ಗೋಕರ್ಣದ ಭದ್ರಕಾಳಿ ಮಂದಿರದಲ್ಲಿ ಸಹಸ್ರ ಚಂಡಿಕಾ ಯಾಗ ಸಂಪನ್ನ

KannadaprabhaNewsNetwork |  
Published : Nov 23, 2026, 02:30 AM IST
ಗೋಕರ್ಣದ ಗ್ರಾಮದೇವತೆ ಭದ್ರಕಾಳಿ ಮಂದಿರದ ಸಹಸ್ರ ಚಂಡಿಕಾ ಯಾಗ ನಡೆಯಿತು. | Kannada Prabha

ಸಾರಾಂಶ

ಮೊದಲ ದಿನದ ಕಲಾವೃದ್ಧಿ ಹವನವನ್ನು ಅಗ್ನಿಹೋತ್ರಿ ವೇ. ಬಾಲಚಂದ್ರ ದೀಕ್ಷಿತ ನೇತೃತ್ವದಲ್ಲಿ ವೇ. ಪ್ರಭಾಕರ ದೀಕ್ಷಿತ, ಮಂದಿರದ ಅರ್ಚಕ ವೇ. ಅರುಣ ದೇವತೆ ಹಾಗೂ ಹಿರಿಯ ವೇದ ವಿದ್ವಾಂಸರಿಂದ ನೆರವೇರಿತು.

ಗೋಕರ್ಣ: ಇಲ್ಲಿನ ಗ್ರಾಮದೇವತೆ ಭದ್ರಕಾಳಿ ಮಂದಿರದ ಸಹಸ್ರ ಚಂಡಿಕಾ ಯಾಗ ೨೫ ಸಾವಿರಕ್ಕೂ ಹೆಚ್ಚು ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಭಾನುವಾರ ಅದ್ಧೂರಿಯಾಗಿ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ದೈವಿಕ ಕಾರ್ಯದಲ್ಲಿ ಮೊದಲದಿನ ಪ್ರಾರಂಭೋತ್ಸವದ ಅಂಗವಾಗಿ ಸಂಜೆ ದುರ್ಗಾ ದೀಪ ನಮಸ್ಕಾರ ಮತ್ತಿತರ ದೈವಿಕ ಕಾರ್ಯ, ಎರಡನೆ ದಿನ ಕಲಶಪೂಜೆ, ಸಹಸ್ರ ಚಂಡಿಕಾ ಪ್ರಾರಂಭ, ಕೊನೆಯ ದಿನ ಚರ್ತುವೇದ ಪಾರಾಯಣ ಸಮಗ್ರ ಸಹಸ್ರಚಂಡಿಕಾ ಹವನದ ಮಹಾಪೂರ್ಣಾಹುತಿ, ಭದ್ರಕಾಳಿಯಲ್ಲಿ ಸಹಸ್ರಚಂಡಿಕಾ ಯಾಗದ ಸಮರ್ಪಣೆ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.

ಮೊದಲ ದಿನದ ಕಲಾವೃದ್ಧಿ ಹವನವನ್ನು ಅಗ್ನಿಹೋತ್ರಿ ವೇ. ಬಾಲಚಂದ್ರ ದೀಕ್ಷಿತ ನೇತೃತ್ವದಲ್ಲಿ ವೇ. ಪ್ರಭಾಕರ ದೀಕ್ಷಿತ, ಮಂದಿರದ ಅರ್ಚಕ ವೇ. ಅರುಣ ದೇವತೆ ಹಾಗೂ ಹಿರಿಯ ವೇದ ವಿದ್ವಾಂಸರಿಂದ ನೆರವೇರಿತು. ತಾಂತ್ರಿಕ ವೇ. ಶ್ರೀನಿವಾಸ ಅಡಿಯವರಿಂದ ರಾತ್ರಿ ಗ್ರಾಮಬಲಿ ಕೈಂಕರ್ಯ ನಡೆಯಿತು.

