ಜಿಗುಪ್ಸೆಯಿಂದ ಸಾಫ್ಟ್‌ವೇರ್ ಉದ್ಯೋಗಿ ಆತ್ಮಹತ್ಯೆ

KannadaprabhaNewsNetwork |  
Published : Aug 21, 2024, 12:33 AM IST

ಸಾರಾಂಶ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಾಗ್ನಿಕ್‌ (24) ಮೃತ ದುರ್ದೈವಿ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ರಸ್ತೆಯ ರಾಯಲ್‌ ಇನ್‌ ಹೋಟೆಲ್‌ನಲ್ಲಿ ಯಾಗ್ನಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಹೀಲಿಯಂ ಅನಿಲ ಸೇವಿಸಿ ಸಾಫ್ಟ್‌ವೇರ್ ಉದ್ಯೋಗಿ ಯಾಗ್ನಿಕ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಕಲೇಶಪುರ ತಾಲೂಕಿನ ಕಾಫಿ ಎಸ್ಟೇಟ್ ಮಾಲಿಕರ ಪುತ್ರನಾದ ಯಾಗ್ನಿಕ್‌, ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಈ ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ನೇಹಿತರ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆತ, ವರ್ಕ್‌ ಫ್ರಮ್ ಹೋಂ ಕಾರಣಕ್ಕೆ ಊರಿಗೆ ತೆರಳಿದ್ದ.

ಕನ್ನಡಪ್ರಭ ವಾರ್ತೆ ಹಾಸನ

ಜೀವನದಲ್ಲಿ ಜಿಗುಪ್ಸೆಗೊಂಡು ಹೀಲಿಯಂ ಅನಿಲ ಸೇವಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಾಗ್ನಿಕ್‌ (24) ಮೃತ ದುರ್ದೈವಿ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ರಸ್ತೆಯ ರಾಯಲ್‌ ಇನ್‌ ಹೋಟೆಲ್‌ನಲ್ಲಿ ಯಾಗ್ನಿಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನ ರೂಮ್‌ಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೋಟೆಲ್ ಸಿಬ್ಬಂದಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ವರ್ಕ್ ಫ್ರಮ್‌ ಹೋ ಇದ್ದವನು:

ಸಕಲೇಶಪುರ ತಾಲೂಕಿನ ಕಾಫಿ ಎಸ್ಟೇಟ್ ಮಾಲಿಕರ ಪುತ್ರನಾದ ಯಾಗ್ನಿಕ್‌, ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಈ ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ನೇಹಿತರ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆತ, ವರ್ಕ್‌ ಫ್ರಮ್ ಹೋಂ ಕಾರಣಕ್ಕೆ ಊರಿಗೆ ತೆರಳಿದ್ದ. ಅಲ್ಲಿಂದಲೇ ಕೆಲಸ ಮಾಡುತ್ತಿದ್ದ ಯಾಗ್ನಿಕ್‌, ಇದೇ ತಿಂಗಳ 16ರಂದು ಎಂಟೆಕ್ ಪರೀಕ್ಷೆ ಸಲುವಾಗಿ ನಗರಕ್ಕೆ ಬಂದು ನೀಲಾದ್ರಿ ರಸ್ತೆಯ ರಾಯಲ್ ಇನ್‌ ಹೋಟೆಲ್‌ನಲ್ಲಿ ತಂಗಿದ್ದ.

