ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಯೂನಿಯನ್, ಮಂಡ್ಯ ಉಪ ಕಚೇರಿ ಸಿಬ್ಬಂದಿ ಹಾಗೂ ಕೃತಕ ಗರ್ಭಧಾರಣೆ ಕಾರ್ಯಕರ್ತರ ಸಹಯೋಗದೊಂದಿಗೆ ಮಂಡ್ಯ ತಾಲೂಕಿನ ಮನ್ಮುಲ್ ನಿರ್ದೇಶಕರಾದ ಯು.ಸಿ.ಶಿವಕುಮಾರ್, ಬಿ.ಆರ್.ರಾಮಚಂದ್ರ, ಎಂ.ಎಸ್. ರಘುನಂದನ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಮಂಡ್ಯ ತಾಲೂಕಿನಿಂದ ಮೂವರು ನಿರ್ದೇಶಕರನ್ನು ಪಕ್ಷಾತೀತವಾಗಿ ಗುರುತಿಸಿ ಅಭಿನಂದಿಸುತ್ತಿದ್ದೀರಿ, ನಾನೂ ಸಹ ಮೂರು ಬಾರಿ ನಿರ್ದೇಶಕನಾಗಲು ಕಾರ್ಯದರ್ಶಿಗಳ ಸಹಕಾರ ಕಾರಣ ಎಂದರು.ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಯಾರನ್ನೂ ಕಡೆಗಣಿಸದೆ ಎಲ್ಲರನ್ನೂ ವಿಶ್ವಾಸದಿಂದ ಸಮತೋಲನವಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟದಲ್ಲಿ ಮಂಡ್ಯ ತಾಲೂಕು ಹಾಲಿನ ಗುಣಮಟ್ಟದಲ್ಲಿ, ಸೇವಾ ಕಾರ್ಯಚಟುವಟಿಕೆಗಳಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.
ಮನ್ಮುಲ್ ನಿರ್ದೇಶಕರಾದ ಬಿ.ಆರ್ ರಾಮಚಂದ್ರ, ಎಂ.ಎಸ್. ರಘುನಂದನ್, ಮಂಡ್ಯ ಉಪವ್ಯವಸ್ಥಾಪಕ ಡಾ.ಮಂಜೇಶ್ ಗೌಡ, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಯೂನಿಯನ್ ಅಧ್ಯಕ್ಷ ನಾಗರಾಜು, ನಿರ್ದೇಶಕ ಶಿವಕುಮಾರ್, ಸೇರಿದಂತೆ ಮತ್ತಿತರರು ಹಾಜರಿದ್ದರು.