ಸಂಪಾಜೆ ಗ್ರಾಮ ಪಂಚಾಯಿತಿಗೆ 3ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

KannadaprabhaNewsNetwork |  
Published : Apr 12, 2026, 02:45 AM IST
ಪುರಸ್ಕಾರ.ಪುರಸ್ಕಾರ. | Kannada Prabha

ಸಾರಾಂಶ

ಸಂಪಾಜೆ ಗ್ರಾಮ ಪಂಚಾಯತ್ ಇದೀಗ 3ನೇ ಬಾರಿಗೆ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಂಪಾಜೆ ಗ್ರಾಮ ಪಂಚಾಯತ್ ಇದೀಗ 3ನೇ ಬಾರಿಗೆ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗಿದೆ.

ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತೆ ಹಾಗೂ ಸಮರ್ಪಕ ಆಡಳಿತ ಮೂಲಕ ಹಲವು ಹೊಸತನ್ನು ನಿರ್ಮಿಸಿ ಜನಮನ ಗೆದ್ದುಕೊಂಡಿತ್ತು. 2013-14, ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಕಾಂತಪ್ಪ ಅವರ ಅಧಿಕಾರ ಅವಧಿಯಲ್ಲಿ ಮೊದಲ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಹಾಗೂ 2020-21ರಲ್ಲಿ ಈ ಪುರಸ್ಕಾರವನ್ನು ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಅವರ ಜೊತೆಗೂಡಿ ಜಿ.ಕೆ ಹಮೀದ್ ಸ್ವೀಕರಿಸಿದ್ದರು. 3 ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಪಂಚಾಯತ್ ಗೆ ಈಗಾಗಲೇ 4 ಲಕ್ಷ ರು. ಪ್ರೋತ್ಸಾಹ ಧನ ಬಿಡುಗಡೆ ಆಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಬೀದಿ ದೀಪ ವ್ಯವಸ್ಥೆಯೊಂದಿಗೆ ಉದ್ಯೋಗ ಖಾತ್ರಿ ಯೋಜನೆ ಯನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಪಂಚಾಯತ್ ಆಗಿ ರೂಪುಗೊಂಡಿದೆ. ಸಂಜೀವಿನಿ ಒಕ್ಕೂಟದ ಮೂಲಕ ಕಸ ಸಂಗ್ರಹ ಮಾಡಿ ಘಟಕಕ್ಕೆ ರವಾನೆ, ಗ್ರಾಮದಲ್ಲಿ ಕಸ ವಿಲೇವಾರಿ ಘಟಕ, ಕಸ ಸಂಗ್ರಹಿಸಲು ವಾಹನದ ವ್ಯವಸ್ಥೆ , ಗ್ರಂಥಾಲಯ, ಸರಕಾರಿ ಶಾಲೆಗಳಿಗೆ ಗ್ರಂಥಾಲಯ ಗ್ರಾಮ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಕೆ, ಸಾರ್ವಜನಿಕ ಶೌಚಾಲಯ ಮಾರುಕಟ್ಟೆ, ಸೋಲಾರ್ ಹೈಮಾಸ್ಟ್ ದೀಪ, ಅಂಗನವಾಡಿ ಕೇಂದ್ರ ಹಾಗೂ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಿ ಗ್ರಾಮದ ಅಬಿವೃದ್ಧಿ ಮಾಡಲಾಗಿದೆ. ಪಂಚಾಯತ್ ಆದಾಯಕ್ಕೆ ವಾಣಿಜ್ಯ ಕಟ್ಟಡ ಮಾರುಕಟ್ಟೆ ವ್ಯವಸ್ಥೆ, ಬಾಡಿಗೆ ಮನೆ ಪೂರಕವಾಗಿ ಸಹಕಾರಿಯಾಗಿದೆ. ಗ್ರಾಮದ ಮುಖ್ಯ ಪೇಟೆಯಾಗಿ ಕಲ್ಲುಗುಂಡಿ ಎಲ್ಲಾ ರೀತಿಯ ಅಭಿವೃದ್ಧಿ ಹೊಂದಿದೆ.ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಹಾಗೂ ಉಪಾಧ್ಯಕ್ಷರಾಗಿ ಎಸ್ .ಕೆ. ಹನೀಫ್ ಅವರ ಅಧಿಕಾರ ಅವಧಿಯಲ್ಲಿ ಸರಿತಾ ಡಿಸೋಜ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಜಿ. ಕೆ ಹಮೀದ್ ಗೂನಡ್ಕ, ನೀರು ನೈಮಲ್ಯ ಸಮಿತಿ ಅಧ್ಯಕ್ಷರಾಗಿ ಅನುಪಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸದಸ್ಯರಾಗಿ ಸೋಮಶೇಖರ್ ಕೆ ಆರ್. ಜಗದೀಶ್ ರೈ, ಸುಂದರಿ ಮುಂಡಡ್ಕ ಅಬೂಸಾಲಿ, ವಿಜಯ ಕುಮಾರ್, ಶೌಹಾದ್, ವಿಮಲಾ ಪ್ರಸಾದ್, ರಜನಿ ಶರತ್, ಲಿಸ್ಸಿ ಮೊನಾಲಿಸಾ , ಸುಶೀಲ ಕೈಪಡ್ಕ ಹಾಗೂ ಕಾರ್ಯದರ್ಶಿ ತಿರುಮಲೇಶ್ವರ ಸಿಬ್ಬಂದಿಗಳಾದ ಗೋಪಮ್ಮ, ಭರತ್, ಮಧುರ, ನಸೀಮಾ, ಸವಿತಾ, ಹರ್ಷಿತ್, ಬೋಜಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಗಾದಿ ಹೊಸ ಚಿಂತನೆ, ಹೊಸ ಸಂಕಲ್ಪಗಳ ಆರಂಭ: ಡಾ. ಚಂದ್ರಕಾಂತ ಭಟ್
ಮಾಹೆ ಸಮರ್ಥ ಯುವ ನಾಯಕರನ್ನು ಸಿದ್ಧಗೊಳಿಸುತ್ತಿದೆ: ಅರುಂಧತಿ ಭಟ್ಟಾಚಾರ್ಯ