ಪೂರ್ವನಿಗದಿಯಂತೆ ಮಂಗಳವಾರ ಬೆಳಗ್ಗೆ ಆತ ರೂಮ್ ಖಾಲಿ ಮಾಡಬೇಕಿತ್ತು. ಆದರೆ ಮಧ್ಯಾಹ್ನ 12 ಗಂಟೆಯಾದರೂ ರೂಮ್‌ನಿಂದ ಹೊರಗೆ ಬಾರದ ಕಾರಣಕ್ಕೆ ಯಾಗ್ನಿಕ್ ಮೊಬೈಲ್‌ಗೆ ಹೋಟೆಲ್ ಸಿಬ್ಬಂದಿ ಕರೆ ಮಾಡಿದ್ದಾರೆ. ಆಗ ನಿರಂತರ ಕರೆಗಳಿಗೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡ ಸಿಬ್ಬಂದಿ, ಕೂಡಲೇ ಮೃತನ ರೂಮ್‌ಗೆ ತೆರಳಿ ಬಾಗಿಲು ಬಡಿದಿದ್ದಾರೆ. ಆಗಲೂ ಕೂಡ ಯಾವುದೇ ಪ್ರತಿಕ್ರಿಯೆ ಬಾರದೆ ಹೋದಾಗ ಕೊನೆಗೆ ಆ ರೂಮ್‌ನ ಮಾಸ್ಟರ್ ಕೀ ತಂದು ಬಾಗಿಲು ಸಿಬ್ಬಂದಿ ತೆರೆದಿದ್ದಾರೆ. ಆ ವೇಳೆ ಪ್ರಜ್ಞಾಹೀನನಾಗಿ ಆತ ಬಿದ್ದಿರುವುದನ್ನು ಕಂಡು ಆತಂಕಗೊಂಡಿದ್ದಾರೆ.

ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಂತೆಯೇ ಹೋಟೆಲ್‌ಗೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಬಲೂನ್‌ಗೆ ಗಾಳಿ ತುಂಬುವ ಹೀಲಿಯಂ ಅನಿಲ ಸೇವಿಸಿ ಯಾಗ್ನಿಕ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೀಲಿಯಂ ಸೇವಿಸಿದರೆ 2 ಸೆಕೆಂಡ್‌ನಲ್ಲೇ ಸಾವು:

ವೈಯಕ್ತಿಕ ಕಾರಣಗಳಿಂದ ಬೇಸರಗೊಂಡು ಆತ್ಮಹತ್ಯೆಗೆ ನಿರ್ಧರಿಸಿದ್ದ ಯಾಗ್ನಿಕ್‌, ಹಿಂಸೆ ಅಥವಾ ಘಾಸಿಯಾಗದಂತೆ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನದ ಬಗ್ಗೆ ಗೂಗಲ್‌ ಸರ್ಚ್ ಮಾಡಿ ತಿಳಿದುಕೊಂಡಿದ್ದಾನೆ. ಹೀಲಿಯಂ ಅನಿಲ ಸೇವಿಸಿದರೆ ಮನುಷ್ಯನ ದೇಹದಲ್ಲಿ ಗಾಳಿ ನಿರ್ವಾತ ಉಂಟಾಗಿ 1ರಿಂದ 2 ಸೆಕೆಂಡ್‌ನಲ್ಲಿ ಸಾವು ಸಂಭವಿಸುತ್ತದೆ. ಈ ಮಾಹಿತಿ ತಿಳಿದು ಹೀಲಿಯಂ ಅನಿಲ ಸೇವಿಸಿ ಯಾಗ್ನಿಕ್‌ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.

