ಸೀಬರ್ಡ್ ನೌಕಾನೆಲೆ ನಿರಾಶ್ರಿತರಿಗೆ 2008-09ರಿಂದ ಬಾಕಿ ಉಳಿದಿದ್ದ 28/ಎ ಪ್ರಕರಣದಲ್ಲಿ ₹10.47 ಕೋಟಿ ಪರಿಹಾರ ಮಂಜೂರಾಗಿದೆ.
ಕಾರವಾರ: ಸೀಬರ್ಡ್ ನೌಕಾನೆಲೆ ನಿರಾಶ್ರಿತರಿಗೆ 2008-09ರಿಂದ ಬಾಕಿ ಉಳಿದಿದ್ದ 28/ಎ ಪ್ರಕರಣದಲ್ಲಿ ₹10.47 ಕೋಟಿ ಪರಿಹಾರ ಮಂಜೂರಾಗಿದೆ.
ನೌಕಾನೆಲೆ ನಿರ್ಮಾಣಕ್ಕಾಗಿ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಈ ಸ್ಥಳಾಂತರಕ್ಕೆ ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆ ವಿಳಂಬವಾಗಿತ್ತು. ಇದರಿಂದಾಗಿ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದವು. ಈ ಪ್ರಕರಣಗಳು ಹಲವು ವರ್ಷಗಳಿಂದ ಬಾಕಿ ಉಳಿದಿದ್ದು ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಿ ಆಯ್ಕೆ ಆದ ತರುವಾಯ ನೌಕಾನೆಲೆ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮತ್ತು ಸ್ಥಳೀಯರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ರಕ್ಷಣಾ ಸಚಿವರ ಗಮನಕ್ಕೆ ತಂದು, ನಿರಂತರ ಪ್ರಯತ್ನದಿಂದ 57 ಪ್ರಕರಣಗಳಿಗೆ ಪರಿಹಾರ ದೊರಕಿದೆ.
ಅಮದಳ್ಳಿ, ಕೊಡಾರ, ಹಟ್ಟಿಕೇರಿ, ಬಿಣಗ, ಚೆಂಡಿಯಾ, ಬಿರಡೆ ಈ ಗ್ರಾಮಗಳ ಕೆಲವು ನಿರಾಶ್ರಿತರ ಪ್ರಕರಣಗಳಿಗೆ ಈಗ ₹10.47 ಕೋಟಿ ಈ ಪರಿಹಾರ ನಿಧಿ ಮಂಜೂರಾಗಿದೆ.
ಸಂಕಷ್ಟದಲ್ಲಿದ್ದ ಕುಟುಂಬಗಳು ದೀರ್ಘಕಾಲದ ನಿರೀಕ್ಷೆಯಿಂದ ಮುಕ್ತಿಗೊಳ್ಳಲಿವೆ. ಕೆಲವೇ ದಿನಗಳಲ್ಲಿ ಈ 57 ಪ್ರಕರಣಗಳಿಗೆ ಪರಿಹಾರ ಅವರ ಖಾತೆಗಳಿಗೆ ಜಮಾ ಆಗಲಿದೆ, ಉಳಿದ ಪ್ರಕರಣಗಳಲ್ಲಿ ಹಂತ ಹಂತವಾಗಿ ಪರಿಹಾರವನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಆದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.