ಸಂಸಾರ ತೊರೆದು ಸಂಸ್ಕಾರ ನೀಡಿದ ಸಂತ ನಾರಾಯಣ ಗುರು

KannadaprabhaNewsNetwork |  
Published : Sep 14, 2025, 01:05 AM IST
ಹೂವಿನಹಡಗಲಿಯ ಈಡಿಗ ಸಮಾಜದಿಂದ ತಾಪಂ ಆವರಣದಲ್ಲಿ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಐಗೋಳ್‌ ಚಿದಾನಂದ ಮಾತನಾಡಿದರು. | Kannada Prabha

ಸಾರಾಂಶ

ನಾರಾಯಣ ಗುರು ಸಮಾಜ ಸೇವೆ ಮಾಡಲು ಸಂಸಾರವನ್ನು ತೊರೆದು, ಜನರಿಗೆ ಸಂಸ್ಕಾರ ನೀಡುವ ಕೆಲಸ ಮಾಡಿದ್ದಾರೆ.

ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಐಗೋಳ್‌ ಚಿದಾನಂದ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ನಾರಾಯಣ ಗುರು ಸಮಾಜ ಸೇವೆ ಮಾಡಲು ಸಂಸಾರವನ್ನು ತೊರೆದು, ಜನರಿಗೆ ಸಂಸ್ಕಾರ ನೀಡುವ ಕೆಲಸ ಮಾಡಿದ್ದಾರೆಂದು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಐಗೋಳ್‌ ಚಿದಾನಂದ ಹೇಳಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಈಡಿಗ ಸಮಾಜ ಆಯೋಜಿಸಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ಜನಾಂಗದಲ್ಲಿ ಜನಿಸಿದ ನಾರಾಯಣ ಗುರು ಅವರಿಗೆ ದೇಗುಲ ಪ್ರವೇಶವನ್ನು ನೀಡಲಿಲ್ಲ, ಆ ಕಾರಣಕ್ಕಾಗಿ ಅಂದಿನ ಕಾಲದಲ್ಲೇ ಹಿಂದುಳಿದ ವರ್ಗಗಳಿಗಾಗಿಯೇ ಶಿವಲಿಂಗು ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಜನರಿಗೆ ಧಾರ್ಮಿಕ ಸಂಸ್ಕಾರ ನೀಡಿದ್ದಾರೆ ಎಂದರು.

ಪ್ರತಿಯೊಬ್ಬರೂ ಶಿಕ್ಷಣ ಕಲಿಯಬೇಕೆಂಬ ಉದ್ದೇಶದಿಂದ ಸಣ್ಣ ಹಳ್ಳಿಯಲ್ಲಿ ಶಾಲೆಯೊಂದನ್ನು ತೆರೆದು ಶಿಕ್ಷಣ ನೀಡುವ ಕೆಲಸ ಮಾಡಿದರು. ಶಿವ ಲಿಂಗು ದೇಗುಲ ನಿರ್ಮಾಣ ಮತ್ತು ಶಾಲೆ ತೆರೆಯಲು ಸಾಕಷ್ಟು ಅಡ್ಡಿ ಆತಂಕ ಬಂದರೂ ಎದೆಗುಂದದೇ ಕೆಲಸ ಮಾಡಿದ್ದಾರೆ. ಮನು ಕುಲದ ಏಳ್ಗೆಗೆ ಶ್ರಮಿಸಿ ಜನರಲ್ಲಿ ಆತ್ಮಸ್ಥೈರ್ಯ ನೀಡಿದ್ದರು ಎಂದು ಹೇಳಿದರು.

ಶಾಸಕ ಕೃಷ್ಣನಾಯ್ಕ ಮಾತನಾಡಿ, 171ನೇ ನಾರಾಯಣ ಗುರು ಜಯಂತಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೀರಿ. ನಾರಾಯಣ ಗುರು ಜಾತಿ, ಮತ, ಬೇಧವನ್ನು ವಿರೋಧಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಈಡಿಗ ಸಮಾಜದ ಮುಖಂಡರು ಚರ್ಚಿಸಿ ನನಗೆ ಸಲಹೆ ನೀಡಿದರೇ ತಾವು ಸಹಕಾರ ನೀಡುವುದಾಗಿ ತಿಳಿಸಿದರು.

ಉಪನ್ಯಾಸಕ ಈಡಿಗರ ಅಶೋಕ ನಾರಾಯಣ ಗುರು ಜೀವನ ಕುರಿತಾಗಿ ಮಾಹಿತಿ ನೀಡಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ತಹಸೀಲ್ದಾರ್‌ ಜಿ.ಸಂತೋಷಕುಮಾರ, ತಾಪಂ ಇಒ ಪರಮೇಶ್ವರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಪುರಸಭೆ ಅಧ್ಯಕ್ಷೆ ಗಂಟಿ ಜಮಾಲಾ ಬೀ. ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ವಾರದ ಗೌಸ್‌ ಮೋಹಿದ್ದೀನ್‌, ಗುರುಮೂರ್ತಿ, ಎಚ್‌.ಪೂಜೆಪ್ಪ, ಕೆ.ಅಯ್ಯನಗೌಡ, ಬಿ.ಜಯಲಕ್ಷ್ಮೀ, ಎಂ.ಬಸವರಾಜ, ಪುತ್ರೇಶ, ಈಟಿ ಲಿಂಗರಾಜ, ಈಡಿಗರ ಸಮಾಜದ ಅಧ್ಯಕ್ಷ ಮಾರುತಿ ಸೇರಿದಂತೆ ಇತರರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