ರಂಗಭೂಮಿ ಕಲೆಗೆ ಸಹಜಾ ನಾಟಕೋತ್ಸವದ ಕೊಡುಗೆ ಅಪಾರ

KannadaprabhaNewsNetwork |  
Published : May 20, 2026, 01:00 AM IST
೧೯ ವೈಎಲ್‌ಬಿ ೦೨ಯಲಬುರ್ಗಾ ತಾಲೂಕಿನ ತರಲಕಟ್ಟಿಯಲ್ಲಿ ಸಹಜಾ ನಾಟಕೋತ್ಸವ ಹಾಗೂ ಸಹಜಾ ರಂಗಪುರಸ್ಕಾರ ಕಾರ್ಯಕ್ರಮವನ್ನು ರಂಗಭೂಮಿ ಹಿರಿಯ ಕಲಾವಿದ ತೇಜನಗೌಡ ಪೊಲೀಸ್ ಪಾಟೀಲ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಹಜಾ ಟ್ರಸ್ಟ್ ರಂಗಭೂಮಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯ. ಈ ಸಂಸ್ಥೆಗೆ ಇನ್ನಷ್ಟು ನೆರವು ಅತ್ಯಗತ್ಯವಾಗಿದೆ

ಯಲಬುರ್ಗಾ: ರಂಗಭೂಮಿ ಕಲೆಗೆ ಸಹಜಾ ನಾಟಕೋತ್ಸವ ತನ್ನದೇ ಆದ ಕೊಡುಗೆ ನೀಡಿದೆ ಎಂದು ರಂಗಭೂಮಿ ಹಿರಿಯ ಕಲಾವಿದ ತೇಜನಗೌಡ ಪೊಲೀಸ್ ಪಾಟೀಲ್ ಹೇಳಿದರು.

ತಾಲೂಕಿನ ತರಲಕಟ್ಟಿ ಗ್ರಾಮದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ಜರುಗಿದ ಸಹಜಾ ನಾಟಕೋತ್ಸವ ಹಾಗೂ ಸಹಜಾ ರಂಗಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಪ್ಪಳದ ಸಹಜಾ ಟ್ರಸ್ಟ್, ಶಿರಗೇರಿ ಧಾತ್ರಿರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾದ ಶಿವಶರಣ ಹರಳಯ್ಯ ಭಕ್ತಿ ಪ್ರಧಾನ ನಾಟಕ ಹಾಗೂ ಸಂಸಾರದಲ್ಲಿ ಸನಿದಪ‌ ನಾಟಕಗಳು ಸಮಾಜ ಸುಧಾರಣೆ ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.

ಮಕ್ಕಳ್ಳಿಯ ಶಿವಾನಂದ ಮಠದ ಶ್ರೀಶಿವಾನಂದ ಸ್ವಾಮೀಜಿ ಮಾತನಾಡಿ, ಸಹಜಾ ಟ್ರಸ್ಟ್ ರಂಗಭೂಮಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯ. ಈ ಸಂಸ್ಥೆಗೆ ಇನ್ನಷ್ಟು ನೆರವು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಇದೆ ವೇಳೆ ಸತತ ಮೂವತ್ತು ವರ್ಷಗಳ ಕಾಲ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತೇಜನಗೌಡ ಪೊಲೀಸ್ ಪಾಟೀಲ್, ಪ್ರಭುಗೌಡ ಪೊಲೀಸ್ ಪಾಟೀಲ್, ರಂಗನಗೌಡ ಮಾಲಿಪಾಟೀಲ್, ಯಮನೂರಪ್ಪ ಕಂಬಳಿ, ಮಲ್ಲನಗೌಡ ಪೊಲೀಸ್ ಪಾಟೀಲ್, ಶ್ರೀಕಾಂತಗೌಡ ಮಾಲಿಪಾಟೀಲ್, ಲೋಕೇಶ ನಾಯ್ಕ ಅವರಿಗೆ ಸಹಜಾ ಟ್ರಸ್ಟ್ ವತಿಯಿಂದ ಸಹಜ ರಂಗಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಧಾತ್ರಿ ರಂಗ ಸಂಸ್ಥೆ ಶಿರಗೇರಿ ತಂಡದವರಿಂದ ಶಿವಶರಣ ಹರಳಯ್ಯ ಭಕ್ತಿ ಪ್ರಧಾನ ನಾಟಕ ಹಾಗೂ ಸಂಸಾರದಲ್ಲಿ ಸನಿದಪ ಸಾಮಾಜಿಕ ನಾಟಕ ಪ್ರದರ್ಶನ ಗೊಂಡಿತು.

ಈ ಸಂದರ್ಭ ಸಹಜಾ ಟ್ರಸ್ಟ್ ಕಾರ್ಯದರ್ಶಿ ಶೀಲಾ ಹಾಲ್ಕುರಿಕೆ, ಸ್ಥಳೀಯ ಕಲಾವಿದ ವೀರೇಶ ನಾಯಕ, ಪರಮೇಶಗೌಡ್ರ, ಟಾಕನಗೌಡ ಮಾಲಿಪಾಟೀಲ್, ಹನಮಂತಪ್ಪ ತಳವಾರ್, ಫಕೀರಗೌಡ ಮಾಲಿಪಾಟೀಲ್, ಕಾಳೇಶ ಕಮ್ಮಾರ, ವೆಂಕೋಬ ನಾಯ್ಕ, ಯಮನೂರಪ್ಪ ತಳವಾರ, ಶಿವನಗೌಡ ಮಾಲಿಪಾಟೀಲ್, ಹನುಮಗೌಡ ಮಾಲಿಪಾಟೀಲ್, ಹನುಮಂತಪ್ಪ ಕಮ್ಮಾರ, ಗುನ್ನೆಪ್ಪ ಚನ್ನದಾಸರ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೃತ ೨.೦ ಕುಡಿಯುವ ನೀರಿನ ಕಾಮಗಾರಿ ಅಧ್ವಾನ
ಸ್ಥಳೀಯ ಕಾಂಗ್ರೆಸ್‌ ಮುಖಂಡರ ಕಡೆಗಣನೆ: ಶ್ರೀನಾಥ ಆಕ್ರೋಶ