ಮೂಲ್ಕಿ: ಜನರು ಕತೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಅವಲಂಬಿಸಿ, ಟಿವಿ ಧಾರಾವಾಹಿಗಳು ಬೆಳೆಯುತ್ತವೆ ಅಥವಾ ನಿಲ್ಲುತ್ತವೆ ಎಂದು ಟಿವಿ ಧಾರಾವಾಹಿಗಳ ಜನಪ್ರಿಯ ಬರಹಗಾರ ಶ್ರೀನಿಧಿ ಡಿ.ಎಸ್. ಹೇಳಿದರು.
ಖ್ಯಾತ ಸಾಹಿತಿ ಶ್ರೀಧರ ಡಿ.ಎಸ್. ಬರೆದ ಬೆಂಗಳೂರು ಸಾಹಿತ್ಯ ಭಂಡಾರ ಪ್ರಕಟಿಸಿರುವ ಕಾದಂಬರಿ ‘ಗಾಂಡೀವಿ’ ಹಾಗೂ ದಾಮೋದರ ಶೆಟ್ಟಿ ಇರುವೈಲು ಬರೆದಿರುವ ಕಿನ್ನಿಗೋಳಿ ಗಾಯತ್ರೀ ಪ್ರಕಾಶನ ಪ್ರಕಟಿಸಿರುವ ಮರೆತ ‘ಅಪರಂಜಿಗಳು ’ಕೃತಿಗಳನ್ನು ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಹಾಗೂ ಪುರುಷೋತ್ತಮ ಕೋಟ್ಯಾನ್ ಬಿಡುಗಡೆಗೊಳಿಸಿದರು. ವಿದ್ವಾಂಸ ರವೀಂದ್ರ ಅತ್ತೂರು ಕೃತಿಗಳ ಬಗ್ಗೆ ಮಾತನಾಡಿದರು.
ಕಸಾಪ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಕೃತಿಕಾರರನ್ನು ಹಾಗೂ ಶ್ರೀನಿಧಿ ಡಿ.ಎಸ್ ಅವರನ್ನು ಗೌರವಿಸಿದರು.ದೇವಸ್ಯ ಮತ್ತು ಕೊಡೆತ್ತೂರುಗುತ್ತಿನ ಗುತ್ತಿನಾರ್ ನಿತಿನ್ ಶೆಟ್ಟಿ, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ್ ಕೊಡೆತ್ತೂರು, ಕಾರ್ಯದರ್ಶಿಗಳಾದ ಹೆರಿಕ್ ಪಾಯಸ್, ಪ್ರಕಾಶ ಆಚಾರ್, ಜೊಸ್ಸಿ ಪಿಂಟೋ, ದೇವದಾಸ ಮಲ್ಯ, ಮಾಧವ ಕೆರೆಕಾಡು, ಕೃಷ್ಣರಾಜ ಭಟ್ ಮತ್ತಿತರರಿದ್ದರು.