ಆಧುನಿಕತೆ ಆಕರ್ಷಣೆಯಲ್ಲಿ ಸನಾತನ ಧರ್ಮ ಕಡೆಗಣನೆ: ಸ್ವಾಮೀಜಿ

KannadaprabhaNewsNetwork |  
Published : May 03, 2024, 01:01 AM IST
2ಕೆಕೆಡಿಯು2. | Kannada Prabha

ಸಾರಾಂಶ

ಕಡೂರು, ಗಾಳಿ, ನೀರು, ಭೂಮಿ, ಆಕಾಶ ಎಲ್ಲದಕ್ಕೂ ಒಂದು ಧರ್ಮವಿದೆ. ಅದನ್ನು ಮೀರಿ ನಡೆದರೆ ಜೀವಸಂಕುಲ ಆಪತ್ತಿಗೀಡಾಗುತ್ತದೆ ಎಂದು ರಂಭಾಪುರಿ ಪೀಠದ ಡಾ.ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಗಾಳಿ, ನೀರು, ಭೂಮಿ, ಆಕಾಶ ಎಲ್ಲದಕ್ಕೂ ಒಂದು ಧರ್ಮವಿದೆ. ಅದನ್ನು ಮೀರಿ ನಡೆದರೆ ಜೀವಸಂಕುಲ ಆಪತ್ತಿಗೀಡಾಗುತ್ತದೆ ಎಂದು ರಂಭಾಪುರಿ ಪೀಠದ ಡಾ.ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಮಲ್ಲೇಶ್ವರ ಶ್ರೀ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಾಗರಿಕ ಸಮಾಜದಲ್ಲಿ ಆತಂಕ ಮತ್ತು ನೋವು ತಂದಿವೆ. ಆಧುನಿಕತೆ ಆಕರ್ಷಣೆಯಲ್ಲಿ ದೇವರು, ಧರ್ಮ, ಗುರುಪೀಠಗಳನ್ನು ಮರೆತು ಸನಾತನ ಧರ್ಮವನ್ನು ಮರೆತಿರುವುದನ್ನು ನೋಡುತ್ತಿದ್ದೇವೆ. ಮಾನವತೆ ದೃಷ್ಟಿಯನ್ನು ದೂರವಿಟ್ಟು ದೇವರು, ಧರ್ಮ, ಭಾಷೆ, ಜಾತಿಯ ಹೆಸರಲ್ಲಿ ಸಂಘರ್ಷ ಮಾಡುವ ಪರಿಪಾಠ ದೂರವಾಗಬೇಕು. ಹಲವಾರು ಹೆಸರಿದ್ದರೂ ದೇವರು ಒಂದೇ. ಸರ್ವ ಧರ್ಮ ಸಮನ್ವಯ ಇಂದಿನ ಅನಿವಾರ್ಯ ಅಗತ್ಯ ಜಾತಿಗಿಂತ ಧರ್ಮ ದೊಡ್ಡದು. ಅದನ್ನುಳಿಸಿದರೆ ವಿಶ್ವ ಉಳಿಯುತ್ತದೆ ಎಂದರು.

ಬೀರೂರು ರಂಭಾಪುರಿ ಪೀಠದ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವತೆ ಯನ್ನೇ ಅಣಕಿಸುವ ಅನೇಕ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ವಿಚಾರ. ಇವೆಲ್ಲಕ್ಕೂ ಅಂತ್ಯ ಕಾಣಬೇಕು ಎಂದರೆ ಪ್ರತಿಯೊಬ್ಬರೂ ಮನುಷ್ಯತ್ವದ ಗುಣ ಬೆಳೆಸಿಕೊಂಡು ಸಹೋದರತ್ವ ಭಾವನೆಯಿಂದ ಸಹಬಾಳ್ವೆ ನಡೆಸಬೇಕು. ನಮ್ಮ ಧರ್ಮ ಉಳಿಸುವಲ್ಲಿ ಪ್ರತಿಯೊಬ್ಬರೂ ಎಂತಹ ತ್ಯಾಗಕ್ಕಾದರೂ ಸಿದ್ಧರಿರಬೇಕು ಎಂದು ಕರೆ ನೀಡಿದರು. ದೇವಸ್ಥಾನ ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ, ಎಂ.ಆರ್.ಧರ್ಮಣ್ಣ, ಮಾಲತೇಶ್, ಚೇತನ್ ಕುಮಾರ್, ಪುಟ್ಟಸ್ವಾಮಿ, ಧರ್ಮದರ್ಶಿ ಮಂಡಳಿ ಸದಸ್ಯರು ಮತ್ತಿತರರು ಇದ್ದರು.

2ಕೆಕೆಡಿಯು2. ರಂಭಾಪುರಿ ಪೀಠದ ಡಾ.ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಅವರನ್ನು

ಮಲ್ಲೇಶ್ವರ ಶ್ರೀ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!