28, 29ಕ್ಕೆ ಬೆಂಗಳೂರಿನಲ್ಲಿ ಸಮಾಜಮುಖಿ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Nov 27, 2026, 01:30 AM IST
ಪೋಟೋ: 28ಎಸ್‌ಎಂಜಿಕೆಪಿ07: ಹೊನ್ನಾಳಿ ಚಂದ್ರಶೇಖರ್ | Kannada Prabha

ಸಾರಾಂಶ

'Samajamukhi' (Socially-Oriented) Literature Conference in Bengaluru on the 28th and 29th

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಚಿಂತನೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಮಾಜಮುಖಿ ಪ್ರಕಾಶನದ ವತಿಯಿಂದ 2026ನೇ ಸಾಲಿನ ಸಮಾಜಮುಖಿ ಸಾಹಿತ್ಯ ಸಮ್ಮೇಳನವನ್ನು ನ. 28 ಮತ್ತು 29ರಂದು ಬೆಂಗಳೂರಿನ ಅರಮನೆ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಪ್ರತಿನಿಧಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿಯ ಸಮ್ಮೇಳನದಲ್ಲಿ ನಾಲ್ಕು ವೇದಿಕೆಗಳನ್ನು ರೂಪಿಸಲಾಗಿದ್ದು, ಎರಡು ದಿನಗಳಲ್ಲಿ ಒಟ್ಟು 42 ಗೋಷ್ಠಿಗಳು ನಡೆಯಲಿವೆ. ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿ, ಪ್ರಜಾಪ್ರಭುತ್ವ, ಸಮಕಾಲೀನ ಸಾಮಾಜಿಕ ಸಮಸ್ಯೆಗಳು, ಕೃತಕ ಬುದ್ಧಿಮತ್ತೆ, ಪರಿಸರ, ಮಹಿಳಾ ಸಾಹಿತ್ಯ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದರು.

ಬಹುವಚನ, ಸಂಸ್ಕೃತಿ ಸಂಪದ, ಸೃಜನಶೀಲ ಹಾಗೂ ಶಾಸ್ತ್ರೀಯ ವೇದಿಕೆಗಳಲ್ಲಿ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಸಂಶೋಧಕರು, ಕಲಾವಿದರು ಮತ್ತು ಬರಹಗಾರರು ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಹಂಪನಾ, ಎಂ. ವೀರಪ್ಪ ಮೊಯ್ಲಿ. ಆರ್. ಸುನಂದಮ್ಮ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದು, ಸಮಾರೋಪದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿ, ವಿಜಯಮ್ಮ, ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಾಹಿತ್ಯ ಗೋಷ್ಠಿಗಳ ಜೊತೆಗೆ ನೀಲಗಾರರಿಂದ ಮಂಟೇಸ್ವಾಮಿ ಕಾವ್ಯ ಪ್ರಸ್ತುತಿ, ತತ್ವಪದ ಗಾಯನ, ಯಕ್ಷಗಾನ ತಾಳಮದ್ದಳೆ, ಜನಪದ ಗಾಯನ ಹಾಗೂ ಮಕ್ಕಳಿಗಾಗಿ ಬಾಲವನ ಕಾರ್ಯಾಗಾರ ನಡೆಯಲಿದೆ ಎಂದರು.

ಪೋಟೋ: 28ಎಸ್‌ಎಂಜಿಕೆಪಿ07: ಹೊನ್ನಾಳಿ ಚಂದ್ರಶೇಖರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ದಿನವಿಡೀ ಕಾಯುವ ಬಡವರು
ಸಂವಿಧಾನ ಪ್ರತಿ ನಾಗರಿಕನ ಬದುಕಿಗೆ ದಾರಿದೀಪ: ದಿನೇಶ್