ಸನಾತನ ಗುರು ಪರಂಪರೆ ವಿಶ್ವಕ್ಕೆ ಮಾದರಿ

KannadaprabhaNewsNetwork |  
Published : Jul 13, 2025, 01:18 AM IST
12ುಲು1 | Kannada Prabha

ಸಾರಾಂಶ

ಮಹಾಭಾರತವನ್ನು ರಚಿಸಿದ ವೇದವ್ಯಾಸರು ಜನಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಇದರ ಅರ್ಥ ಗುರುವಿನ ಪೂಜಾ ದಿನವಾಗಿದ್ದು, ಪ್ರಥಮವಾಗಿ ಮಾತೃದೇವೋಭವ, ಪಿತೃದೇವೋಭವ ಹಾಗೂ ಆಚಾರ್ಯ ದೇವೋಭವವೆಂದು ಕರೆಯಲಾಗುತ್ತದೆ.

ಗಂಗಾವತಿ:

ಭಾರತದ ಸನಾತನ ಗುರು ಪರಂಪರೆ ಪ್ರಸ್ತುತ ದಿನಗಳಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಂಕರ ಮಠದ ಹಿರಿಯ ಸದಸ್ಯ ರಾಘವೇಂದ್ರ ಅಳವಂಡಿಕರ್ ಹೇಳಿದರು.

ನಗರದ ಶಂಕರ ಮಠದಲ್ಲಿ ಗುರುಪೂರ್ಣಿಮೆ ಆಚರಣೆಯ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಅವರು, ಮಹಾಭಾರತವನ್ನು ರಚಿಸಿದ ವೇದವ್ಯಾಸರು ಜನಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಇದರ ಅರ್ಥ ಗುರುವಿನ ಪೂಜಾ ದಿನವಾಗಿದ್ದು, ಪ್ರಥಮವಾಗಿ ಮಾತೃದೇವೋಭವ, ಪಿತೃದೇವೋಭವ ಹಾಗೂ ಆಚಾರ್ಯ ದೇವೋಭವವೆಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ವೇದಾಬಾಯಿ ಬಾಲಕೃಷ್ಣ ದೇಸಾಯಿ ಮಾತನಾಡಿ, ಹರ ಮುನಿದರೂ ಗುರು ಕಾಯುವಂತೆ ಗುರುಗಳ ಅನುಗ್ರಹವಿಲ್ಲದೆ ಶಿಷ್ಯ ಏನನ್ನೂ ಸಾಧಿಸಲಾರ. ಇದಕ್ಕೆ ಪೂರಕವೆಂಬಂತೆ ಗುರು ಶಿಷ್ಯರ ಸಂಬಂಧದ ಬಗ್ಗೆ ಹೇಳುವುದಾದರೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಒಳಗೊಂಡಂತೆ ಉನ್ನತ ಅಧ್ಯಯನವನ್ನು ಸಾಧನೆ ಮಾಡಲು ಎಲ್ಲ ಶಿಷ್ಯರಿಗೆ ಸಲ್ಲುತ್ತದೆ. ಒಟ್ಟಾರೆ ಜನ್ಮ ತಾಳಿದ ಪ್ರತಿಯೊಬ್ಬರಿಗೂ ಗುಣಮಟ್ಟದ ಸಂಸ್ಕಾರ ಪಡೆಯಲು ಗುರುಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು. ಇದಕ್ಕೂ ಪೂರ್ವದಲ್ಲಿ ಶಾರದಾ ದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ, ಗುರುಪಾದಕೆಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ, ಇತರ ಪೂಜಾ ಕಾರ್ಯಕ್ರಮವನ್ನು ಅರ್ಚಕ ಕುಮಾರ ಭಟ್‌ರಿಂದ ನಡೆಸಿದರು.ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಹಾಗೂ ಇತರೆ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಜರುಗಿದವು. ಈ ವೇಳೆ ವಿನಾಯಕ ಜೋಶಿ, ಹೊಸಳ್ಳಿ ಭೀಮಶಂಕರ, ಜಗನ್ನಾಥ ಅಳವಂಡಿಕರ, ಶ್ರೀನಿವಾಸ ಕರಮುಡಿ, ನಾಗೇಶ ಭಟ್, ವೇಣುಗೋಪಾಲ್, ಶ್ರೀನಿವಾಸ ಅಳವಂಡಿಕರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು