- ಮತಗಟ್ಟೆ ಅಧಿಕಾರಿಯಿಂದ ಹಿಡಿದು ಸಹಾಯಕಿ, ಕಾವಲು ಸಿಬ್ಬಂದಿವರೆಗೂ ಸಂಪೂರ್ಣ ಮಹಿಳೆಯರೇ ನಿರ್ವಹಣೆ
ಮತಗಟ್ಟೆ ಸಂಖ್ಯೆ 46ರಲ್ಲಿ ಹಾಗೂ ಮತಗಟ್ಟೆ ಸಂಖ್ಯೆ 52ರಲ್ಲಿ ಮಹಿಳಾ ಮತದಾರರು 500ಕ್ಕೂ ಹೆಚ್ಚು ಜನ ಇರುವ ಕಾರಣ, ಇಲ್ಲಿ ತೆರೆಯಲಾಗಿದೆ. ಎಲ್ಲಾ ಮಹಿಳಾ ಮತದಾರರು ಬಂದು ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ಈ ಕಾರಣದಿಂದ ಮತದಾನದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಗಳಿವೆ.
ವಿಶೇಷವಾಗಿ ಗಾಲಿಕುರ್ಚಿ ಸಹಾಯದಿಂದ ಬರುವ ಮಹಿಳೆಯರು, ದೃಷ್ಟಿದೋಷ ಸೇರಿದಂತೆ ಅಂಗವಿಕಲ ಮಹಿಳೆಯರಿಗೆ ಈ ಪಿಂಕ್‌ಬೂತ್‌ಗಳಲ್ಲಿ ವಿಶೇಷ ಅತಿಥ್ಯ ದೊರೆಯಲಿದೆ. ಇಂತಹ ಮಹಿಳೆಯರು ಸರದಿಯಲ್ಲಿ ನಿಲ್ಲದೆ ನೇರವಾಗಿ ಮತಗಟ್ಟೆ ಕೇಂದ್ರಕ್ಕೆ ಪ್ರವೇಶಿಸಿ ಮತದಾನ ಮಾಡುವ ಅವಕಾಶವನ್ನೂ ಕಲ್ಪಿಸಲಾಗುವುದು ಎಂದು ಚುನಾವಣೆ ಅದಿಕಾರಿಗಳು ಮಾಹಿತಿ ನೀಡಿದ್ದಾರೆ.ಮತದಾರರೆಲ್ಲರೂ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು. ಬಂದು ಮತ ಹಾಕುವುದರ ಜೊತೆಗೆ ಮತದಾನ ಮಾಡಿಸುವಂತಹ ಬದ್ಧತೆಯನ್ನು ತೋರಿಸಬೇಕು ಎಂದು ಅಧಿಕಾರಿ ತಿಳಿಸಿದರು.ಫೋಟೋ 3 :
ದಾಬಸ್‌ಪೇಟೆ ಪಟ್ಟಣದ ಮತಗಟ್ಟೆ ಸಂಖ್ಯೆ 46ರಲ್ಲಿ ಪಿಂಕ್ ಮತಗಟ್ಟೆ ಸಿದ್ದಪಡಿಸಿರುವುದು.