ಸಮಿತಿಯ ಉಪಾಧ್ಯಕ್ಷ ವೇ. ಚಂದ್ರಶೇಖರ ಅಡಿ ಮೂಳೆ ದಂಪತಿಗಳಿಂದ ಕಲಶಪೂಜೆ ನೆಡೆಯಿತು. ವೇ. ವಿಶ್ವನಾಥ ರಮಣಿ ಪ್ರಸಾದ ಪೂಜಾ ಕೈಂಕರ್ಯ ನೆರವೇರಿಸಿದರು. ದುರ್ಗಾ ನಮಸ್ಕಾರ ಗಜಾನನ ಉಪಾಧ್ಯಾ ದಂಪತಿಗಳು ನಡೆಸಿದರು. ವೇ. ನಾಗಾರಜ ಜಂಭೆ ಪೂಜೆ ನೆರವೇರಿಸಿದರು. ವೇ. ಅನಂತರಾಜ ಅಡಿ, ವೇ. ಅಮೃತೇಶ ಹಿರೇ, ಗಣೇಶ್ವರ ದೀಕ್ಷಿತ, ವೇ. ಭಾರ್ಗವ್, ವೇ. ಕಷ್ಣ ಅಡಿ ಹಾಗೂ ಹಿರಿಯ ವೇದವಿದ್ವಾಂಸರು, ಊರಿನ ಸಮಸ್ತ ವೈದಿಕ ವೃಂದದವರು ಪಾಲ್ಕೊಂಡಿದ್ದರು.ಗಣ್ಯರ ಭೇಟಿ: ಮಹಾಪೂರ್ಣಾಹುತಿಯ ಪುಣ್ಯ ಕಾಲದಲ್ಲಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ, ಶಾಸಕ ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ವೇ. ರಾಜಗೋಪಾಲ ಅಡಿ ಗರೂಜಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ ನಾಯಕ ದೇವರಭಾವಿ ಮತ್ತಿತರ ಪ್ರಮುಖರು ಇದ್ದರು.ಆಕರ್ಷಕ ರಥಯಾತ್ರೆ: ಇದೇ ಮೊದಲ ಬಾರಿ ಶ್ರೀದೇವಿಯ ರಥೋತ್ಸವ ನಡೆದಿದ್ದು, ಭಾನುವಾರ ಸಂಜೆ ಭದ್ರಕಾಳಿ ಕಾಲೇಜಿನ ಕ್ರೀಡಾಂಗಣದಿಂದ ವಿಶೇಷ ಅಲಂಕೃತ ರಥದಲ್ಲಿ ವಿರಾಜಮಾನಳಾದ ದೇವಿಯ ರಥ ಗಂಜೀಗದ್ದೆ ಮೂಲಕ ಕೋಟಿತೀರ್ಥ ಕಟ್ಟೆ ತೆರಳಿ ಅಲ್ಲಿಂದ ರಥಬೀದಿ ಮೂಲಕ ಮಹಾಬಲೇಶ್ವರ ಮಂದಿರಕ್ಕೆ ತೆರಳಿ ನಂತರ ತಾರಮಕ್ಕಿ, ಮಾರ್ಗವಾಗಿ ಮಾರುತಿಕಟ್ಟೆಯ ಮೂಲಕ ಮರಳಿತು.

ಮಾತೆಯರ ಚಂಡೆವಾದನ, ಭರತನಾಟ್ಯ, ಪುರುಷ ತಂಡ ಚಂಡೆ ವಾದನ, ಭಜನೆ ಛದ್ಮವೇಷ, ಡೋಲು, ಭಗವದ್ಗೀತೆ ಪಠಣ, ಪಂಚವಾದ್ಯ ರಥೋತ್ಸದ ಜತೆ ಸಾಗಿ ಬಂದಿರುವುದು ಬಹು ಆಕರ್ಷಕವಾಗಿತ್ತು. ಪಿಐ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ಶೈಲಿ ಬದಲಾವಣೆಯಿಂದ ಮಧುಮೇಹ
ನಿಗಧಿತ ಅವಧಿಯಲ್ಲಿ ಜನರ ಕೆಲಸಗಳನ್ನು ಮಾಡಿಕೊಡಿ