ಜೀವನ ಸಾಕಾಗಿದೆ ಕಣೋ ಎಂದಿದ್ದ: ಎಂಟೆಕ್ ಪರೀಕ್ಷೆ ಸಲುವಾಗಿ ಊರಿನಿಂದ ಬೆಂಗಳೂರಿಗೆ ಮರಳಿದ ದಿನದಿಂದಲೂ ಯಾಗ್ನಿಗ್‌ ಮಂಕಾಗಿದ್ದ. ಈ ನಡವಳಿಕೆ ಕಂಡು ಆತನ ಸ್ನೇಹಿತರು ಯಾಕೋ ಏನಾಗಿದೆ ನಿನಗೆ ಎಂದಿದ್ದ. ಆಗ ತನಗೆ ಜೀವನ ಸಾಕಾಗಿದೆ ಕಣೋ ಎಂದಿದ್ದಾನೆ. ಆಗ ಏನ್‌ ಲವ್‌ ಆಗಿದೆಯೋ ಎಂದು ಯಾಗ್ನಿಕ್‌ನನ್ನು ಆತನ ಗೆಳೆಯರು ತಮಾಷೆ ಮಾಡಿದ್ದರು. ಅಲ್ಲದೆ ಸೋಮವಾರ ಪರೀಕ್ಷೆ ಮುಗಿದ ನಂತರ ಸ್ನೇಹಿತರೆಲ್ಲ ಒಟ್ಟಿಗೆ ಊಟಕ್ಕೆ ಹೋಗಲು ಕರೆದಾಗ ಯಾಗ್ನಿಕ್‌, ತನಗೆ ಪೀಣ್ಯದಲ್ಲಿ ಆಟೋಮೊಬೈಲ್ ಖರೀದಿ ಸಂಬಂಧ ತುರ್ತು ಕೆಲಸವಿದೆ ಎಂದು ಹೇಳಿ ತಪ್ಪಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಮೊಬೈಲ್‌ನಲ್ಲಿದೆಯೇ ಆತ್ಮಹತ್ಯೆ ಸತ್ಯ: ಈ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಆತನಿಗೆ ಹಣಕಾಸಿನ ಸಮಸ್ಯೆ ಇರಲಿಲ್ಲವೆಂಬುದು ಖಚಿತವಾಗಿದೆ. ಯಾಗ್ನಿಕ್ ಕುಟುಂಬ ಆರ್ಥಿಕ ಉತ್ತಮ ಸ್ಥಿತಿಯಲ್ಲಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಆತ ಸಹ ಕೈ ತುಂಬ ಸಂಬಳದ ಕೆಲಸಲ್ಲಿದ್ದ. ಹೀಗಾಗಿ ಪ್ರೇಮ ವೈಫಲ್ಯ ಅಥವಾ ಬೇರೆ ವೈಯಕ್ತಿಕ ಕಾರಣಕ್ಕೆ ಯಾಗ್ನಿಕ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಮೃತನ ಮೊಬೈಲ್ ಲಾಕ್ ಆಗಿದೆ. ಹೀಗಾಗಿ ಆ ಮೊಬೈಲ್ ಅನ್ನು ರೆಟ್ರೀವ್ ಸಲುವಾಗಿ ಸೈಬರ್ ವಿಭಾಗಕ್ಕೆ ಕಳುಹಿಸಲಾಗಿದೆ. ಮೊಬೈಲ್ ಅನ್‌ ಲಾಕ್ ಬಳಿಕ ಆತ್ಮಹತ್ಯೆಗೆ ಕಾರಣ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

-ಬಾಕ್ಸ್‌-ಪೀಣ್ಯದಲ್ಲಿ ಗ್ಯಾಸ್‌ ಸಿಲಿಂಡರ್ ಖರೀದಿಪೀಣ್ಯದ ಕೈಗಾರಿಕಾ ಪ್ರದೇಶದಲ್ಲಿ 3 ಅಡಿ ಎತ್ತರ ಬಲೂನ್‌ಗೆ ತುಂಬುವ ಹೀಲಿಯಂ ಸಿಲಿಂಡರ್ ಅನ್ನು ಯಾಗ್ನಿಕ್ ಖರೀದಿಸಿದ್ದ. ಬಳಿಕ ಆ ಸಿಲಿಂಡರ್‌ ಅನ್ನು ಟ್ರಕ್ಕಿಂಗ್‌ ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಟೆಲ್‌ಗೆ ಸೋಮವಾರ ರಾತ್ರಿ ಆತ ತಂದಿದ್ದಾನೆ. ಈ ಸಿಲಿಂಡರ್ ತರುವ ಸಲುವಾಗಿಯೇ ತನ್ನ ಸ್ನೇಹಿತನಿಂದ ಟ್ರಕ್ಕಿಂಗ್ ಬ್ಯಾಗ್ ಅನ್ನು ಆತ ಪಡೆದಿದ್ದ. ಅಲ್ಲದೆ ಹೋಟೆಲ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಆತ ಸಿಲಿಂಡರ್ ತರುವ ದೃಶ್ಯಾವಳಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