಆರಂಭವಾದ ಸಫಾರಿಗೆ ಮಧ್ಯಾಹ್ನ 3.30ರ ಟ್ರಿಪ್‌ಗೆ 113 ಪ್ರವಾಸಿಗರು ಆಗಮಿಸಿ ವನ್ಯಸ್ನೇಹಿತರನ್ನು ಕಣ್ತುಂಬಿಕೊಂಡರು.

---

ಸರ್ವಂ ಖಾಕಿ ಮಯಂ!

ಸಫಾರಿ ವಿರೋಧಿಸಿ ಫೆ.23ಕ್ಕೆ ರೈತರು ಪ್ರತಿಭಟನೆಗೆ ಕರೆಕೊಟ್ಟಿರುವ ನಡುವೆಯೂ ಎಲ್ಲಿ ರೈತರು ಸಫಾರಿ ಕೇಂದ್ರಕ್ಕೆ ಬರುವರೋ ಎಂಬ ಮುಂಜಾಗ್ರತೆಯಿಂದಾಗಿ ಆರಕ್ಷಕ ದಳವರು 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿ, ಲಕ್ಷ ರು. ವ್ಯಯಿಸಿತು ಎನ್ನಲಾಗಿದೆ. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಶಿಧರ್‌, ಡಿಎಸ್‌ಪಿ ಸ್ನೇಹರಾಜ್‌, ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌, ಕೆಎಸ್‌ಆರ್‌ಟಿಪಿ ಪಡೆ ಸೇರಿದಂತೆ ಸ್ಥಳೀಯ ಪೊಲೀಸರು ಸುಮಾರು ೨೦೦ ಮಂದಿ ಇದ್ದರು. ಇನ್ನು 3 ದಿನಗಳ ಕಾಲ ಪೊಲೀಸ್‌ ಭದ್ರತೆ ಹೆಚ್ಚಿರಲಿದೆ ಎಂದು ಮೂಲಗಳು ತಿಳಿಸಿವೆ.

---

ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಬಿ.ಎಂ. ಮಲ್ಲೇಶ್‌ ಅವರು ಮಾತನಾಡಿ, ‘ಮೊದಲ ದಿನವಾದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆಯಿತ್ತು. ಸರ್ಕಾರದ ಸೂಚನೆಯಂತೆ ಶೇ.50ರಷ್ಟು ಮಾತ್ರ ಸಫಾರಿ ಆರಂಭಿಸಲಾಗಿದ್ದು, ಪೂರ್ಣವಾಗಿ ಶುರುವಾದರೆ, ಸಂಖ್ಯೆ ಏರುವ ನಿರೀಕ್ಷೆಯಿದೆ’ ಎಂದು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡರು.

=====

22ಜಿಪಿಟಿ1

ಬಂಡೀಪುರ ಸಫಾರಿ ಕೇಂದ್ರದ ಸಫಾರಿ ವಾಹನದಲ್ಲಿ ಸಫಾರಿಗೆ ಹೊರಟ ಪ್ರವಾಸಿಗರು.

--

22ಜಿಪಿಟಿ2

ಬಂಡೀಪುರ ಸಫಾರಿ ಕೇಂದ್ರದಲ್ಲಿ ಸಫಾರಿಗೆ ಟಿಕೆಟ್‌ ಪಡೆಯಲು ಪ್ರವಾಸಿಗರು ನಿಂತಿರುವುದು.

---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯದ ಮೂಲಕ ಮನಸುಗಳ ಬೆಸೆದ ಜಿಎಸ್‍ಎಸ್: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ
ಪ್ರಬುದ್ಧರು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ: ಡಾ.ಭಗವಾನ್‌