ಒಳ್ಳೆಯದನ್ನು ಮಾಡುತ್ತಾ ಮೋಕ್ಷ ಸಾಧನೆಯಾಗಬೇಕು: ಡಾ.ಶ್ರೀನಿವಾಸ ರಾಘವನ್

KannadaprabhaNewsNetwork |  
Published : May 25, 2026, 02:00 AM IST
21ಕೆಕೆಡಿಯು2. | Kannada Prabha

ಸಾರಾಂಶ

ಕಡೂರುಮಾನವನಾಗಿ ಜನ್ಮ ತಾಳಿರುವುದೇ ಒಂದು ಪುಣ್ಯ. ನಾವು ಬದುಕಿ ಬಾಳಿದಷ್ಟು ದಿನ ಒಳ್ಳೆಯದನ್ನು ಮಾಡುವ ಮೂಲಕ ಮೋಕ್ಷ ಸಾಧನೆಯತ್ತ ಸಾಗಬೇಕು ಎಂದು ನಿವೃತ್ತ ಉಪನ್ಯಾಸಕ ಹಾಗೂ ಆಗಮ ಪಂಡಿತ ಡಾ.ಶ್ರೀನಿವಾಸ ರಾಘವನ್ ಹೇಳಿದರು.

- ಸಂಪನ್ನಗೊಂಡ ಅಷ್ಟಾಕ್ಷರ ಮಹಾಯಾಗ

ಕನ್ನಡಪ್ರಭ ವಾರ್ತೆ, ಕಡೂರು

ಮಾನವನಾಗಿ ಜನ್ಮ ತಾಳಿರುವುದೇ ಒಂದು ಪುಣ್ಯ. ನಾವು ಬದುಕಿ ಬಾಳಿದಷ್ಟು ದಿನ ಒಳ್ಳೆಯದನ್ನು ಮಾಡುವ ಮೂಲಕ ಮೋಕ್ಷ ಸಾಧನೆಯತ್ತ ಸಾಗಬೇಕು ಎಂದು ನಿವೃತ್ತ ಉಪನ್ಯಾಸಕ ಹಾಗೂ ಆಗಮ ಪಂಡಿತ ಡಾ.ಶ್ರೀನಿವಾಸ ರಾಘವನ್ ಹೇಳಿದರು.ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಕ್ಕಾಗಿ 2 ದಿನಗಳಿಂದ ಹಮ್ಮಿಕೊಂಡಿದ್ದ ಅಷ್ಟಾಕ್ಷರ ಮಹಾಯಾಗದ ಪೂರ್ಣಾಹುತಿ ನೆರವೇರಿಸಿ ಮಾತನಾಡಿ ಮಾನವನ ಜನ್ಮ ಎಲ್ಲದಕ್ಕಿಂತ ಶ್ರೇಷ್ಠ ಅದನ್ನು ಹಾಳು ಮಾಡದೆ ಲೋಕ ಕಲ್ಯಾಣಕ್ಕಾಗಿ ಉಪಯೋಗಿಸಿ ಎಂದರು.

ಅಷ್ಟಾಕ್ಷರ ಮಹಾಯಾಗ ಮಾಡುವುದು ಗ್ರಾಮ, ದೇಶದ ಒಳಿತಿಗೆ. ಮಳೆ, ಬೆಳೆ ಮತ್ತು ಆರೋಗ್ಯ ಸುಧಾರಿ ಸುವುದಲ್ಲದೆ ಜನರು ಸಂತೃಪ್ತಿಯಿಂದ ಬದುಕಿ ಬಾಳುವಂತಾಗುತ್ತದೆ. ಇಂತಹ ಕಾರ್ಯಗಳಲ್ಲಿ ಪಾಲ್ಗೊಂಡಿರುವ ನಾವೇ ಧನ್ಯರು ಎಂದರು.

ಪ್ರಧಾನ ಅರ್ಚಕ ಸುದರ್ಶನ್ ಭಾರದ್ವಜ್ ಹಾಗೂ ಶ್ರೀವತ್ಸ ಭಾರದ್ವಾಜ್ ಮಾತನಾಡಿ, ಅಷ್ಟಾಕ್ಷರ ಮಹಾಯಾಗ ವಿಷ್ಣು ವಿಗೆ ಅರ್ಪಿತವಾದ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರ ಯಾಗ. ಓಂ ನಮೋ ನಾರಾಯಣಾಯ ಎಂಬ 8 ಅಕ್ಷರಗಳ ಮಹಾ ಮಂತ್ರ ಆಧರಿಸಿ ಯಾಗ ನಡೆಸಲಾಗುತ್ತಿದೆ. ಇದರ ಫಲಗಳು ಮೋಕ್ಷ ಪ್ರಾಪ್ತಿ, ಸಕಲ ಇಷ್ಟಾರ್ಥ ಸಿದ್ಧಿ, ಪಾಪ ನಿವಾರಣೆ, ಆರೋಗ್ಯ ಮತ್ತು ಆಯುಷ್ಯ ಲಭಿಸುತ್ತದೆ. ಹಿಂದೂ ಧರ್ಮದಲ್ಲಿ ಇದನ್ನು ವಿಶೇಷವಾಗಿ ವಿಷ್ಣು ದೇವಸ್ಥಾನಗಳಲ್ಲಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಆಯೋಜಿಸಲಾಗುವುದು ಎಂದರು.ದೇವಾಲಯ ಸಮಿತಿ ಅಧ್ಯಕ್ಷ ಲೋಕೇಶ್ ಧಾರ್ಮಿಕ ಕಾರ್ಯದಲ್ಲಿ ಕೇಶವ ರಂಗದ ಯುವ ಪಡೆ, ದಾನಿಗಳು, ಭಕ್ತರು ಭಾಗವಹಿಸಿದ್ದರು. ಎರಡೂ ದಿನಗಳು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 21ಕೆಕೆಡಿಯು3:

ಕಡೂರು ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ ಗುರುವಾರ ಲೋಕಕಲ್ಯಾಣಕ್ಕಾಗಿ ಎರೆಡು ದಿನಗಳಿಂದ ಹಮ್ಮಿಕೊಂಡಿದ್ದ ಅಷ್ಟಾಕ್ಷರ ಮಹಾಯಾಗದ ಪೂರ್ಣಾಹುತಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಕೀಲರು ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಿ: ಎಚ್‌. ಬಿಳ್ಳಪ್ಪ
ಪುಸ್ತಕ ಖರೀದಿಸಿ ಓದುವ ಹವ್ಯಾಸ ರೂಢಿಸಿಕೊಳ್ಳಿ: ಸಭಾಪತಿ ಬಸವರಾಜ ಹೊರಟ್ಟಿ