ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಪಂ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಎನ್.ಐ.ಸಿ ಸಹಯೋಗದಲ್ಲಿ ಹಮ್ಮಿಕೊಂಡ ಸುರಕ್ಷಿತ ಅಂತರ್ಜಾಲ ದಿನ ಉದ್ಘಾಟಿಸಿ ಮಾತನಾಡಿ, ಬಹುತೇಕ ಜನ ಇಂಟರ್ನೆಟ್ ಇಲ್ಲದೆ, ಚಡಪಡಿಸುವ ಕಾಲ ಇದಾಗಿದೆ. ದಿನಕ್ಕೆ ಒಂದು 1 ರಿಂದ 3 ಜಿಬಿವರೆಗೆ ಡಾಟಾ ಬಳಕೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣವನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ಬಳಸಬೇಕಿದೆ ಎಂದು ಹೇಳಿದರು.
ಇತ್ತೀಚೆಗೆ ಸೈಬರ್ ಕಳ್ಳರು ಚಾಲಾಕಿತನ ತೋರುತ್ತಿದ್ದು, ಜನರು ಜಾಗೃತರಾಗಬೇಕಿದೆ. ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳ ನಿಯಮಿತ ಬಳಕೆಯಿಂದ ದೂರ ಉಳಿಯಬೇಕು. ಅಂತರ್ಜಾಲದ ಸುರಕ್ಷತೆ ಹಾಗೂ ಜಾಗೃತಿಯ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಸೆ, ಆಮಿಷಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸೈಬರ್ ವಂಚನೆಗೆ ಕಳೆದ ವರ್ಷ ₹28 ಸಾವಿರ ಕೋಟಿ ಕಳೆದುಕೊಂಡಿದ್ದಾರೆ. ಸೈಬರ್ ವಂಚನೆ ಪ್ರಕರಣ ಶೇ.35 ರಿಂದ 40ರವರೆಗೆ ಹೆಚ್ಚಾಗಿವೆ. ಇದು ಇನ್ನೂ ಆರಂಭಿಕ. ಬೆಂಗಳೂರು ಸೇರಿ ಬೇರೆ ನಗರಗಳಲ್ಲೂ ಸೈಬರ್ ವಂಚನೆ ಪ್ರಕರಣ ಕಂಡುಬರುತ್ತಿವೆ ಎಂದರು.
ಜಿಪಂ ಜಿಇಒ ಶಶಿಧರ ಕುರೇರ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಆಮಿಷಗಳಿಗೆ ಮರುಳಾಗದೇ ಜಾಗೃತಿಯಿಂದ ಪಾಸ್ ವರ್ಡ್‌ಗಳನ್ನು ಕಾಲಕಾಲಕ್ಕೆ ಬದಲಾಯಿಸಿಕೊಳ್ಳಬೇಕು ಎಂದರು.
-ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