-ರಿಲಯನ್ಸ್ ಬಹುರಾಷ್ಟ್ರೀಯ ಕಂಪನಿಯ ಸ್ಮಾರ್ಟ್ ಬಜಾರ ಮಳಿಗೆಯಲ್ಲಿ ಅವಧಿ ಮೀರಿದ ಆಹಾರ ಮಾರಾಟ
-----
ಕನ್ನಡಪ್ರಭ ವಾರ್ತೆ ಲಿಂಗಸುಗೂರುಗ್ರಾಹಕರಿಗೆ ಜೀವನಾಶ್ಯಕ ವಸ್ತುಗಳನ್ನು ಮಾರಾಟ ಮಾಡಲು ಲಿಂಗಸುಗೂರು ಪಟ್ಟಣದಲ್ಲಿ ತೆಲೆ ಎತ್ತಿರುವ ರಿಲಯನ್ಸ್ ಬಹುರಾಷ್ಟ್ರೀಯ ಕಂಪನಿಯ ಸ್ಮಾರ್ಟ ಬಜಾರ ಮಳಿಗೆಯಲ್ಲಿ ಗ್ರಾಹಕರಿಗೆ ವಿಷಪೂರಿತ, ಅವಧಿ ಮುಗಿದ ಆಹಾರ ಪದಾರ್ಥಗಳ ಮಾರಾಟ ಕಂಡು ಗ್ರಾಹಕರು ಬೆಚ್ಚಿ ಬಿದ್ದ ಘಟನೆ ಗುರುವಾರ ನಡೆದಿದೆ.
ಗುರುವಾರ ಪಟ್ಟಣದ ನ್ಯಾಯವಾದಿಯೊಬ್ಬರು ಸ್ಮಾರ್ಟ್ ಬಜಾರ್ ಗೆ ಹೋಗಿ ಪನೀರ್ ಪಾಕೀಟ್ ಖರೀದಿಸಿದ್ದಾರೆ. ಅದು ದುರ್ವಾಸನೆ ಮೂಗಿಗೆ ರಾಚಿದೆ ಇದರಿಂದ ಗಾಬರಿಗೊಂಡ ಗ್ರಾಹಕ ಖರೀದಿಸಿ ಪಾಕೀಟ್ ಬಿಚ್ಚಿ ನೋಡಿದಾಗ ಅದರಲ್ಲಿ ಪನೀರ್ ತಯಾರಿಸುವ ಪೌಡರ್ ಗಟ್ಟಿಯಾಗಿ, ಅದರಿಂದ ದುರ್ವಾಸನೆ ಬಂದಿದೆ. ಸಿದ್ಧಪಡಿಸಿದ ಚಪಾತಿ ತಿಂದು ನೋಡಿದಾಗ, ಅದು ಕೂಡಾ ವಿಷವಾಗಿದೆ. ಇದರಿಂದ ಬೆಚ್ಚಿಬಿದ್ದ ಗ್ರಾಹಕರು ಮಳಿಗೆ ವ್ಯವಸ್ಥಾಪಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮಳಿಗೆ ವ್ಯವಸ್ಥಾಪಕರು ಗ್ರಾಹಕರಿಗೆ ಸಮಜಾಯಿಸಿ ನೀಡಲು ಮುಂದಾದಾಗ ಮಳಿಗೆ ನಿರ್ವಾಹಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಗ್ರಾಹಕರು ಬೃಹತ್ ಮಳಿಗೆ ನಿರ್ಮಿಸಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದೀರಿ. ದೊಡ್ಡ ಮಳಿಗೆಯಲ್ಲಿ ನಿಗದಿತ ಅವಧಿ ಮುಗಿದ ಆಹಾರ ಪದಾರ್ಥಗಳು ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಮಾರ್ಟ್ ಬಜಾರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
------------
ಗ್ರಾಹಕರು ಮೊಬೈಲ್ ಕರೆ ಮಾಡಿ ವಿಷ ಆಹಾರ, ಅವಧಿ ಮೀರಿದ ವಸ್ತುಗಳನ್ನು ಮಾರಾಟ ಮಾಡಿದ ಬಗ್ಗೆ ತಿಳಿದು ಬಂದಿದೆ. ಅದರಂತೆ ಸ್ಮಾರ್ಟ್ ಬಜಾರ ಮಳಿಗೆಗೆ ಭೇಟಿ ನೀಡಿದಾಗ, ಅವಧಿ ಮೀರಿದ ವಸ್ತುಗಳ ಮಾರಾಟ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಕಂಡು ಬಂದರೆ ಅವರ ವಿರುದ್ಧ ಕ್ರಮ ವಹಿಸಿ ಮಳಿಗೆಗೆ ಬೀಗ ಜಡಿಯಲಾಗುವುದು. ಮಾರಾಟ ಮಳಿಗೆಯವರು ಸೂಕ್ತ ಎಚ್ಚರಿಕೆ ವಹಿಸಬೇಕು.
-----------------
12ಕೆಪಿಎಲ್‌ಎನ್‌ಜಿ06 : ಲಿಂಗಸುಗೂರು ಸ್ಮಾರ್ಟ್ ಬಜಾರನಲ್ಲಿ ಅವಧಿ ಮೀರಿದ ವಸ್ತುಗಳ ಮಾರಾಟ ಮಾಡಲಾಗಿದೆ ಎಂದು ಮಳಿಗೆಯವನರನು ತರಾಟೆಗೆ ತೆಗೆದುಕೊಂಡಿರುವ ಗ್ರಾಹಕರು.
--------------------